ಪಟ್ಟಣದ ಪುರಸಭೆ ವ್ಯಾಪ್ತಿಯ ನಿಮಾಹೊಸಳ್ಳಿ ರಸ್ತೆಯ ಪಕ್ಕದಲ್ಲಿ 1997-98ನೇ ಸಾಲಿನಲ್ಲಿ ಬಡವರಿಗಾಗಿ ನಿರ್ಮಿಸಲಾದ ಸುಮಾರು 1,000 ಮನೆಗಳು ಸೂಕ್ತ ನಿರ್ವಹಣೆ ಹಾಗೂ ಹಂಚಿಕೆಯಿಲ್ಲದೆ ಸಂಪೂರ್ಣ ಹಾಳು ಬಿದ್ದಿವೆ .ಕೋಟ್ಯಂತರ ರುಪಾಯಿ ವೆಚ್ಚದ ಯೋಜನೆ ಹಳ್ಳಹಿಡಿಯಲು ಕಾರಣರಾದ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು, ತನಿಖೆ ನಡೆಸಬೇಕೆಂದು ಎಂದು ಜೆಡಿಎಸ್‌ನ ಚಿಂಚೋಳಿ ತಾಲೂಕು ಅಧ್ಯಕ್ಷ ರವಿಶಂಕರ್ ರೆಡ್ಡಿ ಮುತ್ತಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಪೂಜಾರಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಟ್ಟಣದ ಪುರಸಭೆ ವ್ಯಾಪ್ತಿಯ ನಿಮಾಹೊಸಳ್ಳಿ ರಸ್ತೆಯ ಪಕ್ಕದಲ್ಲಿ 1997-98ನೇ ಸಾಲಿನಲ್ಲಿ ಬಡವರಿಗಾಗಿ ನಿರ್ಮಿಸಲಾದ ಸುಮಾರು 1,000 ಮನೆಗಳು ಸೂಕ್ತ ನಿರ್ವಹಣೆ ಹಾಗೂ ಹಂಚಿಕೆಯಿಲ್ಲದೆ ಸಂಪೂರ್ಣ ಹಾಳು ಬಿದ್ದಿವೆ .ಕೋಟ್ಯಂತರ ರುಪಾಯಿ ವೆಚ್ಚದ ಯೋಜನೆ ಹಳ್ಳಹಿಡಿಯಲು ಕಾರಣರಾದ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಪುರಸಭೆ ಇಂಜಿನಿಯರ್‌ಗಳ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಯೋಜನೆಯ ಕುರಿತು ತನಿಖೆ ನಡೆಸಬೇಕೆಂದು ಎಂದು ಜೆಡಿಎಸ್‌ನ ಚಿಂಚೋಳಿ ತಾಲೂಕು ಅಧ್ಯಕ್ಷ ರವಿಶಂಕರ್ ರೆಡ್ಡಿ ಮುತ್ತಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಪೂಜಾರಿ ಆಗ್ರಹಿಸಿದರು.

ಪಟ್ಟಣದ ನಿಮಾಹೊಸಳ್ಳಿ ನಿಮಾಹೋಸಳ್ಳಿ ಗ್ರಾಮದ ಮುಖ್ಯ ರಸ್ತೆಯ ಈದ್ಗಾ ಮೈದಾನದ ಹತ್ತಿರ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ನಿರ್ಮಿಸಿದ ಮನೆಗಳ ದುಸ್ಥಿತಿ ಶಿಥಿಲಗೊಂಡು ಮನೆಗಳನ್ನು ಬುಧವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತ ನಿರ್ವಹಣೆಯಿಲ್ಲದೆ ಮನೆಗಳ ಬಾಗಿಲು, ಕಿಟಕಿ ಹಾಗೂ ಗೋಡೆಯ ಇಟ್ಟಿಗೆಗಳು ಒಡೆದು ಹೋಗಿದ್ದು, ಛಾವಣಿ (ಛತ್ತು) ಉದುರಿ ಬೀಳುವ ಹಂತಕ್ಕೆ ತಲುಪಿವೆ. ಇಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಶೌಚಾಲಯದಂತಹ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಕಳಪೆ ಕಾಮಗಾರಿ ಹಾಗೂ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಪುರಸಭೆ, ಸಹಾಯಕ ಆಯುಕ್ತರು ಮತ್ತು ತಾಲೂಕು ಆಡಳಿತ ಸಂಪೂರ್ಣ ಕಣ್ಣುಮುಚ್ಚಿ ಕುಳಿತಿದೆ ಎಂದು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಸ್ವಂತವಾಗಿ ಮನೆ ಕಟ್ಟಿಕೊಂಡ ಬಡ ಫಲಾನುಭವಿಗಳಿಗೆ ಸರ್ಕಾರದಿಂದ ಬರಬೇಕಾದ ಅನುದಾನದ ಬಿಲ್ಲುಗಳನ್ನು ಇಂಜಿನಿಯರ್ ಮತ್ತು ಅಧಿಕಾರಿಗಳು ಸಕಾಲಕ್ಕೆ ಮಂಜೂರು ಮಾಡುತ್ತಿಲ್ಲ. ಸಾಲ ಮಾಡಿ ಮನೆ ನಿರ್ಮಿಸಿಕೊಂಡಿರುವ ಬಡ ಕುಟುಂಬಗಳು ಬಿಲ್ಲುಗಳಿಗಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದ್ದು, ಸಂಸಾರ ಸಾಗಿಸುವುದೇ ದುಸ್ತರವಾಗಿದೆ. ಬಡವರ ಬದುಕಿಗಾಗಿ ಮನೆಗಳನ್ನು ದುರಸ್ತಿಗೊಳಿಸಿ ನೀರು, ವಿದ್ಯುತ್, ಶೌಚಾಲಯ, ಶಾಲೆ ಹಾಗೂ ಅಂಗನವಾಡಿ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಿ ಅರ್ಹ ಬಡವರಿಗೆ ಹಂಚಿಕೆ ಮಾಡಬೇಕು. ಜತೆಗೆ ಬಾಕಿ ಇರುವ ಮನೆಗಳ ಬಿಲ್ಲುಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

2021 -22 ನೇ ಸಾಲಿನಲ್ಲಿ ಕೊಳಚೆ ನಿರ್ಮೂಲ ಮಂಡಳಿಯ ಮನೆಗಳ ದುರಸ್ತಿಗೆ 1.50 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಕಾಮಗಾರಿಯ ಗುತ್ತಿಗೆಯನ್ನು ಪಡೆದ ಕೆಲವು ಪುರಸಭೆ ಸದಸ್ಯರು ಕಳಪೆ ಕೆಲಸವನ್ನು ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಮೂಲ ಸೌಕರ್ಯ ಕೊಟ್ಟಿಲ್ಲ ಎಂದು ಜೆಡಿಎಸ್‌ ಮುಖಂಡರು ಆರೋಪಿಸಿದರು.

ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಿದ ಮನೆಗಳು ಶಿಥಿಲಗೊಂಡು ಕುಸಿಯುತ್ತಿವೆ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ ಇಟ್ಟಿಗೆ ಕಿಟಕಿ ಬಾಗಿಲು ಮುರಿದು ಹೋಗಿವೆ. ಚಿಂಚೋಳಿ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಕೆಲವು ಬಡವರು ಬಾಡಿಗೆ ಮನೆಯಲ್ಲೇ ವಾಸವಾಗಿದ್ದಾರೆ ಕೆಲವರಿಗೆ ಸ್ವಂತ ಜಾಗವಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಬಡವರಿಗೆ ಮತ್ತು ಹಿಂದುಳಿದ ಪ್ರದೇಶದ ಚಿಂಚೋಳಿ ಪಟ್ಟಣದ ಬಡವರಿಗೆ ಮೋಸ ಮಾಡುತ್ತಿದೆ ಎಂದು ತಾಲೂಕ ಜೆಡಿಎಸ್ ಅಧ್ಯಕ್ಷ ರವಿಶಂಕರ್ ರೆಡ್ಡಿ ಮುತ್ತಂಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಪೂಜಾರಿ ಆರೋಪಿಸಿದರು.