ವಿದ್ಯುತ್‌ ಅವಘಡ: ಕಬ್ಬು, ಜೋಳ, ಸಜ್ಜೆ ನಾಶ

KannadaprabhaNewsNetwork |  
Published : Feb 23, 2024, 01:50 AM IST
ಸಸಸ | Kannada Prabha

ಸಾರಾಂಶ

ಪಟ್ಟಣದ ರೈತರ ಜಮೀನೊಂದರಲ್ಲಿ ನಡೆದ ಸರಣಿ ವಿದ್ಯುತ್ ಅವಘಡದಿಂದ ಅಪಾರ ಕಬ್ಬು, ಜೋಳ, ಸಜ್ಜೆ ಇನ್ನಿತರ ದವಸ ಧಾನ್ಯಗಳು ಸುಟ್ಟು ಕರಕಲಾದ ಘಟನೆ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣದ ರೈತರ ಜಮೀನೊಂದರಲ್ಲಿ ನಡೆದ ಸರಣಿ ವಿದ್ಯುತ್ ಅವಘಡದಿಂದ ಅಪಾರ ಕಬ್ಬು, ಜೋಳ, ಸಜ್ಜೆ ಇನ್ನಿತರ ದವಸ ಧಾನ್ಯಗಳು ಸುಟ್ಟು ಕರಕಲಾದ ಘಟನೆ ಗುರುವಾರ ನಡೆದಿದೆ.

ಪಟ್ಟಣದ ರೈತ ಶಿವಾನಂದ ಗುರಪ್ಪ ವಾಲಿ ಎಂಬುವರೇ ಹಾನಿ ಅನುಭವಿಸಿ ರೈತರು. ಸುಮಾರು 13 ಎಕರೆ ಕಟಾವ್ ಕಬ್ಬು ಸುಟ್ಟು ಕರಕಲಾಗಿದೆ, ಇದರೊಟ್ಟಿಗೆ ಪಕ್ಕದಲ್ಲೇ ಸಂಗ್ರಹಿಸಿದ್ದ 6 ಟ್ರ್ಯಾಕ್ಟರ್ ಗೊಬ್ಬರ, 2 ಟ್ರ್ಯಾಕ್ಟರ್ ಕುಣಿಕೆ, 15 ಚೀಲ ಜೋಳ, 15 ಚೀಲ ಸಜ್ಜೆ ಹಾಗೂ ಸುಮಾರು 25 ಪೈಪುಗಳು ಸಮೇತ ಸುಟ್ಟು ಕರಕಲಾಗಿವೆ.

ಬರಗಾಲದಿಂದ ತತ್ತರಿಸಿದ್ದ ರೈತ ಶಿವಾನಂದ ವಾಲಿ ಜಮೀನಲ್ಲಿ ಬಂದಷ್ಟು ಬರಲಿ ಎನ್ನುವ ಉದ್ದೇಶದಿಂದ ಈಚೆಗಷ್ಟೇ ರಾಶಿ ಮಾಡಿ ಮಾರಾಟ ಮಾಡಲು ಒಂದೆಡೆ ಸಂಗ್ರಹಿಸಿದ್ದರು. ಮತ್ತೊಂದೆದೆ ಕಟಾವಿಗೆ ಬಂದಿದ್ದ ಕಬ್ಬು ಸಹ ಲಕ್ಷಗಟ್ಟಲೇ ಹಾನಿಯಾಗಿದೆ. ಸಾಲ ಮಾಡಿ ಕಂಗೆಟ್ಟಿದ್ದ ರೈತನಿಗೆ ಸದ್ಯ ವಿದ್ಯುತ್ ಅಗ್ನಿ ಅವಘಡ ಭಾರೀ ಪೆಟ್ಟು ನೀಡಿದೆ.

ವಿಷಯ ತಿಳಿದು ಮುದ್ದೇಬಿಹಾಳದ ಅಗ್ನಿಶಾಮಕದ ಅಧಿಕಾರಿ ರಮೇಶ ಚಲ್ಲನವರ್, ಯಮನಪ್ಪ ಪೋಲೇಶಿ, ಚಂದ್ರಶೇಖರ್ ಮಾದರ ಹಾಗೂ ಜಾವೀದ್, ಸಂತೋಷ, ತುಕಾರಾಮ್ ವಿರುಪಾಕ್ಷ ಹಾಗೂ ಸುನಿಲ್ ಎಂಬುವರ ತಂಡ ಆಗಮಿಸಿ ಅಗ್ನಿ ನಂದಿಸಿದರೂ ರೈತ ಬೆಳೆದ ದವಸ ದಾನ್ಯ ಕೈಗೆ ಬಂದದ ತುತ್ತು ಬಾಯಿಗೆ ಬರದಂತೆ ನಡೆದ ಘಟನೆ ಸ್ಥಳಿಯರಲ್ಲಿ ಮನ ಮರಗುವಂತೆ ಮಾಡಿದೆ. ಈ ವೇಳೆ ಶಿವಾನಂದ ವಾಲಿ, ಸಂಗಪ್ಪ ಹಂಪನಗೌಡ್ರ, ಮಲ್ಲೇಶಪ್ಪ ಗಂಗನಗೌಡ್ರ, ವೀರೇಶ ಗಂಗನಗೌಡ್ರ, ಸಂತೋಷ ವಾಲಿ ಮಹಾಂತೇಶ ಮೆದಿಕನಾಳ, ಶೇಖಪ್ಪ ಕಸಭೇಗೌಡ್ರ, ಸಂಗು ವಾಲಿ ಗಂಗಪ್ಪ ಗಚ್ಚಿನಮನಿ, ಪ್ರಭು ಮಳ್ಳೇತ್ತಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ