ರಾಮನಗರ: ಸಂಸದ ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ. ಬದಲಿಗೆ ತಂದೆಗೆ ತಕ್ಕ ಮಗ ಆಗಿದ್ದಾನೆ. ಆದ್ದರಿಂದಲೇ ಇವಲ್ಲವೂ ಚರ್ಚೆ ಆಗುತ್ತಿವೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ಹಗರಣಗಳು ಅಮಿತ್ ಶಾಗೆ ಮೊದಲೇ ಗೊತ್ತಿತ್ತು. ಆ ಸಿಡಿಗಳೆಲ್ಲ ಅಮಿತ್ ಶಾ ಕೈ ಸೇರಿದ್ದರಿಂದಲೇ ಅವರು ಟಿಕೆಟ್ ಬೇಡ ಅಂದಿದ್ರು. ಆದರೂ ದೇವೇಗೌಡರು ಮೊಮ್ಮಗನ ವ್ಯಾಮೋಹಕ್ಕೆ ಟಿಕೆಟ್ ಕೊಟ್ಟರು. ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಬಹುದಿತ್ತು ಎಂದು ಹೇಳಿದರು.
ಈ ಪ್ರಕರಣದಲ್ಲಿ ಕಾಂಗ್ರೆಸ್ ಅವರನ್ನು ವಿಲನ್ ಮಾಡುತ್ತಿದ್ದಾರೆ. ವೀಡಿಯೋ ಮಾಡಿದ್ದು ಜೆಡಿಎಸ್ ಸಂಸದ, ವೀಡಿಯೋ ಸಿಡಿ ಮಾಡಿ ಹಂಚಿದ್ದು ಬಿಜೆಪಿಯ ದೇವರಾಜೇಗೌಡ. ಆದರೆ, ಆರೋಪ ಮಾಡಿ ಕಾಂಗ್ರೆಸ್ ಪಕ್ಷದವರನ್ನು ವಿಲನ್ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ? ನಾವೇನು ಸಿಡಿ ಫ್ಯಾಕ್ಟರಿ ಇಟ್ಟುಕೊಂಡಿದ್ದೇವಾ, ವೀಡಿಯೋ ಮಾಡಿ ತಂದು ಕೊಡಿ ಅಂತ ಹೇಳಿದ್ವಾ? ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಒಬ್ಬ ಮಾಜಿ ಸಿಎಂ. ಸ್ವಲ್ಪ ಗಂಭೀರವಾಗಿ ಇರೋದನ್ನ ಕಲಿಯಬೇಕು. ಎರಡು ಬಾರಿ ಸಿಎಂ ಆಗಿದ್ದವರು, ಚಿಲ್ಲರೆ ಹುಡುಗರ ರೀತಿ ಮಾತನಾಡೋದನ್ನ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗಲು ಕುಮಾರಸ್ವಾಮಿ ಅವರೇ ಕಾರಣ. ನೀವೇ ಪ್ರತಿನಿತ್ಯ ಮಾಧ್ಯಮದಲ್ಲಿ ತೋರಿಸುತ್ತಿದ್ದೀರಿ. ಇವತ್ತು ಏನಾದರು ಕಾನೂನು ಸುವ್ಯವಸ್ಥೆ ಹಾಳಾಗಿದ್ದರೆ ಅದಕ್ಕೆ ಕುಮಾರಸ್ವಾಮಿ ಅವರೇ ಕಾರಣ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ 100 ಕೋಟಿ ಡೀಲ್ ನಡೆದಿದೆ ಎಂಬ ದೇವರಾಜೇಗೌಡ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ದೇವರಾಜೇಗೌಡ ಯಾರು ಅಂತಾ ಎಲ್ಲರಿಗೂ ಗೊತ್ತು. ಮೊದಲು ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದರು. ಆಮೇಲೆ ನಮ್ಮ ವಿರುದ್ಧ ಮಾತನಾಡಲು ಶುರು ಮಾಡಿದ್ದಾನೆ. ಇದೆಲ್ಲಾ ಬಿಜೆಪಿಯವರು ಅವನ ಕೈಯಲ್ಲಿ ಆಟ ಆಡಿಸುತ್ತಿದ್ದಾರೆ. ಬಿಜೆಪಿಯರು ಯಾವ ರೀತಿ ಕೀ ಕೊಡುತ್ತಾರೊ ಆ ರೀತಿ ದೇವರಾಜೇಗೌಡ ಆಡುತ್ತಿದ್ದಾನೆ ಎಂದು ಹೇಳಿದರು.
ನಾವೇನೂ ಬಳೆ ತೊಟ್ಕೊಂಡು ಕೂತಿಲ್ಲ, ನಮಗೂ ಫೋಟೋ ಸುಡೋಕೆ ಬರುತ್ತೆರಾಮನಗರ: ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ಮಾಡಿಸಿ ಪೋಸ್ಟರ್ ಸುಟ್ಟು ಹಾಕಿ ಚಪ್ಪಲಿಯಲ್ಲಿ ಹೊಡಿಸುತ್ತೀರಾ ಕುಮಾರಸ್ವಾಮಿ ಅವರೇ. ನಾವು ತಾಳ್ಮೆಯಿಂದ ಇದ್ದೇವೆ. ಅಂದ ಮಾತ್ರಕ್ಕೆ ನಾವೇನೂ ಬಳೆ ತೊಟ್ಟುಕೊಂಡು ಕೂತಿಲ್ಲ. ನಮಗೂ ಫೋಟೋಗೆ ಬೆಂಕಿ ಇಟ್ಟು ಸುಡಲು ಬರುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಗಡಿ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ಗೆ ಸಿಡಿ ಮಾಡಿ ಅಂತಾ ಯಾರಾದರು ಹೇಳಿದ್ದರಾ? ಡಿ.ಕೆ. ಶಿವಕುಮಾರ್ ಆಗಲಿ ನಾವೇನಾದರೂ ಫೋನ್ ಮಾಡಿ ಹೇಳಿದ್ವಾ, ಕುಮಾರಸ್ವಾಮಿಗೆ ತಲೆ ಕೆಟ್ಟಿದೆ ಅದಕ್ಕೆ ಏನೇನೋ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ವಿರುದ್ಧವೇ ಆರೋಪ ಮಾಡುತ್ತಾರೆ. ಕುಮಾರಸ್ವಾಮಿಗೆ ನಿದ್ದೆಗಣ್ಣಲ್ಲೂ ಡಿಕೆಶಿ ಕಾಣುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ಕುಮಾರಸ್ವಾಮಿ ಆಟ ನಡೆಯೋದಿಲ್ಲ. ಡಿ.ಕೆ.ಶಿವಕುಮಾರ್ ಎಲ್ಲಿ ಒಕ್ಕಲಿಗ ನಾಯಕರಾಗ್ತಾರೋ. ಎಲ್ಲಿ ನನ್ನ ನಾಯಕತ್ವ ಕೈತಪ್ಪುತ್ತೊ ಅಂತಾ ಕುಮಾರಸ್ವಾಮಿ ಈ ರೀತಿ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ರಾಮನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು.