ಗ್ರಾಮೀಣ ವೈದ್ಯರ ಸೇವೆಯಿಂದ ರೋಗಿಗಳ ಆತಂಕ ನಿವಾರಣೆ: ಪ್ರಭು

KannadaprabhaNewsNetwork |  
Published : Nov 13, 2026, 02:45 AM IST
ಪ್ರಭಾಕರ ಪ್ರಭು | Kannada Prabha

ಸಾರಾಂಶ

ಸಿದ್ದಕಟ್ಟೆಯ ಸ್ವಾಗತ್ ಬಿಲ್ಡಿಂಗ್ ಆವರಣದಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆಯ ದಿನ ನಡೆದ ಸಮಾರಂಭದಲ್ಲಿ ಸ್ವಾಗತ್ ಕಾಂಪ್ಲೆಕ್ಸ್ ಮಾಲಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಸಿದ್ದಕಟ್ಟೆಯಲ್ಲಿ ಕಳೆದ 30 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಕೃಷ್ಣಮೂರ್ತಿ

ಬಂಟ್ವಾಳ: ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಮುಖ್ಯ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.

ಅವರು ಇತ್ತೀಚೆಗೆ ಸಿದ್ದಕಟ್ಟೆಯ ಸ್ವಾಗತ್ ಬಿಲ್ಡಿಂಗ್ ಆವರಣದಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆಯ ದಿನ ನಡೆದ ಸಮಾರಂಭದಲ್ಲಿ ಸ್ವಾಗತ್ ಕಾಂಪ್ಲೆಕ್ಸ್ ಮಾಲಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಸಿದ್ದಕಟ್ಟೆಯಲ್ಲಿ ಕಳೆದ 30 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಕೃಷ್ಣಮೂರ್ತಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರನ್ನು ಸಾರ್ವಜನಿಕವಾಗಿ ಅಭಿನಂದಿಸುವುದು ಶ್ಲಾಘನೀಯ ಎಂದರು.

ನಮ್ಮ ಕುಡ್ಲ ನ್ಯೂಸ್ ಚಾನೆಲ್ ನಿರ್ದೇಶಕರಾದ ಶರಣ್ ಕರ್ಕೇರ, ಆದಿತ್ಯ ಕರ್ಕೇರ, ಹಿರಿಯರಾದ ಸಂಜೀವ ಶೆಟ್ಟಿ ಉಮ್ಮೆಟ್ಟು, ಸ್ವಾಗತ್ ಕಾಂಪ್ಲೆಕ್ಸ್ ಮಾಲಕರಾದ ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್, ಬಾಬು ಶೆಟ್ಟಿ, ಸಿ.ಎ. ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಶಿವ ಗೌಡ, ಪ್ರಮುಖರಾದ ಕೇಶವ ಶಬರೀಶ್, ಪ್ರಕಾಶ್ ಶೆಟ್ಟಿ, ಸ್ವಸ್ತಿಕ್, ಡಾ. ರಕ್ಷಿತ್ ಭಟ್, ಹೇಮಚಂದ್ರ ಗೌಡ, ಗಣೇಶ ಹೊಳ್ಳ, ಸಂತೋಷ ಅಂಚನ್, ವಾರಿಜ ಮೋಹನ್, ಸುರೇಶ್ ಶೆಟ್ಟಿ ಕಾಮದೇನು, ಮೀನಾಕ್ಷಿ ಹಾಗೂ ಸಂಧ್ಯಾ ಮೋಹನ್ ಮತ್ತಿತರರಿದ್ದರು. ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌