- ರಾಮಕೃಷ್ಣ ಆಶ್ರಮ ವಾರ್ಷಿಕೋತ್ಸವ- ವಿಶೇಷ ಸತ್ಸಂಗ ಕಾರ್ಯಕ್ರಮ - - - ಕನ್ನಡ ಪ್ರಭ ವಾರ್ತೆ ಹರಿಹರ
ಜೀವನದಲ್ಲಿ ಸಮಸ್ಯೆಗಳು ಸಹಜವಾಗಿದ್ದು, ಅವುಗಳನ್ನು ಎದುರಿಸುವಂಥಹ ಶಕ್ತಿಯುತ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಣೇಬೆನ್ನೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ನುಡಿದರು.ನಗರದ ಶ್ರೀಮತಿ ಗಿರಿಯಮ್ಮ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಭಾನುವಾರ ನಡೆದ ರಾಮಕೃಷ್ಣ ವಿವೇಕಾನಂದ ಆಶ್ರಮದ ೧೪ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲಿಯವರೆಗೆ ದೌರ್ಬಲ್ಯ ಇರುತ್ತೋ ಅಲ್ಲಿಯವರೆಗೆ ಸೋಲು ಇರುತ್ತದೆ. ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗೂ ಆತ್ಮಶಕ್ತಿ ಹೆಚ್ಚಿಸುವ ಮೂಲಕ ಗೆಲುವಿನ ಹಾದಿ ಹಿಡಿಯಬಹುದು. ತೊಂದರೆ ಬಂದಾಗ ದೇವರು, ಧರ್ಮ ಅಥವಾ ಭವಿಷ್ಯ ಕೇಳುವುದು ಮಾಡದೇ, ಶಕ್ತಿ, ಅರಿವನ್ನು ಬಳಸಿಕೊಳ್ಳಬೇಕು. ಅಂಗೈ ರೇಖೆಗಳಿಂದ ಭವಿಷ್ಯ ನಿರ್ಮಾಣ ಆಗುವುದಿಲ್ಲ. ಕಷ್ಟ ಬಂದಾಗ ಜೋತಿಷಿಗಳ ಬಳಿ ಹೋದರೆ ಇನ್ನಷ್ಟು ದುರ್ಬಲವಾಗುತ್ತಿರಿ ಎಂದು ಎಚ್ಚರಿಸಿದರು.ಹರಿಹರದ ಶಾರದೇಶಾನಂದಜಿ ಅವರು ಕೇವಲ ೧೪ ವರ್ಷಗಳಲ್ಲಿ ಅನೇಕ ಧಾರ್ಮಿಕ, ಅಧ್ಯಾತ್ಮಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳನ್ನು ಮಾಡುವ ಮೂಲಕ ದಾವಣಗೆರೆ ಜಿಲ್ಲೆಯಷ್ಟೇ ಅಲ್ಲದೇ ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.
ನಗರದ ಸ್ವಾಮಿ ಶಾರದೇಶಾನಂದಜಿ, ದಾವಣಗೆರೆಯ ತ್ಯಾಗೀಶ್ವರಾನಂದಜಿ, ಶಿವಮೊಗ್ಗದ ಸ್ವಾಮಿ ವಿನಯಾನಂದಜಿ, ಶ್ರೀರಂಗಪಟ್ಟಣದ ಸ್ವಾಮಿ ಗದಾಧರಾನಂದಜಿ, ಗದಗನ ಸ್ವಾಮಿ ಜಗನ್ನಾಥಾನಂದಜಿ, ಕಾರವಾರದ ಸ್ವಾಮಿ ಕರುಣಾನಂದಜಿ, ಸಾಗರದ ಸ್ವಾಮಿ ಜ್ಞಾನಾನಂದಜಿ, ರಾಣೇಬೆನ್ನೂರಿನ ಸ್ವಾಮಿ ಆತ್ಮದೀಪಾನಂದಜಿ, ಹಾಸನದ ಸ್ವಾಮಿ ಪ್ರೇಮರೂಪಾನಂದಜಿ, ಸಿಂಧನೂರಿನ ಸ್ವಾಮಿ ಸದಾನಂದಜಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಸುಜಾತಾ ಸುಬ್ರಹ್ಮಣ್ಯ ನಿರೂಪಿಸಿದರು. ಡಾ. ಆರ್.ಎಚ್. ಶಾರದಾದೇವಿ ಸ್ವಾಗತಿಸಿದರು.
- - - -೨೮ಎಚ್‌ಆರ್‌ಆರ್‌೧:ಹರಿಹರದ ಶ್ರೀಮತಿ ಗಿರಿಯಮ್ಮ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಭಾನುವಾರ ರಾಮಕೃಷ್ಣ ವಿವೇಕಾನಂದ ಆಶ್ರಮದ ೧೪ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯದ ವಿವಿಧ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮಗಳ ಶ್ರೀಗಳು ಭಾಗವಹಿಸಿದ್ದರು.