ರಾಣಿಬೆನ್ನೂರು: ಜಾತಿಯಲ್ಲಿ ಹುಟ್ಟಿ ನೀತಿಯಿಂದ ಜ್ಯೋತಿಯಂತೆ ಜಗತ್ತಿಗೆ ಬೆಳಕು ನೀಡಬೇಕು. ಜಾತಿಯನ್ನು ಮೀರಿ ನೀತಿವಂತರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ನುಡಿದರು.ತಾಲೂಕಿನ ಕುಮಾರಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣಗೊಂಡಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಎಲ್ಲ ಸಮುದಾಯದವರು ಸಮಾನತೆಯಿಂದ ಬದುಕಬೇಕು. ಆಯಾ ಸಮುದಾಯದ ಆದರ್ಶ ಪುರುಷರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ವಾಲ್ಮೀಕಿ ಸಮುದಾಯ ನನಗೆ ಸಾಕಷ್ಟು ಶಕ್ತಿಯನ್ನು ತುಂಬಿದೆ. ಅದಕ್ಕೆ ನಾನು ಸದಾ ಋಣಿಯಾಗಿರುತ್ತೇನೆ.
ಹಾನಗಲ್ಲ: ದುಪ್ಪಟ್ಟಾಗಿರುವ ಶಾಸಕರ ವೇತನವನ್ನು ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ವಿನಿಯೋಗಿಸುವುದಾಗಿ ಪ್ರಕಟಿಸಿದ್ದ ಶಾಸಕ ಶ್ರೀನಿವಾಸ ಮಾನೆ ಅವರು, ಮೊದಲ ತಿಂಗಳ ಹೆಚ್ಚುವರಿ ವೇತನ ₹50 ಸಾವಿರ ಚೆಕ್‌ನ್ನು ಪಟ್ಟಣದ ಅ.ನ. ಕುಂದಾಪೂರ ಮತ್ತು ಬಿ.ಬಿ. ಪದಕಿ ಟ್ರಸ್ಟ್‌ಗೆ ನೀಡಿ, ನುಡಿದಂತೆ ನಡೆದಿದ್ದಾರೆ.
ಇತ್ತೀಚೆಗೆ ಪಟ್ಟಣದಲ್ಲಿ ನಡೆದ ನಿವೃತ್ತ ಶಿಕ್ಷಕ ದಿ. ಬಿ.ಬಿ. ಪದಕಿ ಗುರುವಂದನಾ ಸಮಾರಂಭದಲ್ಲಿ ಅ.ನ. ಕುಂದಾಪೂರ ಮತ್ತು ಬಿ.ಬಿ. ಪದಕಿ ಟ್ರಸ್ಟ್ ಕೈಗೊಳ್ಳುತ್ತಿರುವ ಶೈಕ್ಷಣಿಕ ಉದ್ದೇಶಗಳಿಗೆ ವಿನಿಯೋಗಿಸಲು ತಮ್ಮ ಮೊದಲ ತಿಂಗಳದ ಹೆಚ್ಚುವರಿ ವೇತನವನ್ನು ನೀಡುವುದಾಗಿ ತಿಳಿಸಿದ್ದ ಶಾಸಕ ಮಾನೆ, ಶುಕ್ರವಾರ ಟ್ರಸ್ಟ್ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.ಅ.ನ. ಕುಂದಾಪೂರ ಹಾಗೂ ಬಿ.ಬಿ. ಪದಕಿ ಟ್ರಸ್ಟ್‌ನ ಕಾರ್ಯದರ್ಶಿ ಗಿರೀಶ್ ದೇಶಪಾಂಡೆ, ಖಜಾಂಚಿ ಶರಶ್ಚಂದ್ರ ದೇಸಾಯಿ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಪ್ರಮುಖರಾದ ಆರ್.ಸಿ. ದೇಸಾಯಿ, ಡಿ.ಜಿ. ಕುಲಕರ್ಣಿ ಉಪಸ್ಥಿತರಿದ್ದರು.