ಕೂಡ್ಲಿಗಿ: ಅಲ್ಪಸಂಖ್ಯಾತರ ಮತಗಳು ಬೇಕು. ಆದರೆ ಅವರ ಪರಿಗಣನೆ ಮಾತ್ರ ಬೇಡ. ಅವರನ್ನು ಸುಲಭವಾಗಿ ಮೂರ್ಖರನ್ನಾಗಿ ಮಾಡಬಹುದು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿದುಕೊಂಡಿದ್ದಾರೆ. ಕೂಡ್ಲಿಗಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಆ.19ರಂದು ನಡೆಯಲಿದ್ದು, ಈ ಬಗ್ಗೆ ನನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ ಕಡೆಗಣಿಸಿರುವುದು ಬೇಸರ ತಂದಿದೆ ಎಂದು ಕೂಡ್ಲಿಗಿ ಮಾಜಿ ಸಚಿವ ಎನ್.ಎಂ.ನಬಿ ದೂರಿದರು.ಅವರು ಭಾನುವಾರ ಸಂಜೆ ಪಟ್ಟಣದ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೂಡ್ಲಿಗಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಬಗ್ಗೆ ಚರ್ಚಿಸಲು ಶಾಸಕರು ನಮ್ಮ ನಿವಾಸಕ್ಕೆ ಆ.12ರಂದು ಬಂದಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಗ್ಗೆ ನಾನು ಕೆಲವು ಸಲಹೆಗಳನ್ನು ನೀಡಿದ್ದೆ. ಆದರೆ ಇಲ್ಲಿವರೆಗೂ ನನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ ಇರುವುದು ಬೇಸರ ತಂದಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ಎನ್.ಎಂ. ನೂರ್ ಆಹಮದ್ ಹಾಗೂ ಅವರ ಬೆಂಬಲಿಗರು ಇದ್ದರು.