ಚಿಕ್ಕಮಗಳೂರು: ರಾಜ್ಯದಲ್ಲಿ ಈ ಬಾರಿ ವರುಣನ ಆರ್ಭಟ ಜೋರಾಗಿದೆ. ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಕಾಫಿನಾಡು ಚಿಕ್ಕಮಗಳೂರು ಹೊರತಾಗಿಲ್ಲ, ಮಳೆಯಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ತಿ ಹಾನಿಯಾಗಿರುವ ಜತೆಗೆ ಕಾಫಿ ಸೇರಿದಂತೆ ಎಲ್ಲಾ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದೆ.ಮಳೆಯ ಅಬ್ಬರ ಕಡಿಮೆಯಾಗಲೆಂದು ದಕ್ಷಿಣ ಕಾಶಿ ಎಂದೇ ಖ್ಯಾತಿಯಾದ ಕಳಸದ ಶ್ರೀ ಕಳಸೇಶ್ವರ ಸ್ವಾಮಿಗೆ ಭಕ್ತರು ಗುರುವಾರ ಅಗಿಲು ಸೇವೆ ಸಲ್ಲಿಸಿದರು.
ಅತಿವೃಷ್ಠಿ ಹಾಗೂ ಅನಾವೃಷ್ಠಿಯ ಸಂದರ್ಭದಲ್ಲಿ ಮಲೆನಾಡಿನ ಭಕ್ತರು ಕಳಸೇಶ್ವರ ಸ್ವಾಮಿಗೆ ಅಗಿಲು ಸೇವೆ ಸಲ್ಲಿಸುವ ಸಂಪ್ರದಾಯ ಅನಾಧಿಕಾಲದಿಂದಲೂ ನಡೆದುಕೊಂಡು ಬಂದಿದೆ. ಸೇವೆ ನಂತರ ಭಕ್ತರು ಅಂದುಕೊಂಡಂತೆ ಆಗಿದೆ ಎಂಬುದು ಪ್ರತೀತಿ. ಮಡಿವಂತರಾಗಿ ಬಂದ ಭಕ್ತರು ದೇವರಿಗೆ ವಿಶೇಷ ಪೂಜೆ ಹಾಗೂ ಅಗಿಲು ಸೇವೆ ಸಲ್ಲಿಸಿದರು.ಪೋಟೋ ಫೈಲ್ ನೇಮ್ 2 ಕೆಸಿಕೆಎಂ 6ಕಳಸದ ಶ್ರೀ ಕಳಸೇಶ್ವರ ಸ್ವಾಮಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಗಿಲು ಸೇವೆ ಸಲ್ಲಿಸಿದರು.