ಗಾಯಾಳು ಆರೋಗ್ಯ ವಿಚಾರಿಸಿದ ಸಂಸದ ಕಾರಜೋಳ

KannadaprabhaNewsNetwork |  
Published : Mar 08, 2026, 01:30 AM IST
7ಕೆಡಿವಿಜಿ8-ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮಾದಿಗ ಒಳ ಮೀಸಲಾತಿ ಹೋರಾಟದ ವೇಳೆ ಪೊಲೀಸರು ಬಂಧಿಸುತ್ತಿದ್ದಾಗ ಬಿದ್ದು ಕಾಲು ಮುರಿದುಕೊಂಡ ಶಿರಮಗೊಂಡನಹಳ್ಳಿ ಗ್ರಾಮದ ರುದ್ರಪ್ಪನವರ ಆರೋಗ್ಯ ವಿಚಾರಿಸಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ. ಒಕ್ಕೂಟದ ಆಲೂರು ನಿಂಗರಾಜ, ಡಾ.ಎಚ್.ವಿಶ್ವನಾಥ, ಎಂ.ಹಾಲೇಶ ಇತರರು ಇದ್ದರು. | Kannada Prabha

ಸಾರಾಂಶ

ಒಳ ಮೀಸಲಾತಿ ಹೋರಾಟ, ದಾವಣಗೆರ ಬಂದ್ ವೇಳೆ ಪೊಲೀಸರು ಬಂಧಿಸುತ್ತಿದ್ದ ಸಮಯದಲ್ಲಿ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ವಯೋವೃದ್ಧ ರುದ್ರಪ್ಪ ತಳ್ಳಾಟದಲ್ಲಿ ಬಿದ್ದು ಬಲಗಾಲು ಮುರಿದುಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಸಂಸದ, ಬಿಜೆಪಿ ಹಿರಿಯ ಮುಖಂಡ ಗೋವಿಂದ ಕಾರಜೋಳ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

- ಬಂದ್ ವೇಳೆ ಪೊಲೀಸರ ತಳ್ಳಾಟ, ಬಿದ್ದು ಕಾಲು ಮುರಿದುಕೊಂಡ ವೃದ್ಧ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಒಳ ಮೀಸಲಾತಿ ಹೋರಾಟ, ದಾವಣಗೆರ ಬಂದ್ ವೇಳೆ ಪೊಲೀಸರು ಬಂಧಿಸುತ್ತಿದ್ದ ಸಮಯದಲ್ಲಿ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ವಯೋವೃದ್ಧ ರುದ್ರಪ್ಪ ತಳ್ಳಾಟದಲ್ಲಿ ಬಿದ್ದು ಬಲಗಾಲು ಮುರಿದುಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಸಂಸದ, ಬಿಜೆಪಿ ಹಿರಿಯ ಮುಖಂಡ ಗೋವಿಂದ ಕಾರಜೋಳ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

ಒಕ್ಕೂಟದ ಮುಖಂಡರಾದ ಆಲೂರು ನಿಂಗರಾಜ, ವಿಚಾರವಾದಿ ಡಾ. ಎಚ್.ವಿಶ್ವನಾಥ, ಎಂ.ಹಾಲೇಶ, ಎಚ್.ಸಿ.ಗುಡ್ಡಪ್ಪ, ಕಡತಿ ಅಂಜಿನಪ್ಪ, ಸಿ.ಬಸವರಾಜ, ಇನ್ನಿತರ ಮುಖಂಡರು ಗೋವಿಂದ ಕಾರಜೋಳ ಅವರಿಗೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

ಒಕ್ಕೂಟದ ಮುಖಂಡರು ಮಾತನಾಡಿ, ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಒಕ್ಕೂಟದಿಂದ ಮಾ.6ರಂದು ದಾವಣಗೆರೆ ಬಂದ್‌ಗೆ ಕರೆ ನೀಡಿದ್ದೆವು. ಸಮಾಜದ ಸಾವಿರಾರು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು, ವಯೋವೃದ್ಧರು ಹೋರಾಟ ಮಾಡುತ್ತಿದ್ದ ವೇಳೆ ಪೊಲೀಸರು ಹೋರಾಟಗಾರ ಮಾದಿಗ ಸಮುದಾಯದವರನ್ನು ಬಂಧಿಸಲು ಸರ್ಕಾರಿ ಬಸ್‌, ಪೊಲೀಸ್ ಬಸ್‌ಗಳನ್ನು ತಂದು ನಿಲ್ಲಿಸಿದ್ದರು. ಪೊಲೀಸರು ವಶಕ್ಕೆ ಪಡೆಯಲು ಎಳೆದಾಡುತ್ತಿದ್ದರು. ಶಿರಮಗೊಂಡನಹಳ್ಳಿಯ ರುದ್ರಪ್ಪನನ್ನು ಬಸ್ಸೊಳಗೆ ಹಾಕುತ್ತಿದ್ದ ವೇಳೆ ಆಯತಪ್ಪಿ ಕೆಳಗೆಬಿದ್ದು, ಕಾಲು ಮುರಿದುಕೊಂಡಿದ್ದಾರೆ ಎಂದು ತಿಳಿಸಿದರು.

ರುದ್ರಪ್ಪನವರನ್ನು ತಕ್ಷಣವೇ ಪೊಲೀಸರು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿಬಂದಿದ್ದಾರೆ. ಆದರೆ, ಪ್ರತಿಭಟನೆ, ಬಂದ್‌ ಮುಗಿದ ನಂತರ ಪೊಲೀಸ್ ಅಧಿಕಾರಿ, ಸಿಬ್ಬಂದಿ ರುದ್ರಪ್ಪನವರ ಆರೋಗ್ಯ ವಿಚಾರಿಸುವ ಕನಿಷ್ಠ ಮಾನವೀಯತೆಯನ್ನೂ ತೋರಿಲ್ಲ ಎಂದು ದೂರಿದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಪೊಲೀಸ್ ಅಧಿಕಾರಿಗಳ ಇಂತಹ ಅಮಾನವೀಯ ನಡೆಯನ್ನು ನೋಡಿದರೆ ಎಲ್ಲರಿಗೂ ತೀವ್ರ ನೋವಾಗಿದೆ. ಈ ಹಿನ್ನೆಲೆಯಲ್ಲಿ ಶಿರಮಗೊಂಡನಹಳ್ಳಿಯ ರುದ್ರಪ್ಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳ ಜೊತೆಗೆ, ರಾಜ್ಯ ಸರ್ಕಾರದ ಬಳಿಯೂ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

- - -

-7ಕೆಡಿವಿಜಿ8:

ಮಾದಿಗ ಒಳ ಮೀಸಲಾತಿ ಹೋರಾಟದ ವೇಳೆ ಪೊಲೀಸರು ವಶಕ್ಕೆ ಪಡೆದು, ಬಸ್ಸೊಳಗೆ ಕಳಿಸುತ್ತಿದ್ದಾಗ ಕೆಳಗೆ ಬಿದ್ದು ಕಾಲು ಮುರಿದುಕೊಂಡಿರುವ ಶಿರಮಗೊಂಡನಹಳ್ಳಿ ಗ್ರಾಮದ ರುದ್ರಪ್ಪ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಒಕ್ಕೂಟದ ಆಲೂರು ನಿಂಗರಾಜ, ಡಾ.ಎಚ್.ವಿಶ್ವನಾಥ, ಎಂ.ಹಾಲೇಶ ಇತರರು ಹಾಜರಿದ್ದು ಘಟನೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಪಂಗಳಿಗೆ ಜಿಪಂ ಸಿಇಒ ಭೇಟಿ: ಅಭಿವೃದ್ಧಿ ಪರಿಶೀಲನೆ
ವಿ.ಸಿ.ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ೧೪ರಂದು ಶಂಕುಸ್ಥಾಪನೆ: ಎಚ್‌ಡಿಕೆ