ಪ್ರತಿಭೆ ಪ್ರೋತ್ಸಾಹಕ್ಕೆ ಪ್ರತಿಭಾ ಕಾರಂಜಿ ಸಹಾಯಕ

KannadaprabhaNewsNetwork |  
Published : Sep 12, 2024, 02:00 AM IST
ಕಾರ್ಯಕ್ರಮವನ್ನು ಆರ್.ಎಸ್.ಬುರಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳಲ್ಲಿ ಹುದುಗಿರುವ ಭಾವನಾತ್ಮಕ ಕಲೆಗಳ ಅನಾವರಣವೇ ಪ್ರತಿಭಾ ಕಾರಂಜಿ

ಗದಗ: ಮಕ್ಕಳಲ್ಲಿರುವ ಪ್ರತಿಭೆ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಾಯಕವಾಗಲಿದ್ದು, ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಕಾರಂಜಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸುತ್ತಿರುವದು ಶ್ಲ್ಯಾಘನೀಯ ಎಂದು ಶಹರ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.

ಅವರು ಇಲ್ಲಿಯ ರಾಜೀವ ಗಾಂಧಿ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ನಂ. 4ರಲ್ಲಿ ಜರುಗಿದ ಉರ್ದು ಕ್ಲಸ್ಟರ್ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ.ಪ್ರಭಯ್ಯನಮಠ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಭಾವನಾತ್ಮಕ ಕಲೆಗಳ ಅನಾವರಣವೇ ಪ್ರತಿಭಾ ಕಾರಂಜಿ ಎಂದರು.

ಡೈಟ್ ಉಪನ್ಯಾಸಕಿ ಸುಧಾ ಬೆನಕಲ್ಲ ಮಾತನಾಡಿ, ಮಕ್ಕಳ ವಿಕಾಸದ ಅಭಿವೃದ್ಧಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ ಎಂದರು.

ಈ ವೇಳೆ ಶಹರ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಶಾಲಾ ಎಸ್‌ಡಿಎಸ್‌ಸಿ ಅಧ್ಯಕ್ಷ ಅಮೀನಸಾಬ್‌ ಹುಡೇದಮನಿ ಮಾತನಾಡಿದರು.

ಡಿಡಿಪಿಐ ಜಿ.ಎಲ್. ಬಾರಾಟಕ್ಕೆ, ಡಿವೈಪಿಸಿ ಎಂ.ಎಚ್. ಕಂಬಳಿ, ಬಿ.ಆರ್.ಪಿ ಮಹ್ಮದ್‌ಶಫಿ ಯರಗುಡಿ, ಜಿಲ್ಲಾ ಉರ್ದು ಸಂಯೋಜಕ ರಿಜ್ವಾನ್ ಕೌಲಗೇರಿ, ಎಸ್.ಡಿ.ಎಂ.ಸಿ ಸದಸ್ಯರಾದ ಕಾಶೀಮ್‌ಸಾಬ್‌ ಹುಡೇದಮನಿ, ಜಹಾಂಗೀರಸಾಬ್‌ ಕಳಸಾಪೂರ, ಗೌಸ್‌ಪಾಕ್ ಸಿರಸಂಗಿ, ಫರೀದಾ ಡೋಣಿ ಸೇರಿದಂತೆ ಇತರರು ಇದ್ದರು. ಹಲೀಮಾ ಶೇಖ್ ಪ್ರಾರ್ಥಿಸಿದರು. ಕಲೀಲ ಜಲಗೇರಿ ಸ್ವಾಗತಿಸಿದರು. ಎಚ್.ಬಿ. ಮಕಾನದಾರ ನಿರೂಪಿಸಿದರು. ಐ.ಬಿ. ಗಾಡಗೋಳ ಪರಿಚಯಿಸಿದರು. ಮುಖ್ಯೋಪಾಧ್ಯಾಯನಿ ಕೆ.ಎ. ದಾವಲಖಾನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ