ಮತ ಕಳ್ಳತನ ವಿರೋಧಿಸಿ ಪೋಸ್ಟರ್‌ ಅಂಟಿಸಿ ಪ್ರತಿಭಟನೆ

KannadaprabhaNewsNetwork |  
Published : Aug 31, 2025, 02:00 AM IST
ಪೋಟೋಕೇಂದ್ರ ಸರ್ಕಾರದ ಮತ ಕಳ್ಳತನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಅಂಟಿಸಿ ಪ್ರತಿಭಟಿಸಿದರು.   | Kannada Prabha

ಸಾರಾಂಶ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೆಲವು ಮತ ಕ್ಷೇತ್ರದಲ್ಲಿ ಒಬ್ಬ ಮತದಾರನಿಗೆ 100 ಮತ ಹಾಕಲು ಅನುವು ಮಾಡಿಕೊಟ್ಟಿದೆ. ಇಂತಹದ್ದೆ ಪ್ರಕರಣ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿರುವುದನ್ನು ರಾಹುಲ್ ಗಾಂಧಿ ಅವರು ಬಯಲು ಮಾಡಿದ್ದಾರೆ.

ಕನಕಗಿರಿ:

ಮತ ಕಳ್ಳತನ ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಶನಿವಾರ ಪೋಸ್ಟರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೆಲವು ಮತ ಕ್ಷೇತ್ರದಲ್ಲಿ ಒಬ್ಬ ಮತದಾರನಿಗೆ 100 ಮತ ಹಾಕಲು ಅನುವು ಮಾಡಿಕೊಟ್ಟಿದೆ. ಇಂತಹದ್ದೆ ಪ್ರಕರಣ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿರುವುದನ್ನು ರಾಹುಲ್ ಗಾಂಧಿ ಅವರು ಬಯಲು ಮಾಡಿದ್ದಾರೆ. ಬಿಜೆಪಿಗೆ ತತ್ವ-ಸಿದ್ಧಾಂತ ಇದ್ದರೆ ಕೂಡಲೇ ಸರ್ಕಾರ ವಿಸರ್ಜನೆಗೊಳಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.

ಇದಕ್ಕೂ ಮೊದಲು ಸಚಿವ ಶಿವರಾಜ ತಂಗಡಗಿ ನಿವಾಸದಿಂದ ವಾಲ್ಮೀಕಿ ವೃತ್ತ, ಬಸ್ ನಿಲ್ದಾಣದ ವರೆಗೆ ಮೆರವಣಿಗೆ ನಡೆಸಿ ಮತ ಕಳ್ಳತನ ಪೋಸ್ಟರ್‌ ಅಂಟಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಅನಿಲ ಬಿಜ್ಜಳ, ಪ್ರಮುಖರಾದ ಶರಣಪ್ಪ ಭತ್ತದ, ವೀರೇಶ ಸಮಗಂಡಿ, ಹೊನ್ನೂರುಸಾಬ್‌ ಉಪ್ಪು, ರಾಮಣ್ಣ ಆಗೋಲಿ, ಮಂಜು ಯಾದವ, ಶರಣೇಗೌಡ ಹುಲಸನಹಟ್ಟಿ, ನಾಗೇಶ ಬಡಿಗೇರ, ನಾಗಲಿಂಗಪ್ಪ ಬೈಲಕ್ಕಂಪುರ, ಗಂಗಾಧರ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ