ಪ್ರಭು ಶ್ರೀರಾಮನ ಕಳಸ ಮೆರವಣಿಗೆ, ಮಂತ್ರಾಕ್ಷತೆ ಕಾರ್ಯ ಅದ್ಧೂರಿ

KannadaprabhaNewsNetwork |  
Published : Jan 13, 2024, 01:33 AM IST
ಅಅಅಅ | Kannada Prabha

ಸಾರಾಂಶ

ಕೋಟ್ಯಂತರ ಭಾರತೀಯರ ಕನಸು ನನಸಾಗುವ ಕಾಲ ಸನ್ನಿಹವಾಗಿದ್ದು, ಅಯೋಧ್ಯೆಯಲ್ಲಿ ಜ.22ರಂದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ. ಅದಕ್ಕೂ, ಪೂರ್ವ ಪ್ರತಿ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೋಟ್ಯಾಂತರ ಭಾರತೀಯರ ಕನಸು ನನಸಾಗುವ ಕಾಲ ಸನ್ನಿಹವಾಗಿದ್ದು, ಅಯೋಧ್ಯೆಯಲ್ಲಿ ಜ.22ರಂದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ. ಅದಕ್ಕೂ, ಪೂರ್ವ ಪ್ರತಿ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಹೇಳಿದರು.

ಇಲ್ಲಿನ ರಾಮತೀರ್ಥ ನಗರದ ಹಲವು ಬಡವಾಣೆಗಳಲ್ಲಿ ರಾಮತೀರ್ಥ ರವಾಸಿಗಳ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ವೈಭವದ ಕಳಸ ಮೆರವಣಿಗೆ ಹಾಗೂ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ಮಾತನಾಡಿದ ಅವರು, ಇಲ್ಲಿನ 12 ಮಂದಿರಗಳಿಗೆ ಸಂಚರಿಸಿ ಅಕ್ಷತೆ ತುಂಬಿದ ಕಳಸವನ್ನು ಮೆರವಣಿಗೆ ಮಾಡಲಾಗಿದೆ ಹಾಗೂ ಶ್ರೀರಾಮನ ಭಾವಚಿತ್ರ, ಕರಪತ್ರ ಮತ್ತು ಪವಿತ್ರ ಮಂತ್ರಾಕ್ಷತೆ ನೀಡಲಾಗಿದೆ ಎಂದು ತಿಳಿಸಿದರು.

ಹಿಂದುಗಳ ಆರಾಧ್ಯದೇವ ಪ್ರಭು ಶ್ರೀರಾಮನ ಮಂತ್ರಾಕ್ಷತೆ ದೇಶ್ಯಾದ್ಯಂತ ನಡೆಯುತ್ತಿದ್ದು, ಈಗಾಗಲೇ ಬೆಳಗಾವಿಯಲ್ಲೂ ಅಕ್ಷತೆ ತುಂಬಿದ ಕಳಸವನ್ನು ಮೆರವಣಿಗೆ, ಮಂತ್ರಾಕ್ಷತೆ ನೀಡಲಾಗಿದೆ. ಜ.22ರಂದು ಬೆಳಗಾವಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಎಲ್ಲ ಮನೆಗಳಲ್ಲಿಯೂ ವಿಶೇಷ ಪೂಜೆ ಮತ್ತು ಸಂಜೆ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಲಾಗುವುದು. ಪ್ರತಿಯೊಬ್ಬರೂ ರಾಮನ ಆಗಮನವನ್ನು ಸಂಭ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಮೇಶ ಕಾಜಗಾರ, ಮೌನೇಶ ಪತ್ತಾರ, ಮಹದೇವ, ಅಪ್ಪಯಾ ಕೋಲ್ಕಾರ್, ಗುರುಪುತ್ರಪ್ಪ ತೊರಗಲ್, ಬಾಳಪ್ಪ ಹಣಜಿ, ಸಂತೋಷ್ ಮೇರಾಕಾರ, ರಾಜು ಪಾಟೀಲ್, ರಾಜಶೇಖರ್, ಅಕ್ಷಯ್ ಅಂಬಡಗಟ್ಟಿ, ಅಭಿಷೇಕ್ ಅಗಸಗಿ, ಗೋಳಪ್ಪ ಹೊಲ್ಯಾಚಿ, ನಿಂಗಪ್ಪ ಕರೆಪ್ಪಗೋಳ, ಗುರಪ್ಪ ಬಣಗಾರ , ಶ್ರೀಶೈಲ್ ಹಿರೇಮಠ, ಬಸವರಾಜ ಕೊಟ್ರಶೆಟ್ಟಿ , ಶಿವಲಿಂಗ ಕಡಬಡಿಗಿ, ಮಾರುತಿ ಬಾಸಕರ , ಈರಣ್ಣ ಹೊಸಮನಿ, ಅಮಿತ್ ಬಿಡೇಕರ್, ಅಮೋಲ್ ಬಿಡೇಕರ್, ಸಾಗರ್ ಕೀಣೆಕರ್ ಸೇರಿದಂತೆ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!