ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಅಗಸ್ತ್ಯ ಫೌಂಡೇಷನ್ ಅಂತರಾಷ್ಟ್ರೀಯ ಪ್ರತಿಷ್ಠಾನ, ಟಾಟಾ ಪವರ್‌ಲ್ಯಾಬ್ ಆನ್ ಎ, ಬೈಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ತಳಕು ಹೋಬಳಿಯ ಆಯ್ದ 30 ಸರ್ಕಾರಿ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಶಿಕ್ಷಕ ಸೈಯದ್ ಪೈಜುಲ್ಲಾ ದೇಶದ ವಿಜ್ಞಾನ ಇಂದು ವಿಶ್ವಮನ್ನಣೆ ಗಳಿಸಿದೆ. ವಿಜ್ಞಾನದ ವಿಚಾರದಲ್ಲಿ ಪ್ರಗತಿಯನ್ನು ಸಾಧಿಸಿದರೆ ಮಾತ್ರ ನಾವೆಲ್ಲರೂ ಉಳಿದ ಗುರಿಯನ್ನು ಸುಲಭವಾಗಿ ದಾಟಬಹುದು. ಈ ನಿಟ್ಟಿನಲ್ಲಿ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚು ಜ್ಞಾನವನ್ನು ತುಂಬುವ ಕಾರ್ಯದಲ್ಲಿ ನಿರತರಾಗಬೇಕು ಎಂದರು.ಕೆ.ಎಸ್. ಶ್ರೀಕಾಂತ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಅಗಸ್ತ್ಯ ಫೌಂಡೇಷನ್ ಅಂತರಾಷ್ಟ್ರೀಯ ಪ್ರತಿಷ್ಠಾನ, ಟಾಟಾ ಪವರ್‌ಲ್ಯಾಬ್ ಆನ್ ಎ, ಬೈಕ್ ಕಂಪನಿಗಳ ಸಹಯೋಗದಲ್ಲಿ ಆಯ್ದ ವಿಜ್ಞಾನ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಗಾರವನ್ನು ಆಯೋಜಿಸಿದೆ ಎಂದರು.
ಅಗಸ್ತ್ಯ ಫೌಂಡೇಷನ್ ಶಿಕ್ಷಕರಾದ ಬಸವೇಶ್ವರ, ಚಂದ್ರಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.