ಕನ್ನಡಪ್ರಭ ವಾರ್ತೆ ತುರುವೇಕೆರೆ
ಮಾಯಸಂದ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜನ ಸಾಮಾನ್ಯರ ಸಮಸ್ಯೆಗಳನ್ನು ಅಧಿಕಾರಿಗಳು ಕೂಡಲೇ ಬಗೆಹರಿಸಿದರೆ ಈ ಕಾರ್ಯಕ್ರಮಗಳು ಬೇಕಿಲ್ಲ. ಅಧಿಕಾರಿಗಳ ಆಮಿಷಗಳನ್ನು ಪೂರೈಸಲು ಆಗದೇ ಜನರು ರೋಸಿ ಹೋಗಿದ್ದಾರೆ. ವರ್ಷಾನುಗಟ್ಟಲೆಯಿಂದ ಕಚೇರಿಗೆ ಅಲೆದರೂ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮನಸ್ಸು ಮಾಡಿಲ್ಲ. ವರ್ಷಾನುಗಟ್ಟಲೆಯಿಂದ ಮಾಡದ ಕೆಲಸವನ್ನು ಈಗ ಅಧಿಕಾರಿಗಳು ಮಾಡುತ್ತಾರೆಂಬ ಭರವಸೆ ತಮಗಿಲ್ಲ. ಈ ಹಿಂದೆ ನಡೆದಿರುವ ಜನ ಸ್ಪಂದನ, ಜನತಾದರ್ಶನ ಸೇರಿದಂತೆ ನಡೆದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೂರಾರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದೇನೆ. ಇದುವರೆಗೂ ಆ ಪ್ರಶ್ನೆಗಳಿಗೆ ಆಡಳಿತ ಯಾವ ಕ್ರಮಕೈಗೊಂಡಿದೆ ಎಂಬ ಬಗ್ಗೆ ಮಾಹಿತಿಯೇ ನೀಡಿಲ್ಲ. ಈಗ ಮತ್ತೊಂದು ಕಾರ್ಯಕ್ರಮ. ಇದರಿಂದ ಏನೇನೂ ಪ್ರಯೋಜನವಿಲ್ಲ. ಇವೆಲ್ಲ ನಾಟಕಗಳನ್ನು ಬಿಟ್ಟು ಮುಖ್ಯಮಂತ್ರಿಗಳು ಖಡಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿ ಸಾರ್ವಜನಿಕರ ಮನವಿಗೆ ಸ್ಪಂದಿಸದಿದ್ದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಂಡರೆ ಎಲ್ಲವೂ ಸರಿ ಹೋಗುತ್ತದೆ ಎಂದು ಕಣಕೂರು ಚಂದ್ರಶೇಖರ್ ಹೇಳಿದರು. ಪ್ರಜಾ ಸೇವೆ ಅಭಿಯಾನ ಮಾಡಿರುವುದೇ ಉಂಟು. ಅದರ ಉದ್ದೇಶ ಸಾರ್ವಜನಿಕರು ತಮ್ಮ ನೋವುಗಳನ್ನು ತೋಡಿಕೊಳ್ಳುವುದು ಆಗಿದೆ. ಆದರೆ ಮಾಯಸಂದ್ರದಲ್ಲಿ ನಡೆದ ಪ್ರಜಾ ಸೇವೆ ಅಭಿಯಾನದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ ತೋಡಿಕೊಳ್ಳಲು ಮುಂದಾದಾಗ ಶಾಸಕರು ಜನರನ್ನು ಗದರಿಸುತ್ತಿದ್ದರು.ಅದು ಸರಿಯಲ್ಲ. ಏಕವಚನದಲ್ಲಿ ಸಂಭೋಧಿಸುವುದು ಎಷ್ಟು ಸರಿ. ಜನರೇನು ಇವರ ಗುಲಾಮರಾ?. ಜನರಿಂದ ಆಯ್ಕೆಯಾಗಿರುವ ಅವರು ಜನರಿಗೆ ಹೇಗೆ ಗೌರವ ನೀಡಬೇಕೆಂಬುದನ್ನು ತಿಳಿದಿಲ್ಲ. ಜನರ ಸಮಸ್ಯೆಯನ್ನು ಸಾವಧಾನವಾಗಿ ಕೇಳಬೇಕು, ಅದಕ್ಕೆ ಪರಿಹಾರ ನೀಡುವುದು ಅವರ ಕರ್ತವ್ಯ. ಅದು ಬಿಟ್ಟು ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಕಣಕೂರು ಚಂದ್ರಶೇಖರ್ ಕಿಡಿಕಾರಿದರು.
ಈ ಸಂದರ್ಭದಲ್ಲಿ ರೈತಸಂಘದ ಮುಖಂಡರಾದ ಸುರೇಶ್, ವಿನೋದ್ ಕುಮಾರ್, ಅಶೋಕ್ ಕುಮಾರ್, ವಾಣಿ ಶಿವಕುಮಾರ್, ಗಂಗಾಧರ್, ಪ್ರಭುಸ್ವಾಮಿ, ನಂಜೇಗೌಡ, ಭಾಗ್ಯಮ್ಮ, ಶ್ವೇತಾ, ಪುಟ್ಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.