ಕನ್ನಡಪ್ರಭ ವಾರ್ತೆ ಯಮಕನಮರಡಿ
ಸಮೀಪದ ಬಸಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಶಿ ಕಳ್ಳಿಮನಿ, ಪ್ರತಿ ವಿದ್ಯಾರ್ಥಿಯಲ್ಲಿ ಸೂಪ್ತವಾದ ಕಲೆ ಇರುತ್ತದೆ. ಅದನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ತುಂಬಾ ಸಹಕಾರಿ ಎಂದರು.ಗ್ರಾಮದ ಮುಖಂಡರಾದ ರಾಜಗೌಡ ಪಾಟೀಲ, ಸಿಆರ್ಪಿ ಎಸ್.ಐ. ಗುಂಡಗಿ, ಶಿಕ್ಷಕರ ಸಂಘದ ರಾಜು ತಳವಾರ, ಪ್ರಧಾನ ಶಿಕ್ಷಕಿಯರಾದ ಬಿ.ಡಿ. ಅಂಗಡಿ, ಎಸ್.ಎಸ್. ಕಂಕಣವಾಡಿ, ಕೆ.ಬಿ. ಅರಳಿಕಟ್ಟಿ, ಎಚ್.ಬಿ. ಪೂಜಾರ, ಕ್ಲಸ್ಟರ್‌ನ ಎಲ್ಲ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ಎಸ್.ಎ. ಮಾವಿನಕಟ್ಟಿ ಸ್ವಾಗತಿಸಿದರು. ರಾಜು ತಳವಾರ ನಿರೂಪಿಸಿದರು. ಎಸ್.ಐ. ಗುಂಡಗಿ ವಂದಿಸಿದರು.