ಆಲೂ ಉತ್ತಮ ಫಸಲು ಬಂದಿದ್ದರೂ ಬೆಲೆ ಕುಸಿತ

KannadaprabhaNewsNetwork |  
Published : Mar 25, 2025, 12:47 AM IST
24ಜಿಯುಡಿ2 | Kannada Prabha

ಸಾರಾಂಶ

ತಾಲ್ಲೂಕಿನಲ್ಲಿ ಸುಮಾರು 550-600 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಬೆಳೆ ಬಂದಿದ್ದರೂ, ಅದಕ್ಕೆ ಸೂಕ್ತ ಬೆಲೆ ಮಾತ್ರ ಸಿಗುತ್ತಿಲ್ಲ. ನವೆಂಬರ್ ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ ₹2500-3000 ಕೊಟ್ಟು ಖರೀದಿಸಿ ಬಿತ್ತನೆ ಮಾಡಿದ್ದ ರೈತರು, ಇದೀಗ ಒಂದು ಮೂಟೆ ಆಲೂಗಡ್ಡೆಯನ್ನು ಕೇವಲ ₹400 ರಿಂದ ₹500ಕ್ಕೆ ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯಲಾದ ಆಲೂಗಡ್ಡೆ ಬೆಳೆಗೆ ಸೂಕ್ತ ಬೆಲೆ ಹಾಗೂ ಖರೀದಿಸುವವರಿಲ್ಲದೆ ತೋಟಗಳಲ್ಲಿ ಬಿದ್ದಿರುವ ರಾಶಿ ರಾಶಿ ಆಲೂಗಡ್ಡೆ ಫಸಲು ಬಿಸಿಲನಿನಿಂದಾಗಿ ಕೊಳೆಯುವಂತಾಗಿದೆ. ಇದರಿಂದಾಗಿ ಬಿತ್ತನೆ ಮಾಡಿದ ಬೆಳೆಗೆ ಹಾಕಿದ ಬಂಡವಾಳವೂ ವಾಪಸ್ ಬಾರದೆ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 550-600 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಬೆಳೆ ಬಂದಿದ್ದರೂ, ಅದಕ್ಕೆ ಸೂಕ್ತ ಬೆಲೆ ಮಾತ್ರ ಸಿಗುತ್ತಿಲ್ಲ. ನವೆಂಬರ್ ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ ₹2500-3000 ಕೊಟ್ಟು ಖರೀದಿಸಿ ಬಿತ್ತನೆ ಮಾಡಿದ್ದ ರೈತರು, ಇದೀಗ ಒಂದು ಮೂಟೆ ಆಲೂಗಡ್ಡೆಯನ್ನು ಕೇವಲ ₹400 ರಿಂದ ₹500ಕ್ಕೆ ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ರೈತರಿಗೆ ಅಸಲೂ ಸಿಗುತ್ತಿಲ್ಲ

5 ಎಕರೆ ಭೂಮಿಯ ಪೈಕಿ ಮೂರು ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದೇನೆ. ಇದುವರೆಗೂ ಸುಮಾರು ₹4 ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿದ್ದೇನೆ. ಈಗ ಆಲೂಗಡ್ಡೆ ಅಗೆಯುವುದಕ್ಕೆ ಎಕರೆಗೆ ₹25,000 ಕೂಲಿ ಕೊಡಬೇಕು. ವ್ಯಾಪಾರಸ್ಥರಿಗೆ ಮಾರಾಟ ಮಾಡಲು ನಾವೇ ಚೀಲ ತಂದು, ಗಡ್ಡೆ ತುಂಬಿಸಿಕೊಟ್ಟರೆ ₹400 ರೂಪಾಯಿಗೆ ಖರೀದಿ ಮಾಡಿಕೊಂಡು ಹೋಗುತ್ತಾರೆ. ಒಂದು ಚೀಲಕ್ಕೆ ಹೆಚ್ಚುವರಿ ₹100 ಖರ್ಚಾಗುತ್ತದೆ ಎಂದು ರೈತರೊಬ್ಬರು ತಿಳಿಸಿದರು.

ಭಿತ್ತನೆ ಬೀಜಗಳ ಬಗ್ಗೆ ಸರ್ಕಾರಗಳು ಗಮನ ಹರಿಸಬೇಕು, ನಿಯಂತ್ರಣಕ್ಕೆ ತೆಗೆಕೊಳ್ಳಬೇಕು, ರೈತರಿಗೆ ಸಬ್ಸಿಡಿ ಧರದಲ್ಲಿ ಭಿತ್ತನೆ ಬೀಜಗಳನ್ನು ಪೂರೈಕೆ ಮಾಡಬೇಕು, ಸಂಬಂಧಿಸಿದ ರಾಸಾಯಿನಿಕ ಗೊಬ್ಬರ, ಪರಿಕರಗಳನ್ನು ರೈತರಿಗೆ ಒದಗಿಸಬೇಕು. ಆದರೆ ಈಗಿನ ಸರ್ಕಾರಗಳು ಭಿತ್ತನೆ ಬೀಜಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ.

ಆಲೂ ರೈತರಿಗೆ ಸರ್ಕಾರ ನೆರವಾಲಿ

ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರೈತರಿಗೆ ಯಾವ ರೀತಿಯಲ್ಲಿ ಸಹಾಯಮಾಡಬೇಕೆಂದು ಚಿಂತನೆ ಮಾಡಿ, ರೈತರಿಗೆ ಬೆನ್ನೆಲುಬಾಗಿ, ಬೆಂಬಲವಾಗಿ ನಿಲ್ಲಬೇಕು, ನಿಲ್ಲದಿದ್ದರೆ ರೈತರು ಕೃಷಿಕರಾಗಿ ನಿಲ್ಲುವುದಿಲ್ಲ, ರೈತರು ಉಳಿಸುವುದಿಲ್ಲ, ಕೊನೆಯ ದಾರಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಈಗಾಗಲೇ ಅನೇಕ ರೈತರು ಆದಾರಿಯನ್ನು ಹಿಡಿದಿದ್ದಾರೆ. ಇದು ಮುಂದಿನ ಜನಾಂಗಕ್ಕೆ ಶಾಪವಾಗಿ ಪರಿಣಮಿಸುತ್ತದೆ. ಇದನ್ನು ತಡೆಗಟ್ಟಬೇಕು ಹಾಗೇ ಆಲೂಗಡ್ಡೆ ಬೆಲೆಗೆ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ರೈತರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''