ಪ್ರಹ್ಲಾದ ಜೋಶಿ ಲಿಂಗಾಯತ ವಿರೋಧಿಯಲ್ಲ: ಯತ್ನಾಳ

KannadaprabhaNewsNetwork |  
Published : May 02, 2024, 12:18 AM IST
5644 | Kannada Prabha

ಸಾರಾಂಶ

ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬರಬೇಕಾದಲ್ಲಿ ಎಲ್ಲರೂ ಮೇ 7ರಂದು ಬೆಳಗ್ಗೆ 6.30ಕ್ಕೆ ಮತಕೇಂದ್ರಗಳಿಗೆ ತೆರಳಿ ಕೇಸರಿ ತಿಲಕ ಹಚ್ಚಿಕೊಂಡು ಜೈಶ್ರೀರಾಮ್‌ ಎಂದು ಕಮಲದ ಗುರುತಿಗೆ ಮತಹಾಕಿ.

ಹುಬ್ಬಳ್ಳಿ:

ಕೆಲವರು ಪ್ರಹ್ಲಾದ ಜೋಶಿ ಅವರು ಲಿಂಗಾಯತ ವಿರೋಧಿ ಎಂದು ಆರೋಪ ಮಾಡುತ್ತಿದ್ದಾರೆ. ಜೋಶಿ ಲಿಂಗಾಯತ ವಿರೋಧಿ ಎನ್ನುತ್ತಿದ್ದರೋ ಅವರು ಈಗಾಗಲೇ ನಾಮಪತ್ರ ವಾಪಸ್ಸು ಪಡೆದು ಮನೆಗೆ ಹೋಗಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳ ಹೆಸರು ಹೇಳದೇ ಟೀಕಿಸಿದರು.

ಅವರು ಬುಧವಾರ ಸಂಜೆ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು.

ನಮ್ಮ ಪಂಚಮಸಾಲಿ ಸಮಾಜಕ್ಕೆ ಟಿಕೆಟ್‌ ಬೇಡ, ನಮಗೆ ಬೇಕಾಗಿರುವುದು ಹಿಂದೂ ರಾಷ್ಟ್ರ. ಹಾಗಾಗಿ ಲಿಂಗಾಯತರು ಸೇರಿದಂತೆ ಎಲ್ಲ ಸಮಾಜದವರೂ ಬಿಜೆಪಿಯೊಂದಿಗೆ ಇದ್ದಾರೆ. ನಮಗೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ರಾಜ್ಯದಲ್ಲೂ ಬುಲ್ಡೋಜರ್‌ ಬಾಬಾ ಸರ್ಕಾರ ಬರಬೇಕು. ಮುಂದೆ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು.

ಕೇಸರಿ ತಿಲಕವಿಟ್ಟು ಮತಹಾಕಿ:ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬರಬೇಕಾದಲ್ಲಿ ಎಲ್ಲರೂ ಮೇ 7ರಂದು ಬೆಳಗ್ಗೆ 6.30ಕ್ಕೆ ಮತಕೇಂದ್ರಗಳಿಗೆ ತೆರಳಿ ಕೇಸರಿ ತಿಲಕ ಹಚ್ಚಿಕೊಂಡು ಜೈಶ್ರೀರಾಮ್‌ ಎಂದು ಕಮಲದ ಗುರುತಿಗೆ ಮತಹಾಕಿ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಎಲ್ಲರೂ ಶ್ರಮಿಸುವಂತೆ ಯತ್ನಾಳ ಕರೆ ನೀಡಿದರು.

ಕರ್ನಾಟಕದಲ್ಲಿ ... ಸರ್ಕಾರವಿದೆ. ಈ ರಾಜ್ಯದಲ್ಲಿ ಬುಲ್ಡೋಜರ್‌ ಬಾಬಾ ಮಾದರಿಯ ಸರ್ಕಾರ ಬರಬೇಕಾದಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಮಲದ ಚಿಹ್ನೆಗೆ ಮತಹಾಕಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರು, ಹಿಂದೂಗಳ ಮೇಲೆ ಹಲ್ಲೆ ಮಾಡುವವರಿಗೆ ಜೆಸಿಬಿ, ಎನ್‌ಕೌಂಟರ್‌ ಒಂದೇ ಮಾರ್ಗ ಎಂಬುದನ್ನು ಜನತೆ ಅರಿತುಕೊಳ್ಳಬೇಕಿದೆ ಎಂದರು.

ಉತ್ತರದವರೇ ಸಿಎಂ:

ಈ ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಉ‍ಳಿಯುವುದಿಲ್ಲ. ಈಗಾಗಲೇ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸಲು ಡಿಕೆಶಿ ಆ್ಯಂಡ್‌ ಕಂಪನಿ ಎಲ್ಲ ಸಂಚು ನಡೆಸಿದ್ದಾರೆ. ಈ ಸರ್ಕಾರ ಬಿದ್ದೇ ಬೀಳುತ್ತದೆ. ಮತ್ತೊಮ್ಮೆ ರಾಜ್ಯದಲ್ಲಿ ಚುನಾವಣೆ ನಡೆದು ಜೆಸಿಬಿ ಮಾದರಿಯ ಬಿಜೆಪಿ ಸರ್ಕಾರ ಬರಲಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ