ಶಾಸಕ ಪೊನ್ನಣ್ಣಗಾಗಿ ಶ್ರೀ ಭಗಂಡೇಶ್ವರ ದೇವಸ್ಥಾನದಲ್ಲಿ ಪೂಜೆ

KannadaprabhaNewsNetwork | Published : Jun 25, 2024 12:37 AM

ಸಾರಾಂಶ

. ಶಾಸಕ ಎ.ಎಸ್. ಪೊನ್ನಣ್ಣ ಅವರ ಶ್ರೇಯೋಭಿವೃದ್ಧಿಗೆ ವಿವಿಧ ದೇವಸ್ಥಾನಗಳಲ್ಲಿ ಕಾಂಗ್ರೆಸ್‌ ಮುಖಂಡರು ವಿಶೇಷ ಪ್ರಾರ್ಥನೆ ನಡೆಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಕೆಟ್ಟ ದೃಷ್ಟಿ ನಿವಾರಿಸಲು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್‌ ಮುಂದಾಳತ್ವದಲ್ಲಿ ಸೋಮವಾರ ವಿಶೇಷ ಪೂಜೆ ನಡೆಸಲಾಯಿತು. ಶಾಸಕ ಎ.ಎಸ್. ಪೊನ್ನಣ್ಣ ಅವರ ಶ್ರೇಯೋಭಿವೃದ್ಧಿಗೆ ನೆರವಂಡ ಉಮೇಶ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ತೀರ್ಥಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಭಾಗಮಂಡಲ ವಲಯ ಅಧ್ಯಕ್ಷ ಕೋಳಿಬೈಲ್ ವೆಂಕಟೇಶ್, ಡಿಸಿಸಿ ಸದಸ್ಯ ಸುನಿಲ್ ಪತ್ರ, ಅಕ್ರಮ ಸಕ್ರಮ ಸಮಿತಿ ಮಡಿಕೇರಿ ತಾಲೂಕು ಅಧ್ಯಕ್ಷ ನೆರವಂಡ ಉಮೇಶ್, ನಾಪೋಕ್ಲು ವಲಯ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ, ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ ಬೇಬ, ಭಾಗಮಂಡಲ ಮಾಜಿ ವಲಯ ಅಧ್ಯಕ್ಷ ದೇವಂಗೋಡಿ ಹರ್ಷ, ಚೆಯಂಡಾಣೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ವಿನೋದ್ ಕೋಡಿರ, ಚೇರಂಬಾಣೆ ಗ್ರಾಮ ಪಂಚಾಯಿತಿ ಸದಸ್ಯೆ ಬಿಂದು, ಕೊಟ್ಟುಕತ್ತಿರ ದಿವ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿತೈಷಿಗಳು, ನಾಯಕರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.ಶಾಸಕ ಪೊನ್ನಣ್ಣ ಯಶಸ್ಸಿಗಾಗಿ ಕಕ್ಕಬೆ ಶ್ರೀ ಪಾಡಿ ಇಗ್ಗುತಪ್ಪ ದೇವಳದಲ್ಲಿ ಪೂಜೆ

ಕಕ್ಕಬೆ ವಲಯ ಕಾಂಗ್ರೆಸ್ ವತಿಯಿಂದ ಕಕ್ಕಬೆ ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ರಕ್ಷಣೆ, ಆಯುಷ್ಯ ಮತ್ತು ಯಶಸ್ಸನ್ನು ಕೋರಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು.ಈ ಸಂದರ್ಭ ಡಿಸಿಸಿ ಮೆಂಬರ್ ಬಾಚಮಂಡ ಲವ ಚಿನ್ನಪ್ಪ, ಗ್ರಾಮ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕಲಿಯಂಡ ಸಂಪನ್ ಅಯ್ಯಪ್ಪ, ಬಾಚಮಂಡ ರಾಜ ಪೂವಣ್ಣ, ಉದಿಯoಡ ಸುಭಾಷ್, ಪೊನ್ನೋಲ್ತಂಡ ರಘು ಚಿನ್ನಪ್ಪ, ಬಾಚಮಂಡ ಭರತ್, ಬಡಕಡ ದೀನ ಪುವಯ್ಯ, ಪುಂಗೆರ ಉಲ್ಲಾಸ್, ಚೊವಂಡ ಜೋಯಪ್ಪ ಇತರ ಉಪಸ್ಥಿತರಿದ್ದರು.

Share this article