ಕನ್ನಡಪ್ರಭ ವಾರ್ತೆ ಟೇಕಲ್ಕಳಪೆ ಗುಣಮಟ್ಟದ ಟೊಮೆಟೊ ಬಿತ್ತನೆ ಬೀಜದ ಪರಿಣಾಮ ರೈತನೊಬ್ಬ ಬೆಳೆದ ಟೊಮೆಟೊವನ್ನು ಖರೀದಿದಾರರು ತಿರಸ್ಕರಿಸಿದ್ದು, ರೈತರು ಕಂಗಾಲಾಗಿರುವ ಘಟನೆ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕಟರಾಜನಹಳ್ಳಿಯನ್ನು ನಡೆದಿದೆ.
ಈ ಕುರಿತು ಆತಂಕ ವ್ಯಕ್ತಪಡಿಸಿದ ರೈತ ಸತೀಶ್ ಎಂಬುವರು, ತಾವು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಟೊಮೆಟೊ ಬೆಳೆದ ಬಾಕ್ಸ್‌ಗಳನ್ನು ಸೋಮವಾರ ಮಂಡಿಗೆ ಹಾಕಲು ಫೋನ್ ಮಾಡಿದಾಗ ಮಂಡಿಯವರು ಈ ಟೊಮೆಟೊ ತಳಿ ಸರಿಯಿಲ್ಲವೆಂದು ಇದನ್ನು ಯಾರು ಖರೀದಿಸುವವರು ಇಲ್ಲವೆಂದು ಹೇಳುತ್ತಿದ್ದಾರೆ ಎಂದರು.
ಕಂಪನಿ ಪ್ರತಿಕ್ರಿಯಿಸುತ್ತಿಲ್ಲಟೊಮೆಟೊ ನೋಡಲು ಸುಂದರವಾಗಿ ಕಾಣಿಸಿದರು ಅದರ ಗುಣಮಟ್ಟ ಆಕಾರ ಸಾಮಾನ್ಯ ಟೊಮೆಟೊದಂತೆ ಇಲ್ಲ. ಮೂರು ತಿಂಗಳ ಹಿಂದೆ ಆದಿರಾಜ್ ಎಂಬ ಕಂಪನಿಯಿಂದ ಬೀಜ ತಂದು ಬಿತ್ತನೆ ಮಾಡಲಾಗಿತ್ತು. ಈಗ ಬೆಳೆ ಬಂದಿದೆ ಆದರೆ ಖರೀದಿಸುವವೇ ಇಲ್ಲ. ಈ ಬಗ್ಗೆ ಕಂಪನಿಯವರಿಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.ಈ ಬಗ್ಗೆ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು ನ್ಯಾಯ ಒದಗಿಸುವಂತೆ ಕೋರಿದ್ದೇನೆ. ಮೂರು ತಿಂಗಳು ಕಷ್ಟಪಟ್ಟು ಬೆಳೆದ ಬೆಳೆ ಕೇಳುವವರೇ ಇಲ್ಲ. ಹಬ್ಬದ ಸಮಯಲ್ಲಿ ಉತ್ತಮ ದರ ನಿರೀಕ್ಷಿಸಿದ್ದ ತಮಗೆ ಭಾರಿ ಅನ್ಯಾಯ ಮತ್ತು ನಷ್ಟವಾಗಿದೆ ಎಂದರು. ನ್ಯಾಯ ಒದಗಿಸುವ ಭರವಸೆ