ಪ್ರಹ್ಲಾದ ಜೋಶಿ ₹13.96 ಕೋಟಿ ಆಸ್ತಿ ಒಡೆಯ

KannadaprabhaNewsNetwork |  
Published : Apr 16, 2024, 01:05 AM IST
556456 | Kannada Prabha

ಸಾರಾಂಶ

2019ರ ವೇಳೆ ಪ್ರಹ್ಲಾದ ಜೋಶಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಬಳಿ ₹11.14 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. 2024ರ ಚುನಾವಣೆಯಲ್ಲಿ ₹13.96 ಕೋಟಿ ಎಂದು ಘೋಷಿಸಿದ್ದು, ಐದು ವರ್ಷಗಳಲ್ಲಿ ಜೋಶಿ ಅವರ ಆಸ್ತಿ ₹2.82 ಕೋಟಿ ಏರಿಕೆಯಾಗಿದೆ.

ಧಾರವಾಡ:

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿರುವ ಪ್ರಹ್ಲಾದ ಜೋಶಿ ಅವರು ತಮ್ಮ ಹೆಸರಿನಲ್ಲಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ₹13.96 ಕೋಟಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿರುವ ಜೋಶಿ ತಮ್ಮಲ್ಲಿ ₹ 2.72 ಕೋಟಿ ಚರಾಸ್ತಿ, ₹11.24 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₹13.96 ಕೋಟಿ ಆಸ್ತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಚರಾಸ್ತಿ ಪೈಕಿ ಪ್ರಹ್ಲಾದ ಜೋಶಿ ₹ 1 ಲಕ್ಷ ನಗದು ಹೊಂದಿದ್ದು, ₹12.14 ಲಕ್ಷ ಮೌಲ್ಯದ 184 ಗ್ರಾಂ ಚಿನ್ನದ ಆಭರಣ, ₹3.65 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ಹೊಂದಿದ್ದಾರೆ. ಹಿಂದುಸ್ತಾನ್ ಕೆಮಿಕಲ್‌ ಲ್ಯಾಬರೋಟಿಸ್‌ನಲ್ಲಿ ₹10.78 ಲಕ್ಷ ಹೂಡಿಕೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌, ಎಲ್‌ಐಸಿಗಳಲ್ಲಿ ಹಣ ಹೂಡಿಕೆ ಹಾಗೂ ವಿವಿಧ ಕಂಪನಿಗಳಲ್ಲಿ ಷೇರು ಹೊಂದಿದ್ದಾರೆ.

ಹಾಗೆಯೇ, ಸ್ಥಿರಾಸ್ತಿ ಪೈಕಿ ಹುಬ್ಬಳ್ಳಿಯ ಕೇಶ್ವಾಪುರ, ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ₹2.64 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ ಜೋಶಿ. ಹಾಗೆಯೇ ಹುಬ್ಬಳ್ಳಿಯಲ್ಲಿ ಮನೆ, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಮನೆ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಅಪಾರ ಮೌಲ್ಯದ ಕಟ್ಟಡಗಳನ್ನು ಹೊಂದಿದ್ದಾರೆ. ಹಾಗೆಯೇ, ಜೋಶಿ ಅ‍ವರ ವಿವಿಧ ಬ್ಯಾಂಕ್‌ಗಳಲ್ಲಿ ₹6.63 ಲಕ್ಷ ಸಾಲವನ್ನೂ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು, ಪತ್ನಿ ಜ್ಯೋತಿ ಹೆಸರಿನಲ್ಲಿ ₹5.93 ಕೋಟಿ ಚರಾಸ್ತಿ ಹಾಗೂ ₹86.39 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಚರಾಸ್ತಿ ಪೈಕಿ ₹1.10 ಲಕ್ಷ ನಗದು ಹೊಂದಿದ್ದಾರೆ. ₹33 ಲಕ್ಷ ಮೌಲ್ಯದ 500 ಗ್ರಾಂ ಚಿನ್ನದ ಆಭರಣ, ₹1.46 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ ವಸ್ತು ಹೊಂದಿದ್ದಾರೆ. ಹಾಗೆಯೇ ₹1.37 ಕೋಟಿ ಸಾಲವನ್ನೂ ಜ್ಯೋತಿ ಜೋಶಿ ಅವರು ಮಾಡಿಕೊಂಡಿದ್ದಾರೆ. ಪ್ರಹ್ಲಾದ ಜೋಶಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಈ ಪೈಕಿ ಪುತ್ರಿ ಅನನ್ಯ ಹೆಸರಿನಲ್ಲಿ ₹32 ಲಕ್ಷ (ಚರಾಸ್ತಿ) ಪಿಪಿಎಫ್‌ ಹಾಗೂ ಎಲ್‌ಐಸಿ ಮಾಡಿಸಲಾಗಿದೆ. ಒಟ್ಟಾರೆ ಪ್ರಹ್ಲಾದ ಜೋಶಿ ಅವರ ಕುಟುಂಬದ ಹೆಸರಿನಲ್ಲಿ ₹21.07 ಕೋಟಿ ಆಸ್ತಿ ಇದೆ. ವಿಶೇಷ ಎಂದರೆ ಕುಟುಂಬದ ಯಾರ ಹೆಸರಿನಲ್ಲಿ ಒಂದೂ ಕಾರು ಇಲ್ಲ.

2019ರ ವೇಳೆ ಪ್ರಹ್ಲಾದ ಜೋಶಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಬಳಿ ₹11.14 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. 2024ರ ಚುನಾವಣೆಯಲ್ಲಿ ₹13.96 ಕೋಟಿ ಎಂದು ಘೋಷಿಸಿದ್ದು, ಐದು ವರ್ಷಗಳಲ್ಲಿ ಜೋಶಿ ಅವರ ಆಸ್ತಿ ₹2.82 ಕೋಟಿ ಏರಿಕೆಯಾಗಿದೆ. ಹಾಗೆಯೇ, ಕುಟುಂಬದ ಆಸ್ತಿ 2019ರಲ್ಲಿ ₹14.17 ಕೋಟಿ ಇತ್ತು. 2024ರ ಚುನಾವಣೆಯಲ್ಲಿ ₹21.07 ಕೋಟಿ ಆಗಿದ್ದು, ₹6.9 ಕೋಟಿ ಏರಿಕೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!