ದಾವಣಗೆರೆ ನಗರದ ತ್ರಿಶೂಲ್ ಚಿತ್ರ ಮಂದಿರ ಸಮೀಪದ ಹಳೇ ಅಪೂರ್ವ ಹೋಟೆಲ್ ಬಳಿ ಶನಿವಾರ ರಾಮರಾಜ್ ಬಟ್ಟೆ ಅಂಗಡಿ ಎದುರಿನ ಹಳೇ ಪಿ.ಬಿ. ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ, ಪುರಾತನ ಕಾಲದ ರೂಪದಲ್ಲಿದ್ದ ಆಟೋ ರಿಕ್ಷಾವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಅಪಘಾತವಾದ ಆಟೋ ರಿಕ್ಷಾಗೆ ನಂಬರ್ ಪ್ಲೇಟ್ ಸಹ ಇರಲಿಲ್ಲ. ಆಟೋ ತುಂಬಾ ತುಂಬಿದ್ದ ಅಕ್ಕಿ, ರಾಗಿ ಚೀಲಗಳು ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾದವು. ಇದರಿಂದಾಗಿ ಚಾಲಕ ಆಟೋರಿಕ್ಷಾ ಹಾಗೂ ಅಕ್ಕಿ, ರಾಗಿ ಚೀಲಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

- ಅಪಘಾತ ಆಗುತ್ತಿದ್ದಂತೆ ಕಾಲ್ಕಿತ್ತ ಆಟೋ ಚಾಲಕ ಕಂ ಖರೀದಿದಾರ - - -

ದಾವಣಗೆರೆ: ನಗರದ ತ್ರಿಶೂಲ್ ಚಿತ್ರ ಮಂದಿರ ಸಮೀಪದ ಹಳೇ ಅಪೂರ್ವ ಹೋಟೆಲ್ ಬಳಿ ಶನಿವಾರ ರಾಮರಾಜ್ ಬಟ್ಟೆ ಅಂಗಡಿ ಎದುರಿನ ಹಳೇ ಪಿ.ಬಿ. ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ, ಪುರಾತನ ಕಾಲದ ರೂಪದಲ್ಲಿದ್ದ ಆಟೋ ರಿಕ್ಷಾವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಅಪಘಾತವಾದ ಆಟೋ ರಿಕ್ಷಾಗೆ ನಂಬರ್ ಪ್ಲೇಟ್ ಸಹ ಇರಲಿಲ್ಲ. ಆಟೋ ತುಂಬಾ ತುಂಬಿದ್ದ ಅಕ್ಕಿ, ರಾಗಿ ಚೀಲಗಳು ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾದವು. ಇದರಿಂದಾಗಿ ಚಾಲಕ ಆಟೋರಿಕ್ಷಾ ಹಾಗೂ ಅಕ್ಕಿ, ರಾಗಿ ಚೀಲಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಕೆಎಂಎಫ್‌ ಮುದ್ರೆ ಹೊಂದಿರುವ ಚೀಲಗಳಲ್ಲಿ ಸುಮಾರು 75 ಕೆಜಿ ತೂಕದ 4 ಪ್ಯಾಕೆಟ್‌ ಅಕ್ಕಿ, 3 ಪ್ಯಾಕೆಟ್ ರಾಗಿ ಸಾಗಿಸುತ್ತಿದ್ದುದು ಘಟನೆಯಿಂದ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ರಿಕ್ಷಾದ ಗಾಜು ಪುಡಿಪುಡಿಯಾಗಿವೆ. ಡಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದ ಅಕ್ಕಿ, ರಾಗಿ ಚೀಲಗಳು ಹರಿದುಹೋಗಿವೆ. ಅಕ್ಕಿ, ರಾಗಿ ಧಾನ್ಯಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಾಯಾಳು ಬೈಕ್ ಸವಾರನನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದು, ಅಪಘಾತಕ್ಕೆ ಕಾರಣವಾದ ಅಕ್ರಮ ಅಕ್ಕಿ, ರಾಗಿ ಸಾಗಿಸುತ್ತಿದ್ದ ಆರೋಪಿ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಸೂಕ್ತ ಕ್ರಮ, ತನಿಖೆ ನಡೆಯಬೇಕಿದೆ.

ಪಡಿತರ ಅಕ್ಕಿ, ರಾಗಿಯನ್ನು ಅಕ್ರಮವನ್ನು ಸಾಗಿಸುತ್ತಿದ್ದುದನ್ನು ಗ್ರಹಿಸಿದ ಸಾರ್ವಜನಿಕರು ತಕ್ಷಣವೇ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಆಹಾರ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿದ್ದ ಅಕ್ಕಿ, ರಾಗಿ ಸಮೇತ ಆಟೋ ರಿಕ್ಷಾವನ್ನು ಜಪ್ತಿ ಮಾಡಿದ್ದಾರೆ. ಪಡಿತರ ಅಕ್ಕಿ, ರಾಗಿ ಖರೀದಿಸುವ ದಂಧೆ, ಮಾರಾಟ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳಿಂದ ಜಂಟಿಯಾಗಿ ತನಿಖೆ ಆಗಲಿ ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

- - -

-29ಕೆಡಿವಿಜಿ8, 9: