ಬೆಳ್ತಂಗಡಿ: ತಾಲೂಕಿನಲ್ಲಿ ನಡೆಯುವ ಎಲ್ಲ ಜನಪರ ವಿಶೇಷ ಕಾರ್ಯಕ್ರಮಗಳು ಇನ್ನೂ ಮುಂದೆಯೂ ಶಾಸಕರ ನೇತೃತ್ವದಲ್ಲಿ ನಡೆಯಲಿ. ನಾವೆಲ್ಲಾ ಹಿಂದು ಎಲ್ಲಾ ಸಮುದಾಯದವರು ನನ್ನವರು ಎಂದು ಭಾವನೆ ಇನ್ನಷ್ಟು ಮೂಡಲಿ ಎಂದು ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ.ಕೃಷ್ಣಪ್ರಸಾದ್ ಹೇಳಿದರು.
ಶಾಸಕರ ಪತ್ರ ಮುಖೇನ ನಮ್ಮ ನೇತ್ರಾಲಯಕ್ಕೆ ಅಂಧ ವ್ಯಕ್ತಿಗಳು ಬಂದರೆ ಅಂತಹವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಶಾಸಕರ ಸಹಯೋಗದೊಂದಿಗೆ ಬೆಳ್ತಂಗಡಿಯನ್ನು ಅಂಧಮುಕ್ತ ತಾಲೂಕನ್ನಾಗಿ ಮಾಡಲಾಗುವುದು ಎಂದರು.ಶಾಸಕ ಕಾರ್ಯಕ್ರಮವನ್ನು ಹರೀಶ್ ಪೂಂಜ ಉದ್ಘಾಟಿಸಿ ತಾಲೂಕಿನಲ್ಲಿರುವ ಎಲ್ಲ ಕೇರಳ ಸಂಪ್ರದಾಯದವರನ್ನು ಒಗ್ಗೂಡಿಸುವ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ಮಾತ್ರ ನಡೆಯುತ್ತಿರುವುದು ವಿಶೇಷ ಎಂದರು.ವಕೀಲ ಉಮೇಶ್ ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಮನ್ ಕಿ ಭಾತ್ ಪ್ರಮುಖ ಸೀತಾರಾಮ ಬೆಳಾಲು, ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಹರಿಪ್ರಸಾದ್ ಕಳೆಂಜ, ಯಶವಂತ್ ಪುದುವೆಟ್ಟು, ಉಜಿರೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ಉಷಾ ಕಾರಂತ್, ಪುಷ್ಪ ಆರ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ವಿಷು ಕಣಿ ಆಚರಣಾ ಸಮಿತಿಯ ಅನಿಲ್ ಶಿಬಾಜೆ, ಬಾಲಕೃಷ್ಣ ನೈಮಿಷ, ಪ್ರಸಾದ್ ಬಿ.ಎಸ್, ದಿವಿನೇಶ್ ಹಾಗೂ ಸದಸ್ಯರು, ಮುಖಂಡರಾದ ಸದಾನಂದ ಉಂಗಿಲಬೈಲು, ಸುಪ್ರಿತ್ ಜೈನ್, ಶಶಿಕಲಾ ಅರಳಿ, ಪ್ರಸಾದ್ ಕೆವಿ, ಉಪಸ್ಥಿತರಿದ್ದರು.