ಕನ್ನಡಪ್ರಭ ವಾರ್ತೆ ಸುರಪುರ
ಸಿಎಂ ಸಿದ್ದರಾಮಯ್ಯ ಅವರು ಭಾರಿ ಬುದ್ಧಿವಂತರಿದ್ದಾರೆ. ಈ ತರಹದ ವಿಚಾರದಲ್ಲಿ ಹೇಗೆ ರಾಜಕಾರಣ ಮಾಡಬೇಕು ಅಂತ ಚೆನ್ನಾಗಿ ಸಲಹೆಗಳನ್ನು ನೀಡುತ್ತಾರೆ. ಆದರೆ, ಇದ್ಯಾವುದು ಕೂಡ ಬಿಜೆಪಿಗೆ ಹಿನ್ನಡೆ ಆಗುವುದಿಲ್ಲ. 2ನೇ ಹಂತದಲ್ಲಿ ಹತಾಶರಾಗಿ ಮತದಾರರ ಗಮನ ಬೇರೆಡೆ ಸೆಳೆಯೋಕೆ ಸಿಎಂ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ರಾಜ್ಯದ ಮತದಾರರು ಬಿಜೆಪಿ ಪರವಾಗಿದ್ದು, ಮೋದಿ ಮತ್ತೆ ಪ್ರಧಾನಿ ಆಗಲಿ ಎಂದು ಆಶಿಸುತ್ತಾರೆ. ಪ್ರಸ್ತುತ ದೇಶದಲ್ಲಿ ಮೋದಿಯವರ ಪರ ಅಲೆಯಿದೆ. ರಾಹುಲ್ ಗಾಂಧಿಗೆ ದಿಕ್ಕು ತೋಚದಂತಾಗಿದೆ. ಜನರನ್ನ ಯಾಮಾರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದರು. ಇವತ್ತು ಅವರಿಗೆ ಸತ್ಯ ಅರಿವಾಗಿದೆ ಎಂದು ಮಾತಿನಲ್ಲಿ ಕುಟುಕಿದರು.ಮೈಸೂರು ಕರ್ನಾಟಕ ಭಾಗದಲ್ಲಿ ಮೊದಲ ಹಂತದ ಚುನಾವಣೆ ಸಮಾಪ್ತಿಯಾಗಿದೆ. 14 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಅದರಂತೆಯೇ, ಎರಡನೇ ಹಂತದ ಚುನಾವಣೆಯಲ್ಲಿಯೂ ಖಂಡಿತವಾಗಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.