ಪೊನ್ನಪ್ಪಸಂತೆ-ಬಾಳೆಲೆ ರಸ್ತೆ ಕಾಮಗಾರಿಗೆ ಪೊನ್ನಣ್ಣ ಭೂಮಿ ಪೂಜೆ

KannadaprabhaNewsNetwork |  
Published : Jun 21, 2026, 02:45 AM IST
ಶಾಸಕರು ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆಯಿಂದ ಬಾಳೆಲೆಗೆ ಹೋಗುವ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ಶುಕ್ರವಾರ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆಯಿಂದ ಬಾಳೆಲೆಗೆ ಹೋಗುವ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ಶುಕ್ರವಾರ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನೆರವೇರಿಸಿದರು.

ರು. 2 ಕೋಟಿ 30 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸದ್ಯದಲ್ಲೇ ಈ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕರು ತಿಳಿಸಿದರು.ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷ ಚೆಟ್ಟಿಮಾಡ ರಾಬಿನ್, ಹಿರಿಯರು ಮೂಕಳೇರ ಕುಶಾಲಪ್ಪ, ಜಿಮ್ಮಿ ಅಯ್ಯಣ್ಣ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಂಡ ಧ್ಯಾನ್ ದೇವಯ್ಯ, ಕೊಣಿಯಂಡ ಸೋಮಣ್ಣ, ಬಾಳೆಲೆ ವಲಯ ಅಧ್ಯಕ್ಷ ಕೋದಂಡ ಸೋಮಣ್ಣ, ನಲ್ಲೂರು ಬೂತ್ ಅಧ್ಯಕ್ಷ ಬೋಡಂಗಡ ಅಶೋಕ್, ಬೂತ್ ಅಧ್ಯಕ್ಷ ಪುಳ್ಳಂಗಡ ದಿನೇಶ್, ಅರಮಾಣಮಾಡ ಕುಶ, ಪಕ್ಷದ ಮುಖಂಡರಾದ ವಿನು ಉತ್ತಪ್ಪ, ಮಚ್ಚಮಾಡ ಮನು, ಅಣ್ಣಳಮಾಡ ಹರೀಶ್, ಗಿರೀಶ್, ಅಜ್ಜಿಕುಟ್ಟಿರ ಪೊನ್ನಪ್ಪ, ಕೇಚಮಾಡ ಸಿದ್ದು ನಾಚಪ್ಪ, ಕುಂಡಚ್ಚಿರ ಮಂಜು ದೇವಯ್ಯ, ತಾಣಚ್ಚಿರ ನಿಖಿಲ್ ಸೋಮಣ್ಣ, ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆನರಾ ಸಹಯೋಗದಲ್ಲಿ ನೂರರಷ್ಟು ಗುರಿ ಸಾಧಿಸಿದ ಗ್ರಾಪಂಗಳು
ಜಿಲ್ಲೆಯಲ್ಲಿ ಹೊಸ ನಾಯಕತ್ವ ಕಟ್ಟೋಣ ಎಂದ ಶಿವಲಿಂಗೇಗೌಡ