- ವಿದ್ಯುತ್ ಗ್ರಾಹಕರು ತಾತ್ಕಾಲಿಕ ಬದಲಾವಣೆಗೆ ಸಹಕರಿಸುವಂತೆ ಬೆಸ್ಕಾಂ ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಬೆಸ್ಕಾಂ 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಈ ಫೀಡರ್‌ಗಳಲ್ಲಿ ಜಲಸಿರಿ ಯೋಜನೆಯಡಿ ನೀರಿನ ಸರಬರಾಜು ಯೋಜನೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜು.25ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಎಫ್-12 ಬಸವೇಶ್ವರ ಫೀಡರ್‌ನ ಎಸ್.ಎಸ್. ಬಡಾವಣೆ ಬಿ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗೂ ಸುತ್ತಮುತ್ತ ಪ್ರದೇಶಗಳು. ಎಫ್-2 ಎಂ.ಸಿ.ಸಿ.ಬಿ ಫೀಡರ್‌ನ ಎಸ್.ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ, ಎಂಸಿಸಿ ಬಿ ಬ್ಲಾಕ್, ಬಿಐಇಟಿ ರಸ್ತೆ, ಗ್ಲಾಸ್ ಹೌಸ್ ಏರಿಯಾ, ಲಕ್ಷ್ಮಿ ಪ್ಲೋರ್ ಮಿಲ್, ಶಾಮನೂರು ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಎಫ್-21 ಸಾಯಿ ಫೀಡರ್‌ನ ಸಿದ್ದವೀರಪ್ಪ ಬಡಾವಣೆಯ 9, 10, 11, ಮತ್ತು 12ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಎಫ್-16 ನಿಜಲಿಂಗಪ್ಪ ಫೀಡರ್‌ನ ನಿಜಲಿಂಗಪ್ಪ ಬಡಾವಣೆ, ಯಲ್ಲಮ್ಮ ನಗರ, ವಿನೋಬನಗರ 4ನೇ ಮೇನ್, 3ನೇ ಮೇನ್, ದೇವರಾಜ ಅರಸ್ ಲೇಔಟ್ ಎ ಬ್ಲಾಕ್, ವಿನಾಯಕ ನಗರ, ಸಂಗೊಳ್ಳಿ ರಾಯಣ್ಣ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎಫ್-06 ಡಿಸಿಎಂ ಫೀಡರ್:ಈ ಫೀಡರ್ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ವಿವಿಧೆಡೆ ವಿದ್ಯುತ್ ಇರುವುದಿಲ್ಲ. ರೆಡ್ಡಿ ಬಿಲ್ಡಿಂಗ್, ಸನ್‌ರೈಸ್ ಆಪಾರ್ಟ್‌ಮೆಂಟ್, ಶೇಖರಪ್ಪ ಗೋಡೌನ್ ರಸ್ತೆ, ಅಂಬಿಕಾ ನಗರ, ಭೂಮಿಕ ನಗರ, ಧರ್ಮಸ್ಥಳ ಬಿಲ್ಡಿಂಗ್, ಹೈಟೆಕ್ ಲೇಔಟ್, ಹೈಟೆಕ್ ರಸ್ತೆ ಎಡಬಾಗದ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಈ ತಾತ್ಕಾಲಿಕ ಬದಲಾವಣೆಗೆ ಸಹಕರಿಸುವಂತೆ ಬೆಸ್ಕಾಂ ಕೋರಿದೆ.
- - - (-ಸಾಂದರ್ಭಿಕ ಚಿತ್ರ)