ರಾಜ್ಯಾಧ್ಯಕ್ಷರಾಗಿ ಪ್ರತಾಪ್ ಮದಕರಿ ಆಯ್ಕೆ

KannadaprabhaNewsNetwork |  
Published : Jun 04, 2025, 01:02 AM IST
ಸಭೆ ನಡೆಸಲು ಸಿ ದ್ಧಗಂಗಾ ಮಠಕ್ಕೆ ತೆರಳುತ್ತಿರುವ ಗ್ರಾಮ ಸಹಾಯಕರು | Kannada Prabha

ಸಾರಾಂಶ

ಕಂದಾಯ ಇಲಾಖೆ ಗ್ರಾಮ ಸಹಾಯಕರ ಡಿ ದರ್ಜೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ರಾಜ್ಯಾಧ್ಯಕ್ಷರಾಗಿ ಹೋರಾಟಗಾರ ಪ್ರತಾಪ್ ಮದಕರಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಕಂದಾಯ ಇಲಾಖೆ ಗ್ರಾಮ ಸಹಾಯಕರ ಡಿ ದರ್ಜೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ರಾಜ್ಯಾಧ್ಯಕ್ಷರಾಗಿ ಹೋರಾಟಗಾರ ಪ್ರತಾಪ್ ಮದಕರಿ ಆಯ್ಕೆಯಾಗಿದ್ದಾರೆ.ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕಂದಾಯ ಇಲಾಖೆ ಗ್ರಾಮ ಸಹಾಯಕರು ಮತ್ತು ತಾಲೂಕು ಹಾಗೂ ಜಿಲ್ಲಾ ಮುಖಂಡರು ಸಿದ್ದಗಂಗಾ ಮಠದಲ್ಲಿ ಸಭೆ ಸೇರಿ ಆಯ್ಕೆ ಮಾಡಲಾಯಿತು.ಸುಮಾರು 45 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ದುಡಿಯುತ್ತಿರುವ ನೌಕರರಿಗೆ 2007 ರಲ್ಲಿ ಹುದ್ದೆ, ಖಾಯಂ ಆಗಿದ್ದರೂ ಕೂಡಾ ಸರ್ಕಾರ ಗ್ರಾಮ ಸಹಾಯಕರನ್ನು ಕಾಯಂ ನೌಕರರೆಂದು ಪರಿಗಣಿಸಲೇ ಇಲ್ಲಾ, ಹಾಗಾಗಿ ಗ್ರಾಮ ಸಹಾಯಕರನ್ನು ಡಿ, ದರ್ಜೆಗೇರಿಸಬೇಕು ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪಾಸ್ ಆಗಿರುವ ಗ್ರಾಮ ಸಹಾಯಕರ ಹುದ್ದೆ ನಿರ್ವಹಿಸುತ್ತಿರುವ ಯುವಕರಿಗೆ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಪರಿಗಣಿಸಬೇಕು ಎಂದು ಚರ್ಚಿಸಲಾಯಿತು.ಡಿ. ದರ್ಜೆ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯ ಮತ್ತು ಸ್ಥಾನ ಮಾನ ಸಿಗಬೇಕಾಗಿದ್ದು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಗ್ರಾಮ ಸಹಾಯಕರ ಡಿ ದರ್ಜೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ತಂದಿದ್ದು ಈ ಮೊದಲು ಗ್ರಾಮ ಸಹಾಯಕರ ಹಲವಾರು ಹೋರಾಟಗಳನ್ನು ಯಶಸ್ವಿ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಪ್ರತಾಪ್ ಅವರು ಸಂಘಟನೆಯಿಂದ ಆಚೆ ಬಂದ ಮೇಲೆ ನಡೆದ ಯಾವುದೇ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿದ್ದು ಮುಂದಿನ ದಿನಗಳಲ್ಲಿ ಸಂಘಟನೆ ಪ್ರತಾಪ್ ಮದಕರಿ ಅವರ ನಾಯಕತ್ವದಲ್ಲಿ ಸಾಗಬೇಕೆಂದು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಗ್ರಾಮ ಸಹಾಯಕರ ಮತ್ತು ಮುಖಂಡರ ಆಶಯವಾಗಿತ್ತು.

ಸಭೆ ಉದ್ದೇಶಿಸಿ ಮಾತನಾಡಿದ ಪ್ರತಾಪ್ ಮದಕರಿ ಸರ್ಕಾರದ ಗಮನ ಸೇಳೆಯಲು ಹಲವಾರು ಮಾರ್ಗಗಳಿವೆ ಹಾಗಾಗಿ ಪ್ರಾಮಾಣಿಕವಾಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ