ಹತ್ಯೆಕೋರರ ಬಂಧನಕ್ಕೆ ಪ್ರಣವಾನಂದಶ್ರೀ ಆಗ್ರಹ

KannadaprabhaNewsNetwork |  
Published : Nov 17, 2024, 01:15 AM IST
ಚಿತ್ರದುರ್ಗ ಪೋಟೋ ಸುದ್ದಿ 11 | Kannada Prabha

ಸಾರಾಂಶ

Pranavanandashree demands arrest of murderers

-ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ನಡೆದಿದ್ದ ಮಹಿಳೆ ಹತ್ಯೆ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ಮಹಿಳೆಯ ಕೊಲೆಯಾಗಿ ಮೂರು ದಿನಗಳಾಗಿದ್ದರೂ ಇನ್ನು ಸುಳಿವು ಪತ್ತೆಯಾಗಿಲ್ಲ. ವಿಶೇಷ ತನಿಖಾ ತಂಡ ರಚಿಸಿ ಕೊಲೆಗೈದವರ ಪತ್ತೆಹಚ್ಚಬೇಕೆಂದು ಬ್ರಹ್ಮಶ್ರಿ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ.ಪ್ರಣವಾನಂದಸ್ವಾಮೀಜಿ ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಡಿಗ ಸಮುದಾಯಕ್ಕೆ ಸೇರಿದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಹದಿಮೂರು ದಿನಗಳು ಕಾಯುತ್ತೇವೆ. ಕೊಲೆಗಡುಕರನ್ನು ಬಂಧಿಸದಿದ್ದರೆ ಇದೇ ತಿಂಗಳ 30 ರಂದು ಜಿಲ್ಲಾ ರಕ್ಷಾಣಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೂರುವುದಾಗಿ ಸ್ವಾಮೀಜಿ ಗಡುವು ನೀಡಿದರು.

ಮೂರು ನಾಲ್ಕು ದಿನಗಳಲ್ಲಿ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ಅವರ ಭೇಟಿಯಾಗಿ ಮಹಿಳೆಯ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತೇವೆ. ನ್ಯಾಯಾಲಯದ ಮೊರೆ ಹೋಗುವುದಕ್ಕಾಗಿ ವಕೀಲರ ಜೊತೆಯೂ ಚರ್ಚಿಸುತ್ತೇನೆ. ಮಹಿಳೆಯ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್ಎಲ್.ವರದಿಯನ್ನು ಬೇಗನೆ ತರಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಾ.ಪ್ರಣವಾನಂದಸ್ವಾಮೀಜಿ ಆಪಾದಿಸಿದರು. ತಿಪ್ಪೇಶ್, ಮಹಾಂತೇಶ್, ಮೋಹನ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

---------------------

ಪೋಟೋ: ಉಪ್ಪರಿಗೇನಹಳ್ಳಿಯಲ್ಲಿ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಪ್ರಣವಾನಂದಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

16 ಸಿಟಿಡಿ4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''