ಕನ್ನಡಪ್ರಭ ವಾರ್ತೆ ಚಿತ್ರದುರ್ಗ 500 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ತಲೆ ಎತ್ತಿದ್ದು, ಇಂದು ಆ ಮಂದಿರದಲ್ಲಿ ಶ್ರೀ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ನೂರಾರು ಋತ್ವಿಜರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಶ್ರೀಬಾಲರಾಮ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ.
ನಗರದ ಆನೆಬಾಗಿಲ ಬಳಿಯಲ್ಲಿ ರಾಜಾಸ್ತಾನ ಸಮಾಜದವರಿಂದ ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಪ್ರತಿ ರೂಪವನ್ನು ನಿರ್ಮಾಣ ಮಾಡಿ ಜನರ ದರ್ಶನಕ್ಕೆ ಇಡಲಾಗಿತ್ತು. ಇದರ ಪಕ್ಕದಲ್ಲಿ ಆಯೋದ್ಯಯಲ್ಲಿ ನಡೆಯುತ್ತಿರುವ ರಾಮ ಮಂದಿರದ ರಾಮ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ವೀಕ್ಷಣೆ ಮಾಡಲು ಎಲ್.ಇ.ಡಿ. ಪರದೆಯನ್ನು ನಿರ್ಮಾಣ ಮಾಡಲಾಗಿತ್ತು. ಆಯೋಧ್ಯಯಲ್ಲಿ ರಾಮಮಂದಿರದ ರಾಮ ಪ್ರಾಣ ಪ್ರತಿಷ್ಠಾಪನ ಸಮಯಕ್ಕೆ ಇಲ್ಲಿಯೂ ಸಹಾ ಪೂಜೆಯನ್ನು ಮಾಡುವುದರ ಮೂಲಕ ಶ್ರೀರಾಮ ಪೂಜೆಯಲ್ಲಿ ಪಾಲ್ಗೊಳ್ಳಲಾಯಿತು.
ಈ ಸಮಾರಂಭದಲ್ಲಿ ರಾಜಸ್ತಾನ ಸಮಾಜದ ಮುಖಂಡರಾದ ಶ್ರೇಣಿಕ್, ವಿಕ್ರಾಂತ್ ಜೈನ್, ವೀರಸಿಂಗ್, ಸುರೇಶ್, ಮಂಗಲಸಿಂಗ್ ಹಾಗೂ ಸೇನಿ, ವಿಷ್ಣು, ಜೈನ್ ಸಮುದಾಯದವರು ಹಾಗೂ ಜ್ಯೂಯಲರಿ ಸಂಘದವರು ಭಾಗವಹಿಸಿದ್ದರು. ಪೂಜೆಯ ನಂತರ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದವನ್ನು ಹಂಚಲಾಯಿತು.ಇದೇ ರೀತಿ ನಗರದ ರಂಗಯ್ಯನ ಭಾಗಿಲ ಬಳಿಯ ಶ್ರೀರಾಮನ ಭಕ್ತಾಧಿಗಳಿಂದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷವಾದ ಪೂಜೆಯನ್ನು ನಡೆಸುವುದರ ಮೂಲಕ ಆಗಮಿಸಿದ ಭಕ್ತಾಧಿಗಳಿಗೆ ಕೊಸುಂಬರಿ ಪಾನಕದ ಪ್ರಸಾದವನ್ನು ನೀಡಲಾಯಿತು. ಮದಕರಿ ಹಣಪತಿ ದೇವಾಲಯದಲ್ಲಿಯೂ ಸಹಾ ಇಂದು ವಿಶೇಷವಾದ ಆಲಂಕಾರವನ್ನು ಮಾಡುವುದರ ಮೂಲಕ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ದೇಶದ ಎಲ್ಲೆಡೆ ಮೊಳಗುತ್ತಿದೆ ಶ್ರೀರಾಮ ಜಯಘೋಷ. ಕೋಟ್ಯಂತರ ಹಿಂದೂಗಳ ಐದು ದಶಕಗಳ ಕನಸು ಈಡೇರಿದ್ದು, ಈ ಸಂಭ್ರಮವನ್ನು ಯುವಕರು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಯುವ ಸಮುದಾಯ ಪ್ರಭು ಶ್ರೀರಾಮನ ಟ್ಯಾಟೂ ಹಾಕಿಸಿಕೊಂಡು ಭಕ್ತಿ ಮೆರೆಯುತ್ತಿದ್ದಾರೆ. ಚಿತ್ರದುರ್ಗದಲ್ಲಿ ಯುವಕರು ಅಯೋಧ್ಯೆ ರಾಮ ಮಂದಿರ, ರಾಮ-ಹನುಮಂತನ ಟ್ಯಾಟೂ ಹಾಕಿಸಿಕೊಂಡಿದ್ದಾರ. ಕೆಲ ದಿನಕ್ಕೆ ಟ್ರೆಂಡ್ ಶುರುವಾಗಿ 150ಕ್ಕೂ ಹೆಚ್ಚು ಜನರ ಕೈ, ಎದೆಯ ಮೇಲೆ ಪ್ರಭು ಶ್ರೀರಾಮನ ಚಿತ್ರ ಮೂಡಿದೆ.
ಅಯೋಧ್ಯಾ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನ ಅಂಗವಾಗಿ ಚಿತ್ರದುರ್ಗ ನಗರ ಮಾಳಪ್ಪನಹಟ್ಟಿಯಲ್ಲಿ ಶ್ರೀರಾಮ, ಸೀತಾ, ಲಕ್ಷಣ ಮತ್ತು ಆಂಜನೇಯ ಪಾತ್ರಧರಿಸಿ ಗ್ರಾಮದಲ್ಲಿ ಭಜನೆ ನೆರವೇರಿಸಿ ಶ್ರೀ ಆಂಜನೇಯ ದೇವಸ್ಥಾನದ ಮೂಲಕ ಮೆರವಣಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.