ಮುಂಡಗೋಡ ಪಟ್ಟಣ ಪಂಚಾಯಿ ಸಾಮಾನ್ಯ ಸಭೆ
ನಿಗದಿಪಡಿಸಿದ್ದಕ್ಕಿಂತ ದರಕ್ಕಿಂತ ಕಡಿಮೆ ಮೊತ್ತದ ಟೆಂಡರ್‌ಗಳನ್ನು ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಪಪಂ ಸದಸ್ಯರು ಸಾಮೂಹಿಕವಾಗಿ ಒತ್ತಾಯಿಸಿದ ಪ್ರಸಂಗ ಶುಕ್ರವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ಪಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕಾಮಗಾರಿಗಳಿಗೆ ನಿಗದಿಪಡಿಸಿ ಮೊತ್ತಕ್ಕಿಂತ ಶೇ.೨೫ರಷ್ಟು ಕಡಿಮೆ ದರದಲ್ಲಿ ಟೆಂಡರ್ ಹಾಕುವವರು ಎಷ್ಟರಮಟ್ಟಿಗೆ ಗುಣಮಟ್ಟ ಕಾಮಗಾರಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಸದಸ್ಯರು, ಈ ಬಗ್ಗೆ ಕಳೆದ ೪ ತಿಂಗಳಿಂದ ಅಂತಹ ಟೆಂಡರ್‌ಗಳನ್ನು ರದ್ದುಪಡಿಸುವಂತೆ ಹೇಳುತ್ತ ಬರಲಾಗಿದೆ. ವಿನಹ ಅದು ಕಾರ್ಯಗತವಾಗುತ್ತಿಲ್ಲ.ಇಲ್ಲಿಯ ಕೆಡಿಸಿಸಿ ಬ್ಯಾಂಕ್‌ನಿಂದ ಅಯ್ಯಪ್ಪಸ್ವಾಮಿ ದೇವಾಲಯದವರೆಗೆ ಒಂದು ಬದಿಯ ವಿದ್ಯುತ್ ದೀಪಗಳು ಉರಿಯುವುದಿಲ್ಲ. ಆದರೆ ಈ ಲೈನ್ ರಿಪೇರಿಗೆ ₹೭೨ ಸಾವಿರ ಖರ್ಚು ಹಾಕಲಾಗಿದೆ. ಆ ಹಣ ಎಲ್ಲಿ ಹೋಯಿತು. ಎಂದು ಸದಸ್ಯ ಶ್ರೀಕಾಂತ ಸಾನು ಆಕ್ರೋಶ ವ್ಯಕ್ತಪಡಿಸಿರು.
ಬೀದಿ ನಾಯಿಗಳ ಸ್ಥಳಾಂತರಕ್ಕೆ ಒತ್ತಾಯ:
ನಿಗದಿತ ಸಮಯಕ್ಕೆ ಫಾರ್ಮ ನಂ ೩ ಸಿಗದ ಕಾರಣ ಮನೆ ಕಟ್ಟುವರು, ಬ್ಯಾಂಕ್ ಸಾಲ ಪಡೆಯುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಸಾರ್ವಜನಿರು ನಿತ್ಯ ಪಪಂಗೆ ಅಲೆದಾಡುವಂತಾಗಿದೆ. ಒಂದು ದಿನಕ್ಕೆ ಇಂತಿಷ್ಟು ಫಾರ್ಮ ನಂ ೩ ವಿತರಿಸುವ ನಿಯಮವನ್ನಾದರೂ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಸದಸ್ಯರು ಒತ್ತಾಯಿಸಿದರು.
ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಮುಖ್ಯಾಧಿಕಾರಿ ಸಂತೋಷ ಹಾಲಕಲ್ಲಾಪುರ, ಸದಸ್ಯರಾದ ಅಶೋಕ ಚಲವಾದಿ, ಫಣಿರಾಜ ಹದಳಗಿ, ರಜಾ ಪಠಾಣ, ಗೌಸ ಮಖಾಂದಾರ, ಶೇಖರ ಲಮಾಣಿ, ಬೀಬಿಜಾನ ಮುಲ್ಲಾನವರ, ನಿರ್ಮಲಾ ಬೆಂಡ್ಲಗಟ್ಟಿ, ಶಕುಂತಲಾ ನಾಯಕ, ಸುವರ್ಣ ಕೊಟಗುಣಸಿ, ಜೈನು ಬೆಂಡಿಗೇರಿ, ಪಪಂ ಅಧಿಕಾರಿ ಪ್ರದೀಪ ಹೆಗಡೆ, ಮಂಚಲಾ ಶೇಟ್ ಮುಂತಾದವರಿದ್ದರು.