ಇಲ್ಲಿನ ಇಜಾರಿಲಕಮಾಪುರದಲ್ಲಿರುವ ಜ್ಯೋತಿ ಬುದ್ಧಿಮಾಂದ್ಯ ಶಾಲೆಯ ವಸತಿಯುತ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ, ಪದ್ಮಶ್ರೀ ಪುರಸ್ಕೃತ ಹಾಗೂ ಸಂಸ್ಥೆಯ ಮೂಲ ಸಂಸ್ಥಾಪಕ ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನವನ್ನು ಸಾರ್ಥಕವಾಗಿ ಆಚರಿಸಲಾಯಿತು.
ಹಾವೇರಿ: ಇಲ್ಲಿನ ಇಜಾರಿಲಕಮಾಪುರದಲ್ಲಿರುವ ಜ್ಯೋತಿ ಬುದ್ಧಿಮಾಂದ್ಯ ಶಾಲೆಯ ವಸತಿಯುತ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ, ಪದ್ಮಶ್ರೀ ಪುರಸ್ಕೃತ ಹಾಗೂ ಸಂಸ್ಥೆಯ ಮೂಲ ಸಂಸ್ಥಾಪಕ ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನವನ್ನು ಸಾರ್ಥಕವಾಗಿ ಆಚರಿಸಲಾಯಿತು.
ಡಾ. ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಹಾವೇರಿ ಶಾಖೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಖೆಯ ಅಧ್ಯಕ್ಷ ಬಸವರಾಜ ಮಾಸೂರ, ಡಾ. ಪ್ರಭಾಕರ ಕೋರೆ ಅವರು ನಾಡು ಮತ್ತು ನುಡಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ದೇಶದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಶಿಕ್ಷಣ, ಸಹಕಾರ, ವೈದ್ಯಕೀಯ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಈ ಮಹತ್ತರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ''''''''ಪದ್ಮಶ್ರೀ'''''''' ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಶಾಖೆಯ ಸಂಚಾಲಕರಾದ ಶಿವಯೋಗಿ ಕೊಳ್ಳಿ, ನಿರಂಜನ ಹೇರೂರ, ವಿನಯ ಶಿರೂರ, ಸುಭಾಶಚಂದ್ರ ಹುರಳಿಕೊಪ್ಪಿ, ದಯಾನಂದ ಯಡ್ರಾಮಿ, ಶಾಖಾ ವ್ಯವಸ್ಥಾಪಕ ಸುನೀಲ ಚನ್ನೂರ ಉಪಸ್ಥಿತರಿದ್ದರು.
ಅಲ್ಲದೆ, ಸಿಬ್ಬಂದಿ ವರ್ಗದವರಾದ ಪವಿತ್ರಾ ಬಣಕಾರ, ವಿದ್ಯಾ ಗುಡಗೂರ, ದೇವರಾಜ ಬಿದರಿ, ಬಸವಣ್ಣ ಕಲ್ಯಾಣಿ, ಪರಶುರಾಮ ಸಂದಿಮನಿ, ಪಿಗ್ಮಿ ಸಂಗ್ರಾಹಕರಾದ ನಾಗರಾಜ ಸುಳ್ಳಳ್ಳಿ, ಪಂಚಾಕ್ಷರಯ್ಯ ಗಡ್ಡದಮಠ, ಮಲ್ಲಿಕಾರ್ಜುನ ಹೊಸಮನಿ, ಶ್ಯಾಮಲಾ ಹೊಸಮನಿ, ಸಿಧ್ಧಲಿಂಗೇಶ ಬಾಳಿ ಹಾಗೂ ಗ್ರಾಹಕರಾದ ಗುರುಪಾದಯ್ಯ ಸಾಲಿಮಠ ಸೇರಿದಂತೆ ಹಲವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.