ಖಾನಾಪುರದಲ್ಲಿ ಪಾಲಿಟೆಕ್ನಿಕ್ ಆರಂಭ

KannadaprabhaNewsNetwork |  
Published : Apr 18, 2025, 12:39 AM IST
ಖಾನಾಪುರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಲೋಕಮಾನ್ಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪಂಢರಿ ಪರಬ ಮಾತನಾಡಿದರು. | Kannada Prabha

ಸಾರಾಂಶ

ಪಟ್ಟಣದ ಲೋಕಮಾನ್ಯ ಭವನ ಕಟ್ಟಡದಲ್ಲಿ ಬೆಳಗಾವಿಯ ಪ್ರತಿಷ್ಠಿತ ಲೋಕಮಾನ್ಯ ಪರಿವಾರದ ವತಿಯಿಂದ ಲೋಕಮಾನ್ಯ ಶಿಕ್ಷಣ ಸಂಸ್ಥೆಯಡಿ ಹೊಸದಾಗಿ ಪಾಲಿಟೆಕ್ನಿಕ್ ಕಾಲೇಜ್ ಆರಂಭಿಸಲಾಗುತ್ತಿದ್ದು, ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪಾಲಿಟೆಕ್ನಿಕ್ ಆರಂಭಿಸಲು ಮಾನ್ಯತೆ ಪಡೆಯಲಾಗಿದೆ ಎಂದು ಲೋಕಮಾನ್ಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪಂಢರಿ ಪರಬ ಹೇಳಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಪಟ್ಟಣದ ಲೋಕಮಾನ್ಯ ಭವನ ಕಟ್ಟಡದಲ್ಲಿ ಬೆಳಗಾವಿಯ ಪ್ರತಿಷ್ಠಿತ ಲೋಕಮಾನ್ಯ ಪರಿವಾರದ ವತಿಯಿಂದ ಲೋಕಮಾನ್ಯ ಶಿಕ್ಷಣ ಸಂಸ್ಥೆಯಡಿ ಹೊಸದಾಗಿ ಪಾಲಿಟೆಕ್ನಿಕ್ ಕಾಲೇಜ್ ಆರಂಭಿಸಲಾಗುತ್ತಿದ್ದು, ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪಾಲಿಟೆಕ್ನಿಕ್ ಆರಂಭಿಸಲು ಮಾನ್ಯತೆ ಪಡೆಯಲಾಗಿದೆ ಎಂದು ಲೋಕಮಾನ್ಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪಂಢರಿ ಪರಬ ಹೇಳಿದರು.ಪಟ್ಟಣದ ಲೋಕಮಾನ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ತಾಲೂಕಿನಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಪಾಲಿಟೆಕ್ನಿಕ್ ಕಾಲೇಜ್ ಆಗಲಿದ್ದು, ಇದೇ ಶೈಕ್ಷಣಿಕ ವರ್ಷದಿಂದ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಒದಗಿಸುವ ಉದ್ದೇಶದಿಂದ ಆರಂಭಗೊಂಡಿರುವ ಈ ಕಾಲೇಜಿಗೆ ತಾಲೂಕಿನ ಮಾಜಿ ಶಾಸಕ ವಿ.ವೈ. ಚವಾಣ ಅವರ ಹೆಸರನ್ನು ಇರಿಸಲಾಗಿದೆ. ಪಾಲಿಟೆಕ್ನಿಕ್ ಕಾಲೇಜ್‌ಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಡಿಪ್ಲೋಮಾ ತರಗತಿಗಳನ್ನು ನಡೆಸಲು ಅವಶ್ಯವಿರುವ ಸುಸಜ್ಜಿತ ತರಗತಿಗಳು, ಲ್ಯಾಬ್‌ಗಳು ಸಿದ್ಧವಾಗಿವೆ. ನುರಿತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಆರ್ಥಿಕವಾಗಿ ಅಶಕ್ತ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ವಿಶೇಷ ವಿನಾಯಿತಿಯನ್ನು ನೀಡಲಾಗುತ್ತದೆ ಎಂದು ವಿವರಿಸಿದರು.ಕಾಲೇಜಿನ ಕೋ-ಆರ್ಡಿನೇಟರ್ ಡಾ.ಡಿ.ಎನ್.ಮಿಸಾಳೆ ಮಾತನಾಡಿ, ಎಐಸಿಟಿಇ ವತಿಯಿಂದ ಎಲೆಕ್ಟ್ರಿಕಲ್ ಆ್ಯಂಡ್‌ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್‌ ಕಮೂನಿಕೇಷನ್, ಕಂಪ್ಯೂಟರ್ ಸೈನ್ಸ್, ಎ.ಐ ಆ್ಯಂಡ್ ಮಶೀನ್ ಲರ್ನಿಂಗ್ ಮತ್ತು ಮೆಕ್ಯಾಟ್ರಾನಿಕ್ಸ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅನುಮತಿ ದೊರೆತಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ಎಂದರು.ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತ್ಯವರ ನಾಯ್ಕ, ಪಿಯು ಕಾಲೇಜಿನ ಪ್ರಾಚಾರ್ಯೆ ಶರಯೂ ಕದಮ, ಮಾಜಿ ಶಾಸಕ ವಿ.ವೈ.ಚವಾಣ ಪುತ್ರ ಪ್ರಕಾಶ ಚವಾಣ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''