ಪ್ರಜಾಸೇವಾ ಆಂದೋಲನ ಜನರು-ಸರ್ಕಾರದ ನಡುವಿನ ಸೇತುವೆ

KannadaprabhaNewsNetwork |  
Published : Nov 22, 2026, 02:15 AM IST
ಹುಲಿಕೇರಿ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ತಾ.ಪಂ.ಇಒ ಪ್ರಶಾಂತ ತುರಕಾಣಿ ಮಾತನಾಡಿದರು. | Kannada Prabha

ಸಾರಾಂಶ

ಗ್ರಾಮೀಣ ಜನರ ಕುಂದು-ಕೊರತೆಗಳನ್ನು ಆಲಿಸಲು ಮತ್ತು ಸರ್ಕಾರದ ವಿವಿಧ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಪ್ರಾರಂಭಿಸಿದೆ.

ಅಳ್ನಾವರ:

ಗ್ರಾಮೀಣ ಜನರ ಕುಂದು-ಕೊರತೆಗಳನ್ನು ಆಲಿಸಲು ಮತ್ತು ಸರ್ಕಾರದ ವಿವಿಧ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಪ್ರಾರಂಭಿಸಿದೆ ಎಂದು ತಾಪಂ ಇಒ ಪ್ರಶಾಂತ ತುರಕಾಣಿ ಹೇಳಿದರು.

ತಾಲೂಕಿನ ಹುಲಿಕೇರಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಪ್ರಜಾಸೇವಾ ಆಂದೋಲನವು ಜನಸಾಮಾನ್ಯ ಮತ್ತು ಆಡಳಿತ ವ್ಯವಸ್ಥೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ, ವಿವಿಧ ಇಲಾಖೆಯ ಅಧಿಕಾರಿಗಳೆ ಗ್ರಾಮಗಳಿಗೆ ಬಂದು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದು ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಿದೆ ಎಂದರು.

ಎಸಿಎಫ್ ಕೃತಿಕಾ ಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆಯಿಂದ ರೈತರ ಸಹಭಾಗಿತ್ವದ ಸಮಗ್ರ ವೃಕ್ಷಾಭಿವೃದ್ಧಿಯಲ್ಲಿ ತೇಗಸಿರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರೈತರು ತಮ್ಮ ಕೃಷಿ ಕಾಯಕದ ಜತೆಗೆ ಇಲಾಖೆಯ ಸಹಭಾಗಿತ್ವದಲ್ಲಿ ತಮ್ಮ ಹೊಲದ ರಸ್ತೆಯುದ್ದಕ್ಕೂ ತೇಗದ ಮರಗಳನ್ನು ಹಚ್ಚುವ ಮೂಲಕ ಶೇ.70ರಷ್ಟು ಆದಾಯ ಪಡೆಯಬಹುದು ಎಂದು ತಿಳಿಸಿದರು.

ಪ್ರಜಾಸೇವಾ ಆಂದೋಲನದಲ್ಲಿ ಕಂದಾಯ, ಪಿಡಬ್ಲ್ಯೂಡಿ, ಗ್ರಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭೂಮಾಪನ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಒಟ್ಟು 14 ಅರ್ಜಿಗಳು ಸಲ್ಲಿಕೆಯಾಗಿವೆ. ಕಾರ್ಯಕ್ರಮದಲ್ಲಿ ಶಿರಸ್ತೆದಾರ ಅಜ್ಜಪ್ಪ ಮಂಗಳಗಟ್ಟಿ, ಅರಣ್ಯಾಧಿಕಾರಿ ಬಸಲಿಂಗಪ್ಪ ಬಿ., ಸಿಡಿಪಿಒ ಮಂಜುನಾಥ ಕುಂಬಾರ, ಪಪಂ ಅಧಿಕಾರಿ ಮಹಾಂತೇಶಶ ಬೆಂತೂರ, ಗ್ರಾಮದ ಹಿರಿಯಾರಾದ ಬಸವರಾಜ ಇನಾಮದಾರ, ಗ್ರಾಪಂ ಕಾರ್ಯದರ್ಶಿ ಷಣ್ಮುಖ ಸುಳಗೇಕರ, ಕಂದಾಯ ನಿರೀಕ್ಷಕ ಸಂಪತಕುಮಾರ ಗುರುಒಡೆಯರ, ಕೃಷಿ ಅಧಿಕಾರಿ ಗುರುಪ್ರಸಾದ ಹಿರೇಮಠ ವಿವಿಧ ಇಲಾಖೆ ಅಧಿಕಾರಿಗಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀರೇಶ್ವರ ಸಂಸ್ಥೆಗೆ ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್ ರಾಷ್ಟ್ರೀಯ ಗೌರವ
ಬಸವಣ್ಣನವರ ಅವಹೇಳನ: ಅಥಣಿಯಲ್ಲಿ ಆಕ್ರೋಶ