ಕನ್ನಡಪ್ರಭ ವಾರ್ತೆ ಮಂಗಳೂರು
ವಿಪ್ರ ಸಮೂಹ ಕೊಂಚಾಡಿ, ಶಿವಳ್ಳಿ ಸ್ಪಂದನ, ಹವ್ಯಕ ಸಭಾ, ಸ್ಥಾನಿಕ ಬ್ರಾಹ್ಮಣ ಸುಬ್ರಹ್ಮಣ್ಯ ಸಭಾ, ಕೂಟ ಮಹಾಜಗತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಒಕ್ಕೂಟದ ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮುಂದಾಳತ್ವ ವಹಿಸಿದ್ದರು. ವಿಪ್ರ ಬಳಗದ ರಾಮಕೃಷ್ಣ ರಾವ್, ಸುಧಾಕರ ರಾವ್ ಪೇಜಾವರ, ಕದ್ರಿ ಗಣೇಶ್ ಹೆಬ್ಬಾರ್, ಉದಯ ಕುಮಾರ್ ಸುಬ್ರಹ್ಮಣ್ಯ ಸದನ, ಶಶಿಪ್ರಭಾ ಐತಾಳ್, ಕದ್ರಿ ವಾಸುದೇವ ಭಟ್, ಡಾ.ಎಸ್.ಎನ್. ಶರ್ಮ, ನಿವೃತ್ತ ಪ್ರೊ. ಗಿರೀಶ್ಚಂದ್ರ ಎ.ಟಿ., ವಿಶ್ವಪತಿ ಮೊಳೆಯಾರ, ಕೇಶವ ನಂದೋಡಿ, ಶಿವರಾಮ ರಾವ್, ಶ್ರೀಕಾಂತ್ ರಾವ್ ಸಹಿತ ಅನೇಕ ಮಂದಿ ಪರ್ಜನ್ಯ ಜಪ- ರುದ್ರ ಪಾರಾಯಣದಲ್ಲಿ ಪಾಲ್ಗೊಂಡಿದ್ದರು.ನೇತ್ರಾವತಿ ಅಣೆಕಟ್ಟು ನೀರು ಸಂಗ್ರಹ ಇಳಿಮುಖ:ತೀವ್ರಗೊಂಡಿರುವ ಬಿಸಿಲ ಬೇಗೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದಲ್ಲಿ ಕಿಂಚಿತ್ ಇಳಿಕೆಯಾದೆ.
ಈ ಮಧ್ಯೆ ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿತವಾಗುತ್ತಿದ್ದು, ಮಂಗಳೂರಿಗೆ ನೀರಿನ ರೇಶನಿಂಗ್ ಪ್ರಾರಂಭಿಸಲಾಗಿದೆ. ನೀರಿನ ಲಭ್ಯತೆ ಮತ್ತಷ್ಟು ಕುಸಿತ ಕಂಡರೆ ಎಎಂಆರ್ ಆಣೆಕಟ್ಟಿನಿಂದ ನೀರನ್ನು ಬಿಡಬೇಕಾದ ಸಾಧ್ಯತೆಯನ್ನು ಅಧಿಕಾರಿಗಳು ಈಗಾಗಲೇ ಪ್ರಕಟಿಸಿದ್ದಾರೆ. ಈ ಕಾರಣಕ್ಕೆ ಎಎಂಆರ್ ಅಣೆಕಟ್ಟಿಗೆ ಅಗತ್ಯವಾದ ನೀರನ್ನು ಸಮತೋಲನ ಜಲಾಶಯವಾಗಿರುವ ಬಿಳಿಯೂರು ಅಣೆಕಟ್ಟಿನಿಂದ ಒದಗಿಸಿಕೊಂಡರೆ ಬಿಳಿಯೂರು ಅಣೆಕಟ್ಟು ಬರಿದಾಗಿ ಕೃಷಿಕರಿಗೆ ಸಂಕಷ್ಠ ಎದುರಾಗುವ ಭೀತಿ ಮೂಡಿದೆ.