ಭಾಷಾ ಅಧ್ಯಯನ, ಸಂಶೋಧನೆ ಹಾಗೂ ಅಸ್ತಿತ್ವದ ಮಾನ್ಯತೆಯ ನೆಲೆಯಲ್ಲಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆಗೆ ಮುಂದಾಗಿರುವ ಕರ್ನಾಟಕ ಸರ್ಕಾರದ ನಿಲುವು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ಭಾಷಾ ಅಧ್ಯಯನ, ಸಂಶೋಧನೆ ಹಾಗೂ ಅಸ್ತಿತ್ವದ ಮಾನ್ಯತೆಯ ನೆಲೆಯಲ್ಲಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆಗೆ ಮುಂದಾಗಿರುವ ಕರ್ನಾಟಕ ಸರ್ಕಾರದ ನಿಲುವು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕನ್ನಡದ ಛತ್ರದಡಿಯಲ್ಲಿ ಇತರ ಎಲ್ಲ ಭಾಷೆಗಳಿಗೂ ಸಮಾನವಾದ ಮಾನ್ಯತೆ ಹಾಗೂ ಪ್ರಾಶಸ್ತ್ಯ ನೀಡುವ ಸರ್ಕಾರದ ಈ ನಿಲುವು ದೇಶದ ಇನ್ನಿತರ ರಾಜ್ಯಗಳಿಗೂ ಮಾದರಿಯಾಗಬಲ್ಲುದು.
ಇದೇ ತೆರನಾಗಿ ತುಳು ಶಿವಳ್ಳಿ, ಸ್ಥಾನಿಕ, ಪದಾತಿ ಭಾಷೆ ಮನೆ ಮಾತಾಗಿರುವ ಮಂದಿ ಕನ್ನಡ ಕರಾವಳಿ, ಕಾಸರಗೋಡು ಸೇರಿದಂತೆ ಕೇರಳದಿಂದ ಕನ್ಯಾಕುಮಾರಿಯ ತನಕವಲ್ಲದೆ, ಮುಂಬೈ, ಮದ್ರಾಸ್, ಹೈದರಾಬಾದ್ ಪ್ರದೇಶಗಳಲ್ಲೂ ವ್ಯಾಪಕವಾಗಿ ನೆಲೆಸಿದ್ದು , ಮಾತ್ರವಲ್ಲ ವಿಶ್ವವ್ಯಾಪಿಯಾಗಿ ಬದುಕು ಕಟ್ಟಿಕೊಂಡು, ಜೊತೆ ಜೊತೆಗೆ ತುಳು ಭಾಷಾ ಸಹಿತವಾಗಿ ತುಳು ಲಿಪಿಯನ್ನು ಆರಾಧನಾ ನೆಲೆಯಲ್ಲಿ ಬೆಳೆಸುತ್ತಿರುವುದು ಪ್ರಾಜ್ಞರ ಹಾಗೂ ಸಂಶೋಧಕರ ಅಭಿಮತವಾಗಿದೆ.ಕರಾವಳಿಯ ಇನ್ನೊಂದು ಭಾಷೆ ಕುಂದ ಕನ್ನಡಕ್ಕೂ ಅಕಾಡೆಮಿಯ ಮಾನ್ಯತೆಯು ಲಭಿಸಬೇಕಾಗಿದೆ. ತುಳು ಶಿವಳ್ಳಿ ಹಾಗೂ ಕುಂದ ಕನ್ನಡದ ನೂರಾರು ಮಂದಿ ಸಾಧಕರು ನಾಡಿನ ಹೆಮ್ಮೆಯೆನಿಸಿರುವರು. ಯತಿ ಶ್ರೇಷ್ಠರೆನಿಸಿದ ಆಚಾರ್ಯ ಮಧ್ವರು, ವಾದಿರಾಜರಲ್ಲದೆ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು, ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರಲ್ಲದೆ ನೂರಾರು ಮಂದಿ ಮಹಾನ್ ಸಾಧಕರ ಕೊಡುಗೆ ಕನ್ನಡ ನಾಡಿಗೆ ಪ್ರಾಪ್ತವಾಗಿದೆ.ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸುವ ರೀತಿಯಲ್ಲೇ ಪ್ರಾಚೀನ ತುಳು ಶಿವಳ್ಳಿ ಭಾಷೆ ಹಾಗೂ ಕುಂದ ಕನ್ನಡ ಭಾಷೆಗೂ ಮಾನ್ಯತೆಯನ್ನು ನೀಡುವ ಮೂಲಕ ಪ್ರತ್ಯೇಕ ಅಕಾಡೆಮಿಯನ್ನು ಸ್ಥಾಪಿಸುವುದರೊಂದಿಗೆ, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯ ಮಾಡಬೇಕು ಎಂದು ಕಲ್ಕೂರ ಮನವಿ ಮಾಡಿದ್ದಾರೆ. ಅಲ್ಲದೆ ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸುವ ನೆಲೆಯಲ್ಲಿ ಕರ್ನಾಟಕ ಸರ್ಕಾರವನ್ನು ಹಾಗೂ ಮುಖ್ಯಮಂತ್ರಿಗಳನ್ನು ಕಲ್ಕೂರ ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.