ಕನ್ನಡಪ್ರಭ ವಾರ್ತೆ ಶಿಕಾರಿಪುರ
ಮಂಗಳವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಪ್ರಜಾಸೇವೆ ಆಂದೋಲನಾ ಸಭೆ ಉದ್ಘಾಟಿಸಿ ಮಾತನಾಡಿ, ಜನರು ತಮಗೆ ಆಗಬೇಕಾದ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆದಾಡುತ್ತಾ ಇರುತ್ತಾರೆ, ಆದರೆ ಈ ಕಾರ್ಯಕ್ರಮದಿಂದ ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಜನರ ಸಮಸ್ಯೆ ತುರ್ತಾಗಿ ಇತ್ಯರ್ಥಪಡಿಸಲು ಅನುಕೂಲವಾಗುತ್ತದೆ, ಜನರು ಮಂತ್ರಿಗಳನ್ನು ಹುಡುಕಿಕೊಂಡು ಬರುವುದು ಈ ಕಾರ್ಯಕ್ರಮದಿಂದ ತಪ್ಪುತ್ತದೆ. ಜನತೆ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈಗ ಜನತೆ ನೀಡುವ ಅಹವಾಲು ಅರ್ಜಿಗಳನ್ನು ಸಂಬಂದಿಸಿದ ಇಲಾಖೆಯವರು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು, ಜನರ ಸಮಸ್ಯೆಗಳ ಅರ್ಜಿಗಳ ಮಾಹಿತಿ ಸಿ.ಎಂ ಲಾಗಿನ್‌ಗೆ ಹೋಗುತ್ತದೆ, ನಾನೂ ಸೇರಿ ಅಧಿಕಾರಿಗಳು ಸಬೂಬು ಹೇಳಲು ಸಾಧ್ಯವಿಲ್ಲ. ಇದೊಂದು ಸೇವಾ ಕಾರ್ಯ, ಮುಖ್ಯವಾಗಿ ಅಧಿಕಾರಿ ವರ್ಗದವರು ಈ ಯೋಜನೆ ಗಂಭೀರವಾಗಿ ಪರಿಗಣಿಸಬೇಕು ಎಂದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರತಿ ಸರ್ಕಾರಗಳೂ ಪ್ರಜಾಸೇವೆ ಮಾಡಿಕೊಂಡು ಬರುತ್ತಿವೆ, ಇವುಗಳು ಯಶಸ್ವಿಯಾಗಲು ಅಧಿಕಾರಿಗಳ ಸಮಯ ಪ್ರಜ್ಞೆಯ ಅಗತ್ಯವಿದೆ. ಕಂದಾಯ ಮತ್ತು ಆರ್ ಡಿ ಪಿ ಆರ್ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದಾಖಲೆಯನ್ನು ಸಚಿವ ಖಂಡ್ರೆಯವರು ಬಿಡುಗಡೆ ಮಾಡಿದ್ದಾರೆ. ದೇವರ ದಯೆಯಿಂದ ಶಿವಮೊಗ್ಗ ಜಿಲ್ಲೆ ಹತ್ತನೇ ಸ್ಥಾನದಲ್ಲಿದೆ, ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.
ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಸೊರಬ, ಹೊರತುಪಡಿಸಿದರೆ ಶಿಕಾರಿಪುರ ತಾಲೂಕು ಎರಡನೇ ಸ್ಥಾನದಲ್ಲಿದೆ. ಸಚಿವ ಈಶ್ವರ್ ಖಂಡ್ರೆಯವರು ಬಿಡುಗಡೆಮಾಡಿದ ಪಟ್ಟಿಯಲ್ಲಿ ಜಿಲ್ಲೆಯಲ್ಲಿನ 4351 ಕೆರೆಯಲ್ಲಿ 1017 ಕೆರೆಗಳು ಒತ್ತುವರಿಯಾಗಿವೆ. 488 ಒತ್ತುವರಿ ಮುಕ್ತವಾಗಿವೆ. 539 ಕೆರೆಗಳು ಇನ್ನೂ ಮುಕ್ತವಾಗಿಲ್ಲ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಉಳಿದ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಬೇಕು ಎಂದರು.
ಬರಗಾಲದಲ್ಲಿ ರೈತರಿಗೆ ಕಣ್ಣೀರು ಹಾಕಿಸುವ ಕೆಲಸ ದಯವಿಟ್ಟು ಮಾಡಬೇಡಿ ಎಂದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಜಿಪಂ ಸಿಇಒ ಹೇಮಂತ್, ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ತಹಸೀಲ್ದಾರ್ ವಾಣಿ, ಇಒ ನಾಗರಾಜ್ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.