ಕನ್ನಡ ಪ್ರಭವಾರ್ತೆ ಕೆ.ಎಂ.ದೊಡ್ಡಿ
ಹಿಂದಿನ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಕೆ.ಎಂ.ಜೀವಿತಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಪ್ರಕಾಶ್ ಮತ್ತು ಶೈಲಜಾ ಹೊರತು ಪಡಿಸಿ ಬೇರೆ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದ ಘೋಷಿಸಿದರು.
ಗ್ರಾಪಂನಲ್ಲಿ ಒಟ್ಟು 15 ಸದಸ್ಯರನ್ನು ಹೊಂದಿದ್ದು ಇಬ್ಬರು ಸದಸ್ಯರಾದ ಕೃಷ್ಣ ಮತ್ತು ಗೈರು ಹಾಜರಾಗಿದ್ದರು. ಉಳಿದ 13 ಮಂದಿ ಚುನಾವಣಾ ಪ್ರಕ್ರಿಯಲ್ಲಿ ಭಾಗವಹಿಸಿದ್ದರು.ನೂತನ ಅಧ್ಯಕ್ಷ ತೊರೆಚಾಕನಹಳ್ಳಿ ಪ್ರಕಾಶ್ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ಮಾಡಿರುವ ನಾಯಕರಾದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರ ಮಾರ್ಗದರ್ಶನದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಶಕ್ತಿ ಮೀರಿ ಶ್ರಮಿಸಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಆನೆಗೊಳ ಗ್ರಾಪಂ ವ್ಯಾಪ್ತಿ ರೈತ ಸಂಘಟನೆ ವಿಲೀನ: ಸಿ.ಎನ್.ಮಂಜಪ್ಪ
ಕೆ.ಆರ್.ಪೇಟೆ ತಾಲೂಕಿನ ಆನೆಗೊಳ ಗ್ರಾಪಂ ವ್ಯಾಪ್ತಿಯ ರೈತ ಸಂಘಟನೆಯನ್ನು ಅಸ್ಥಿತ್ವಕ್ಕೆ ತಂದಿದ್ದು, ಸದರಿ ಸಂಘವು ರಾಜ್ಯ ರೈತ ಸಂಘಕ್ಕೆ ವಿಲೀನಗೊಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎನ್.ಮಂಜಪ್ಪ ತಿಳಿಸಿದರು.
ಸಂಘದ ಕಾರ್ಯಾಧ್ಯಕ್ಷರಾಗಿ ಎ.ಜೆ.ಮಂಜೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್, ಖಜಾಂಚಿಯಾಗಿ ಸುರೇಶ್ ಸಿ.ವೈ, ಉಪಾಧ್ಯಕ್ಷರಾಗಿ ಶಿವಲಿಂಗೇಗೌಡ ಸಿ.ಇ, ಸಮರ್ಥ, ಚಮರಾಜೇಗೌಡ ಎ.ಎನ್, ಸಂಘಟನಾ ಕಾರ್ಯದರ್ಶಿಯಾಗಿ ರಾಮೇಗೌಡ ಸಿ.ಟಿ, ಲೆಕ್ಕ ಪರಿಶೋಧಕರಾಗಿ ಬಿ.ಎಸ್.ನಿಂಗರಾಜು, ಮಹಿಳಾ ಸಂಘಟನ ಕಾರ್ಯದರ್ಶಿಗಳಾಗಿ ಗೀತಾ.ಎಂ.ಕೆ, ಸುಮಾ, ಸಹ ಕಾರ್ಯದರ್ಶಿಗಳಾಗಿ ನಾಗೇಶ್ ಗೌಡ, ವಿಜಿಕುಮಾರ್ ಸಿ.ಟಿ, ರತ್ನಕುಮಾರ್, ಅವಿಜಿತ್, ಧರ್ಮರಾಜ, ಹರೀಶ್ ಅವರುಗಳನ್ನು ಪುಟ್ಟೇಗೌಡರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರವೇಶ ನೀಡಿದ್ದರಿಂದಾಗಿ ಬಸ್‌ಗಳು ಸಂಪೂರ್ಣ ಭರ್ತಿಯಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದಂತಹ ಪರಿಸ್ಥಿತಿ ಎದುರಾಗಿದೆ. ಇದರ ವಿರುದ್ಧವೂ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.