ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಅಗ್ರಹಾರದ ಶಿವಶ್ರೀ ವಿದ್ಯಾರ್ಥಿನಿಯರ ನಿಲಯದಲ್ಲಿ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಎಸ್. ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣುಗಳನ್ನು ವಿತರಿಸಿ ಮಾತನಾಡಿದ ಅವರು, ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಯೋಗ ಭಾರತದ ಋಷಿ, ಮುನಿಗಳ ಅದ್ಭುತ ಅನ್ವೇಷಣೆ. ವಿಶ್ವವೇ ಇಂದು ಯೋಗಕ್ಕೆ ಮಾರು ಹೋಗುತ್ತಿದೆ ಎಂದರು.
ಶಿವಶ್ರೀ ವಿದ್ಯಾರ್ಥಿನಿಯರನಿಲಯದ ಮುಖ್ಯಸ್ಥರಾದ ಪ್ರಭಾಮಣಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವ್, ಹೊಯ್ಸಳ ಕರ್ನಾಟಕ ಸಂಘದ ಕಾರ್ಯದರ್ಶಿ ರಂಗನಾಥ್, ಯಶ್ವಂತ್ ಕುಮಾರ್, ಛಾಯಾ, ಮಹದೇವ್, ಮಹೇಶ್, ಎಸ್.ಪಿ. ಅಕ್ಷಯ್ ಪ್ರಿಯದರ್ಶನ್, ಶ್ರೀಧರ್, ಹರ್ಷಿತ್ ಇದ್ದರು.