ಕನ್ನಡಪ್ರಭ ವಾರ್ತೆ ಮಡಿಕೇರಿ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರಗತಿ ಕ್ರಿಕೆಟರ್ಸ್ ತಂಡ 20 ಓವರ್ ಗಳಲ್ಲಿ 167 ರನ್ ಗಳನ್ನು ಸೇರಿಸಿತು.
ಇದನ್ನು ಬೆನ್ನಟ್ಟಿದ ಎದುರಾಳಿ ತಂಡ ಟೀಮ್ ಲಿವರೇಜ್ 18.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 153 ರನ್ ಗಳನ್ನಷ್ಟೇ ಗಳಿಸಿ ಸೋಲು ಒಪ್ಪಿಕೊಂಡಿತು.ಪ್ರಗತಿ ಕ್ರಿಕೆಟರ್ಸ್ ನ ಅಭಿಮನ್ಯು ದೇವಯ್ಯ ಅವರು 36 ಬಾಲ್ ಗಳಲ್ಲಿ ಭರ್ಜರಿ 73 ರನ್ ಗಳನ್ನು ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಮಳೆಯಿಂದ ಪಂದ್ಯಾಟ ರದ್ದು ಬುಧವಾರದ ಎರಡನೇ ಪಂದ್ಯ ಮಳೆಯ ಕಾರಣದಿಂದ ರದ್ದುಗೊಂಡಿತು.ಮಧ್ಯಾಹ್ನ ಆಯೋಜಿಸಲಾಗಿದ್ದ ಪಂದ್ಯಾಟದಲ್ಲಿ ಟಾಸ್ ಗೆದ್ದ ರಾಯಲ್ ಟೈಗರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಣ್ಣಿಗೇರಿ ನಾಡ್ ತಂಡ 15.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್ ಗಳನ್ನು ಗಳಿಸಿತ್ತು. ಆದರೆ ಮಳೆ ಬಂದ ಕಾರಣ ಆಯೋಜಕರು ಪಂದ್ಯವನ್ನು ರದ್ದುಗೊಳಿಸಿದರು.
ಇಂದಿನ ಪಂದ್ಯ : ಮೇ 9 ಪಂದ್ಯ-1(ಬೆಳಿಗ್ಗೆ 8:30) : ಟೀಮ್ ಲಿವರೇಜ್ / ಕೂರ್ಗ್ ಯುನೈಟೆಡ್ಪಂದ್ಯ -2 (ಮಧ್ಯಾಹ್ನ 1:30): ಕೊಡವ ಟ್ರೈಬ್ / ಟೀಮ್ ವೈಲ್ಡ್ ಫ್ಲವರ್