- ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪ್ರವೀಣ್‌ಎಚ್. ಟಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 720ನೇ ರಾಂಕ್ ಪಡೆವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಡೂರು ತಾಲೂಕಿನ ಹುಲಿಕೆರೆ ಗ್ರಾಮದ ನಿವೃತ್ತ ಹೈಸ್ಕೂಲು ಮುಖ್ಯ ಶಿಕ್ಷಕ ಎಚ್.ಕೆ. ತಮ್ಮಯ್ಯ ಮತ್ತು ನೀಲಮ್ಮ ದಂಪತಿ ಪುತ್ರರಾದ ಪ್ರವೀಣ್ ಸಾಧನೆ ಮೂಲಕ ಜಿಲ್ಲೆಯ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.ತಮ್ಮಸಾಧನೆ ಕುರಿತು ಕನ್ನಡಪ್ರಭದೊಂದಿಗೆ ಸಂತಸ ಹಂಚಿಕೊಂಡ ಪ್ರವೀಣ್, ಇದು ನನ್ನ 4ನೇ ಮೈನ್ಸ್ 3ನೇ ಇಂಟರ್ ವ್ಯೂ ಆಗಿದೆ. ತಾವು ಈಗಾಗಲೇ ಕೋರಮಂಗಲದಲ್ಲಿ ಕಮರ್ಶಿಯಲ್ ಟ್ಯಾಕ್ಸ್ ಇನ್ಸ್ ಫೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಾಧನೆ ಕ್ರೆಡಿಟ್ ತಂದೆ-ತಾಯಿಗೆ ಸಲ್ಲಬೇಕು.
ಸತತ ಪರಿಶ್ರಮದಿಂದ ಗುರಿ ಸಾಧನೆಗೆ ಅಡ್ಡಿ ಆತಂಕಗಳು ಬರುವುದು ಸಹಜ. ಅದನ್ನು ಮೀರಿ ಪ್ರಯತ್ನಿಸಿದರೆ ಸಾಧನೆ ನಿಮ್ಮ ಹತ್ತಿರ ಬರುತ್ತದೆ. ನನ್ನ ತಂದೆ ಕನ್ನಡ ಶಿಕ್ಷಕರು, ನನ್ನ ತಾತ ಕೂಡ ಶಿಕ್ಷಕರಾಗಿದ್ದರು. ಬಡತನ ಮತ್ತು ಶಿಕ್ಷಣದ ಕೊರತೆ ನೀಗಿಸುವ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವ ಸದುದ್ದೇಶದಿಂದ ತಾವು ನಾಗರಿಕ ಸೇವಾ ಪರೀಕ್ಷೆ ಬರೆದಿದ್ದೇನೆ ಎಂದರು.
-- ಹೇಳಿಕೆ---
ಯುವಕರು ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾದಿಂದ ದೂರವಿದ್ದು, ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿದರೆ ಏಕಾಗ್ರತೆ ಸಾಧಿಸಬಹುದು. ಕಲೆ, ಸಾಹಿತ್ಯ ಮತ್ತು ಕ್ರೀಡೆಗೆ ಒತ್ತು ಕೊಟ್ಟರೆ ಪರಿಪೂರ್ಣ ವ್ಯಕ್ತಿ ಆಗಲು ಸಾಧ್ಯವಿದೆ.