ದಾಳಿಂಬೆ ತೂಕದಲ್ಲಿ ಬೆಳೆಗಾರರಿಗೆ ವಂಚನೆ

KannadaprabhaNewsNetwork |  
Published : Nov 09, 2025, 02:30 AM IST
ಸಿಕೆಬಿ-3 ದಾಳಿಂಬೆ ತೂಕದಲ್ಲಿ ವ್ಯೆತ್ಯಯ ಮಾಡಲು ಎಲೆಕ್ಟ್ರಾನಿಕ್ ಸ್ಕೇಲ್ ಗೆ ರಿಮೋಟ್ ಅಳವಡಿಸಿರುವುದು.   ಸಿಕೆಬಿ- 4 ದಾಳಿಂಬೆ ತೂಕದಲ್ಲಿ ವ್ಯೆತ್ಯಯ ಮಾಡಲು ಎಲೆಕ್ಟ್ರಾನಿಕ್ ಸ್ಕೇಲ್ ಗೆ ಅಳವಡಿಸಿರುವುವ ರಿಮೋಟ್ ಅನ್ನು ಅಪರೇಟ್ ಮಾಡುತ್ತಿರುವ ಖರೀದಿದಾರನ ಕಡೆಯ ವ್ಯೆಕ್ | Kannada Prabha

ಸಾರಾಂಶ

ಮಾಲೀಕರ ಸ್ಕೇಲ್‌ನಲ್ಲಿ ತೂಕ ಹಾಕುವಾಗ ಸೆನ್ಸಾರ್ ಬಳಸಿ ಮೂರು ಕೆಜಿಯನ್ನು ಪ್ರತಿ ಕ್ರೇಟ್ ಎಗರಿಸುತ್ತಾ ಬಂದಿದ್ದಾರೆ. ಅನುಮಾನ ಬಂದ ಯುವಕರು ತಮ್ಮ ಸ್ವಂತ ತಕ್ಕಡಿಯಲ್ಲಿ ಎರಡು ಮೂರು ಕ್ರೇಟ್ ತೂಕಮಾಡಿದಾಗ ಪ್ರತಿ ಕ್ರೇಟ್‌ನಲ್ಲೂ ಮೂರು ಕೆಜಿ ಹೆಚ್ಚುವರಿ ತೂಕ ಬಂದಿದೆ. ಇದೆ ರೀತಿ ಮೋಸ ಮಾಡಿ ಒಂದು ಲೋಡ್ ಹೋಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದಾಳಿಂಬೆ ಕಟಾವು ಮಾಡಿ ಮಾರಾಟ ಮಾಡಲು ತೂಕ ಮಾಡುವ ವೇಳೆ ರೈತ ಮೋಸ ಹೋಗಿರುವ ಘಟನೆ ತಾಲೂಕು ಮಂಡಿಕಲ್ ಹೋಬಳಿ ಬೋಗಪರ್ತಿ ಗ್ರಾಮದಲ್ಲಿ ನಡೆದಿದೆ.

ಬೋಗಪರ್ತಿ ಗ್ರಾಮದ ಸೀತಾರಾಮ್ ಎಂಬ ರೈತನ ತೋಟದಲ್ಲಿ ದಾಳಿಂಬೆ ಖರೀದಿ ಮಾಡಿದ ಮುಂಬೈ ವ್ಯಾಪಾರಿಯೊಬ್ಬ ದಾಳಿಂಬೆ ಕಟಾವು ಮಾಡಿ ತೂಕ. 19 ಹಾಕಿಕೊಂಡು ಲೋಡ್ ಮಾಡುವಾಗ ತೂಕದಲ್ಲಿ ವ್ಯಾತ್ಯಾಸ ಮಾಡಿ ಟನ್ ಗಟ್ಟಲೆ ಮೋಸ ಮಾಡಿದ್ದಾನೆ.

ಯುಕರಿಂದ ಪ್ರಕರಣ ಪತ್ತೆ

ಸೀತಾರಾಮ್ ತೋಟದಲ್ಲಿ ಕಟಾವು ಮಾಡಿದ ದಾಳಿಂಬೆ ತೂಕಹಾಕುವಾಗ ರಿಮೋಟ್ ಬಳಿಸಿ ಪ್ರತಿ 20 ಕೆಜಿ ಕ್ರೇಟ್‌ಗೂ ಎರಡರಿಂದ ಮೂರು ಕೆಜಿ ಹೆಚ್ಚುವರಿಯಾಗಿ ದಾಳಿಂಬೆ ಕದ್ದಿದ್ದಾರೆ. ಈ ದಾಳಿಂಬೆ ಕಳ್ಳರು ರಾತ್ರಿ ವೇಳೆ ಬಂದಿಲ್ಲ. ಯಾರ ಕಣ್ಣಿಗೂ ಕಾಣದೆ ಬಂದು ಕದ್ದಿದ್ದಲ್ಲ. ಕಣ್ಣಮುಂದೆಯೆ ಕೆಜಿಗಟ್ಟಲೆ ತೂಕದಲ್ಲಿ ವಂಚಿಸಿ ಲಕ್ಷಾಂತರ ರು. ಮೋಸ ಮಾಡಿರುವುದನ್ನ ಅದೇ ಗ್ರಾಮದ ಯುವಕರು ಕಂಡು ಹಿಡಿದಿದ್ದಾರೆ.

ದಾಳಿಬೆ ತುಂಬಿದ್ದ ಲಾರಿಗೆ ತಡೆ

ಮಾಲೀಕರ ಸ್ಕೇಲ್‌ನಲ್ಲಿ ತೂಕ ಹಾಕುವಾಗ ಸೆನ್ಸಾರ್ ಬಳಸಿ ಮೂರು ಕೆಜಿಯನ್ನು ಪ್ರತಿ ಕ್ರೇಟ್ ಎಗರಿಸುತ್ತಾ ಬಂದಿದ್ದಾರೆ. ಅನುಮಾನ ಬಂದ ಯುವಕರು ತಮ್ಮ ಸ್ವಂತ ತಕ್ಕಡಿಯಲ್ಲಿ ಎರಡು ಮೂರು ಕ್ರೇಟ್ ತೂಕಮಾಡಿದಾಗ ಪ್ರತಿ ಕ್ರೇಟ್‌ನಲ್ಲೂ ಮೂರು ಕೆಜಿ ಹೆಚ್ಚುವರಿ ತೂಕ ಬಂದಿದೆ. ಇದೆ ರೀತಿ ಮೋಸ ಮಾಡಿ ಒಂದು ಲೋಡ್ ಹೋಗಿದೆ. ಎರಡು ಲೋಡ್ ತುಂಬುವಾಗ ಇನ್ನೇನು ಎರಡು ಮೂರು ಕ್ವಿಂಟಲ್ ತೂಕ ಮಾಡುವಾಗ ತೂಕದ ವಂಚನೆಯನ್ನು ಕಂಡು ಹಿಡಿದ ಗ್ರಾಮದ ಯುವಕರು ಲೋಡ್ ಅನ್ನು ತಡೆದಿದ್ದಾರೆ

ಇವರು ಇದೇ ರೀತಿ ಎನ್ನೆಷ್ಟು ರೈತರಿಗೆ ಮೋಸ ಮಾಡಿದ್ದಾರೊ ಗೊತ್ತಿಲ್ಲದೆ ತೆರನಾಗಿ ಯಾವ ಯಾವ ಊರುಗಳಲ್ಲಿ ಮೋಸ ಮಾಡಿದ್ದಾರೋ ಗೊತ್ತಿಲ್ಲ. ಮಾಲೀಕರು ತೂಕದ ವೇಳೆ ಹಾಜರಿದ್ದರೆ ಒಂದು ತೂಕ. ಅವರಿಲ್ಲ ಎಂದ್ರೆ ಬೇರೆ ತೆರನಾದ ತೂಕ ಹಾಕಿದ್ದು ಹೆಚ್ವುವರಿ ದಾಳಿಂಬೆಯ ವೆಚ್ವ ಕಟ್ಟಿಕೊಡುವರೆಗೂ ಲಾರಿಯನ್ನ ಹೊರಗೆ ಬಿಡದೆ ನಿಲ್ಲಿಸಿದ್ದಾರೆ.ರೈತರ ಶ್ರಮಕ್ಕೆ ಬೆಲೆ ಇಲ್ಲ

ಒಟ್ನಲ್ಲಿ ಬೆವರು ಸುರಿಸಿ ಶ್ರಮವಹಿಸಿ ಭೂಮಿಯಲ್ಲೆ ಕಷ್ಟಪಟ್ಟು ಒಂದಿಷ್ಟು ಹಣ ಸಂಪಾದನೆ ಮಾಡಿಕೊಂಡು ಸ್ವಾಭಿಮಾನಿ ಬದುಕು ಸಾಗಿಸುವ ಕನಸು ಕಂಡಿರುವ ರೈತರಿಗೆ ಖರೀದಿಸಿದ ವ್ಯಾಪಾರಸ್ಥರಿಂದಲೂ ಈ ರೀತಿಯ ಮೋಸ ಮಾಡ್ತಾರೆ ಅಂದ್ರೆ ಇಂತವರನ್ನ ಹಿಡಿದು ಪೊಲೀಸರೆ ಒಪ್ಪಿಸಿ, ಮತ್ತೊಮ್ಮೆ ಈ ರೀತಿ ಮೋಸ ಮಾಡದಂತೆ ತಡೆಯ ಬೇಕಾಗಿದೆ.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ