ಎಂತದ್ದೇ ಪರಿಸ್ಥಿತಿಯಲ್ಲಿ ಸಕಾರಾತ್ಮಕವಾಗಿರುವುದನ್ನು ಕಲಿಸಿದ ಪ್ರಕಾಶ್ ಮಣಿಜಿ: ಬಿ.ಕೆ.ಕಲೈವಾಣಿ

KannadaprabhaNewsNetwork |  
Published : Aug 30, 2026, 01:15 AM IST
ಡಾ. ಪ್ರಕಾಶ್ ಮಣಿಜೀ ಅವರ 19 ನೇ ಪುಣ್ಯ ಸ್ಮೃತಿ ದಿನ ವಿಶ್ವ ಬಂಧುತ್ವ ಪ್ರಯುಕ್ತ ತರೀಕೆರೆಯಲ್ಲಿ ಬೃಹತ್ ರಕ್ತದಾನ ಶಿಬಿರ   | Kannada Prabha

ಸಾರಾಂಶ

ತರೀಕೆರೆರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ.ಪ್ರಕಾಶ್ ಮಣಿಜಿ ಎಲ್ಲಾ ಪರಿಸ್ಥಿತಿಗಳಲ್ಲೂ ಮನಸ್ಸನ್ನು ಶಾಂತ, ಸ್ಥಿರ, ಸಕಾರಾತ್ಮಕವಾಗಿ ಇಟ್ಟುಕೊಂಡು ಜೀವನ ಮಾಡುವುದನ್ನು ಕಲಿಸಿದರು ಎಂದು ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಸಂಚಾಲಕರಾದ ಸಹೋದರಿ ರಾಜಯೋಗಿನಿ ಬ್ರಹ್ಮಕುಮಾರಿ ಬಿ.ಕೆ. ಕಲೈವಾಣಿ ಹೇಳಿದ್ದಾರೆ.

19 ನೇ ಪುಣ್ಯ ಸ್ಮೃತಿ ದಿನ ವಿಶ್ವ ಬಂಧುತ್ವ ಪ್ರಯುಕ್ತ ತರೀಕೆರೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ತರೀಕೆರೆ

ರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ.ಪ್ರಕಾಶ್ ಮಣಿಜಿ ಎಲ್ಲಾ ಪರಿಸ್ಥಿತಿಗಳಲ್ಲೂ ಮನಸ್ಸನ್ನು ಶಾಂತ, ಸ್ಥಿರ, ಸಕಾರಾತ್ಮಕವಾಗಿ ಇಟ್ಟುಕೊಂಡು ಜೀವನ ಮಾಡುವುದನ್ನು ಕಲಿಸಿದರು ಎಂದು ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಸಂಚಾಲಕರಾದ ಸಹೋದರಿ ರಾಜಯೋಗಿನಿ ಬ್ರಹ್ಮಕುಮಾರಿ ಬಿ.ಕೆ. ಕಲೈವಾಣಿ ಹೇಳಿದ್ದಾರೆ.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾದಿ ಡಾ. ಪ್ರಕಾಶ್ ಮಣಿಜೀ ಯವರ 19 ನೇ ಪುಣ್ಯ ಸ್ಮೃತಿ ಅಂಗವಾಗಿ ವಿಶ್ವ ಬಂಧುತ್ವದ ದಿನವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಬೃಹತ್ ರಕ್ತದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಾದಿ ಪ್ರಕಾಶಮಣಿ ಜೀ 140 ರಾಷ್ಟ್ರಗಳಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯ ಸ್ಥಾಪಿಸಿ ನಮ್ಮ ಭಾರತೀಯ ಸಂಸ್ಕೃತಿಯ, ಜೊತೆ ಆಧ್ಯಾತ್ಮಿಕ ಜ್ಞಾನ ಹಾಗೂ ರಾಜಯೋಗ ಕಲಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಾ ತಜ್ಞರು ಡಾ, ದೇವರಾಜ್ ಮಾತನಾಡಿ ಇಂದು ರಕ್ತದ ಅವಶ್ಯಕತೆ ತುಂಬಾ ಇದೆ. ರಕ್ತ ಮಾನವ ದೇಹ ಮಾತ್ರ ಉತ್ಪತ್ತಿ ಮಾಡಲು ಸಾಧ್ಯ, ಆದ ಕಾರಣ ಹೆಚ್ಚು ಪೌಷ್ಟಿಕಾಂಶದ ಆಹಾರ ಸೇವಿಸಬೇಕು ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತರೀಕೆರೆ ಶಾಖೆ ಚೇರ್ಮನ್ ಬಿ. ಪಿ. ಚಂದ್ರಶೇಖರ್ ಮಾತನಾಡಿ ನಾವೆಲ್ಲ ಸಂಘ ಸಂಸ್ಥೆಗಳು ಒಂದಾಗಿ ಈ ಸೇವೆ ಯಶಸ್ವಿಯಾಗಿಸೋಣ. ತರೀಕೆರೆ ತಾಲೂಕಿನಲ್ಲಿ ಈಗ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.

ವಿಶೇಷವಾಗಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಈ ಸಂಸ್ಥೆ ಸಹೋದರಿಯರು ಎಲ್ಲರಿಗೂ ರಾಖಿ ಕಟ್ಟಿ ಭಾರತದಲ್ಲಿ ವಸುದೇವ ಕುಟುಂಬಕಂ ವಾಕ್ಯ ಸಾಕಾರಗೊಳಿಸಬೇಕು ಎಂದು ಪ್ರಾರ್ಥಿಸಿದರು. ತರೀಕೆರೆ ರೋಟರಿ ಕ್ಲಬ್ ಕಾರ್ಯದರ್ಶಿ ಪ್ರವೀಣ್ ಕುಮಾರ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ತರೀಕೆರೆ ಲಯನ್ ಕ್ಲಬ್ ಅಧ್ಯಕ್ಷ ಪ್ರದಿಪ್ ಕುಮಾರ್ ಟಿ. ಎನ್. ಚಿಕ್ಕಮಗಳೂರು ಮುಖ್ಯ ರಕ್ತ ನಿಧಿ ಕೇಂದ್ರದ ಡಾ. ಭರತ್ ಜಿ. ಕೆ. ಮಾತನಾಡಿದರು.

ಲಯನ್ ಕ್ಲಬ್ ಉಪಾಧ್ಯಕ್ಷ ಟಿ. ಎಂ. ರಾಜು, ಕಾರ್ಯದರ್ಶಿ ಏಜಾಜ್ ಪಾಶ ಮತ್ತಿತರರು ಭಾಗವಹಿಸಿದ್ದರು.

29ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಬಿ.ಕೆ.ಕಲೈವಾಣಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತರೀಕೆರೆ ಶಾಖೆ ಚೇರ್ಮನ್ ಬಿ. ಪಿ. ಚಂದ್ರಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಾ ತಜ್ಞ ಡಾ, ದೇವರಾಜ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಆರ್ಥಿಕ ಅಭಿವೃದ್ಧಿಗೆ ಧಗ್ರಾಯೋ ಸಹಕಾರಿ
ಪಡಿತರ ಅಕ್ಕಿ-ರಾಗಿ ಅಕ್ರಮ ಸಾಗಾಟ ಅಪಘಾತದಲ್ಲಿ ಬಯಲು!