ಕೆ.ಎನ್‌.ರಾಜಣ್ಣ ಹುಟ್ಟುಹಬ್ಬದ ಕಾರ್ಯಕ್ರಮ ಯಶಸ್ವಿಗೆ ಪೂಜೆ

KannadaprabhaNewsNetwork |  
Published : Jun 21, 2025, 12:49 AM IST
ಮಧುಗಿರಿಯ ಶಕ್ತಿದೇವತೆ ದಂಡಿನಮಾರಮ್ಮದೇವಿಗೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಹುಟ್ಟುಹಬ್ಬ ಯಶಸ್ವಿಯಾಗಲೇಂದು ಕೋರಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌  ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಸಹಕಾರ ಸಚಿವ ಕೆ.ಎನ್‌.ರಾಜಣ್ಣನವರ ಹುಟ್ಟುಹಬ್ಬಕ್ಕೆ ಮಧುಗಿರಿ ಕ್ಷೇತ್ರದಿಂದ ಸುಮಾರು 25 ಸಾವಿರಕ್ಕೂ ಅಧಿಕ ಜನರು ಆಗಮಿಸಲಿದ್ದು, ಜನರಿಗೆ ಹೋಗಿ ಬರಲು ಬಸ್‌ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲದೇ ಕಾರು, ಟ್ಯಾಕ್ಸಿಗಳನ್ನೂ ಮಾಡಲಾಗಿದೆ .

ಕನ್ನಡಪ್ರಭ ವಾರ್ತೆ ಮಧುಗಿರಿ

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ 75ನೇ ವರ್ಷದ ಜನ್ಮದಿನದ ಅಮೃತ ಮಹೋತ್ಸವ ಹಾಗೂ ಅವರು ರಾಜಕೀಯ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನಡೆದು ಬಂದ ದಾರಿ ಕುರಿತ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ ಜೂ.21ರಂದು ತುಮಕೂರಿನ ಸರ್ಕಾರಿ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಈ ಸಮಾರಂಭಕ್ಕೆ ಮಧುಗಿರಿ ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಧುಗಿರಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮಧುಗಿರಿ ಪಟ್ಟಣದ ಶಕ್ತಿ ದೇವತೆ ದಂಡಿಮಾರಮ್ಮ ದೇವಿಗೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎನ್ ಆರ್ ರಾಜಕೀಯ ಬದುಕು, ಆರೋಗ್ಯ ಇನ್ನೂ ಚನ್ನಾಗಿರಬೇಕು.ಅವರು ಮುಂದಿನ ದಿನಗಳಲ್ಲಿ ರಾಜ್ಯದ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದು, ಸಹಕಾರಿ ಕ್ಷೇತ್ರದಲ್ಲಿ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂಬುದು ಅವರ ಅಭಿನಂದನಾ ಗ್ರಂಥದಲ್ಲಿ ಅಡಕವಾಗಿದೆ. ಇಡೀ ರಾಜ್ಯದಲ್ಲಿ ಈ ರೀತಿಯ ಅಭಿಮಾನಿಗಳು ಯಾವುದೇ ಲೀಡರ್‌ಗೆ ಇರಲು ಸಾಧ್ಯವಿಲ್ಲ, ಸಹಕಾರಿ ಜತೆಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ, ಹಾಗಾಗಿ ಅವರಿಗೆ ಶಿಕ್ಷಣ ಖಾತೆ ನೀಡಿದರೆ ಒಳಿತು. ರಾಜಣ್ಣ ಎಂದರೆ ಒಂದು ದೊಡ್ಡ ಆಲದ ಮರವಿದ್ದಂತೆ, ಅದರ ಕೆಳಗೆ ಲಕ್ಷಾಂತರ ಕುಟುಂಬಗಳು ,ಅಭಿಮಾನಿಗಳು ವಾಸಿಸುತ್ತಿದ್ದು, ಅವರಿಗೆ ಆ ಭಗವಂತ ಇನ್ನೂ ಹೆಚ್ಚಿನ ಆಯೂಷ್ಯ ಕೊಟ್ಟು ಕಾಪಾಡಲಿ. ಜನರ ಸೇವೆ ಮಾಡುವ ಶಕ್ತಿ ಸಾಮರ್ಥ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ ಮಾತನಾಡಿ, ಸಹಕಾರ ಸಚಿವ ಕೆ.ಎನ್‌.ರಾಜಣ್ಣನವರ ಹುಟ್ಟುಹಬ್ಬಕ್ಕೆ ಮಧುಗಿರಿ ಕ್ಷೇತ್ರದಿಂದ ಸುಮಾರು 25 ಸಾವಿರಕ್ಕೂ ಅಧಿಕ ಜನರು ಆಗಮಿಸಲಿದ್ದು, ಜನರಿಗೆ ಹೋಗಿ ಬರಲು ಬಸ್‌ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲದೇ ಕಾರು, ಟ್ಯಾಕ್ಸಿಗಳನ್ನೂ ಮಾಡಲಾಗಿದೆ ಎಂದರು.

ಪುರಸಭೆ ಸದಸ್ಯರಾದ ಮಂಜುನಾಥ್‌ ಆಚಾರ್‌, ಎಂ.ಶ್ರೀಧರ್, ನಟರಾಜು ಗುಂಡಣ್ಣ, ಮಾಜಿ ಸದಸ್ಯ ಎಂ.ವಿ.ಮಂಜೂಸ್‌, ಮುಖಂಡರಾದ ಎಸ್‌ಬಿಟಿ ರಾಮು, ಶಿವಣ್ಣ, ಎಂ.ಜಿ.ರಾಮು, ಆನಂದ್‌, ವೈನ್ಸ್ ಚಿಕ್ಕಣ್ಣ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ