ಮಕ್ಕಳ ಸೂಪ್ತ ಪ್ರತಿಭೆ ಹೊರ ಬರಲು ಪ್ರತಿಭಾ ಕಾರಂಜಿ ದಾರಿದೀಪ: ಬಿಇಓ ನರಸಿಂಹಮೂರ್ತಿ

KannadaprabhaNewsNetwork |  
Published : Nov 26, 2026, 01:15 AM IST
ಮಧುಗಿರಿಯ ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ  ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಬಿಇಓ ನರಸಿಂಹಮೂರ್ತಿ  ಹಾಗೂ ಇತರೆ  ನೌಕರರು ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ತಾಲೂಕಿನ 28 ಕ್ಲಸ್ಟರ್ ಗಳ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಜಾನಪದ ನೃತ್ಯ, ಮಿಮಿಕ್ರಿ, ಲಘು ಸಂಗೀತ, ಚಿತ್ರಕಲೆ, ಕ್ಲೇ ಮಾಡಲಿಂಗ್, ಕವನ ವಾಚನ, ಛದ್ಮವೇಷ, ಅಭಿನಯ ಗೀತೆ, ಕಥೆ ಹೇಳುವುದು ಸೇರಿ ಹಲವು ಬಗೆಯ ಚಟುವಟಿಕೆಗಳು ನಡೆದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಯಿತು.

ಕನ್ನಡಪ್ರಭ ವಾರ್ತೆ ಮಧುಗಿರಿ

ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರ ಬರಲು ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳು ದಾರಿದೀಪವಾಗಿವೆ. ಪ್ರತಿಭೆಯ ಕ್ಷೇತ್ರ ಭಿನ್ನವಾಗಿರಬಹುದು, ಆದರೆ ಸಾಧನೆಗೆ ಪೂರಕ ವಾತಾವರಣ ಕಲ್ಪಿಸಿದರೆ ಎಲ್ಲ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ.ನರಸಿಂಹಮೂರ್ತಿ ತಿಳಿಸಿದರು.

ಬುಧವಾರ ಇಲ್ಲಿನ ಎಂಜಿಎಂ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದ್ದು, ಗ್ರಾಮೀಣ ಮಕ್ಕಳು ಅಂಥ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಸೂಕ್ತ ಪರಿಸರ, ಪ್ರೋತ್ಸಾಹ ಹಾಗೂ ಕಲಾ ಪ್ರತಿಭೆ ಉತ್ತೇಜಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ಮಾಡಿ ಕೊಡಬೇಕು ಎಂದು ಸಲಹೆ ನೀಡಿದರು.

ತಾಪಂ ಇಒ ಉತ್ತಮ್ ಮಾತನಾಡಿ, ಮಕ್ಕಳಿಗೆ ಪಾಠದ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವ್ಯಕ್ತಿಗೆ ವೇದಿಕೆಯಾಗಿರುವ ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಪ್ರತಿಭೆಯ ಗಣಿಯನ್ನು ಹೊರತೆಗೆಯುವ ಕಾರ್ಯಕ್ರಮವಾಗಿದೆ. ಪ್ರತಿಭೆ ಯಾವುದೇ ಜಾತಿ, ಧರ್ಮ, ಲಿಂಗಕ್ಕೆ ಸೀಮಿತವಾಗದೆ ಅಂತರಂಗದಲ್ಲಿ ಬೆಳೆಯುವ ಪ್ರಕ್ರಿಯೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಎಲ್ಲರದ್ದು ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ರಮೇಶ್, ತೀರ್ಪುಗಾರರು ಯಾವುದೇ ಪೂರ್ವ ನಿರ್ಧಾರಗಳಿಗೆ ಬದ್ಧರಾಗದೇ ತಾವು ಕಣ್ಣಿಂದ ಕಂಡು, ಕಿವಿಯಿಂದ ಕೇಳಿ, ಮನಸ್ಸಿಂದ ಆಹ್ಲಾದಿಸಿದ ಕಲೆಯನ್ನು ಮಾತ್ರ ಪರಿಗಣಿಸಿ ತೀರ್ಪು ನೀಡಬೇಕು. ಆಗ ಮಾತ್ರ ತಾಲೂಕಿನ ಮಕ್ಕಳು ಮುಂದಿನ ಹಂತಗಳಲ್ಲಿ ಯಶಸ್ವಿಯಾಗಲು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ತಾಲೂಕಿನ 28 ಕ್ಲಸ್ಟರ್ ಗಳ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಜಾನಪದ ನೃತ್ಯ, ಮಿಮಿಕ್ರಿ, ಲಘು ಸಂಗೀತ, ಚಿತ್ರಕಲೆ, ಕ್ಲೇ ಮಾಡಲಿಂಗ್, ಕವನ ವಾಚನ, ಛದ್ಮವೇಷ, ಅಭಿನಯ ಗೀತೆ, ಕಥೆ ಹೇಳುವುದು ಸೇರಿ ಹಲವು ಬಗೆಯ ಚಟುವಟಿಕೆಗಳು ನಡೆದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಯಿತು.

ಬಿ.ಆರ್.ಸಿ.ಪವನ್ ಕುಮಾರ್ ರೆಡ್ಡಿ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಕಾಂತಮ್ಮ, ಶಿಕ್ಷಣ ಸಂಯೋಜಕರಾದ ಶ್ರೀನಿವಾಸ್, ರಾಧಾಕೃಷ್ಣ, ರಾಘವೇಂದ್ರ, ಬಿ.ಆರ್.ಪಿ.ಮಂಜುನಾಥ್, ಲಕ್ಷ್ಮಮ್ಮ, ಯಶೋಧಮ್ಮ, ಜಿಪಿಟಿ ಸಂಘದ ತಾಲೂಕು ಅಧ್ಯಕ್ಷ ಹನುಮಂತರಾಯ, ಪ್ರಾಥಮಿಕ ಶಾಲಾ ಸಂಘದ ಕಾರ್ಯದರ್ಶಿ ಶಿವಕುಮಾರ್, ಟಿಪಿಒ ಯರಗಾಮಯ್ಯ, ಸಿಆರ್ಪಿಗಳಾದ ಲಕ್ಷ್ಮೀ ನಾರಾಯಣ, ಶ್ರೀಧರ್, ಹರೀಶ್, ಪವಿತ್ರ, ರಂಗನಾಥ್, ಶಿಕ್ಷಕರಾದ ತಿಮ್ಮರಾಜು, ಚೆನ್ನಾರೆಡ್ಡಿ, ಶ್ರೀಕಾಂತ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆಯಲ್ಲಿ ಮುಳುಗಿವೆ ಕೊಳಚೆ ಮಂಡಳಿಯ ನಿವಾಸಗಳು: ರವಿಶಂಕರ್ ರೆಡ್ಡಿ
ಸಂತ್ರಸ್ತ ಕುಟುಂಬಗಳಿಗೆ ಸಚಿವ ಶಿವಲಿಂಗೇಗೌಡ ಸಾಂತ್ವನ