ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಪೂರ್ವ ಸಿದ್ಧತಾ ಸಭೆ

KannadaprabhaNewsNetwork | Published : Mar 29, 2025 12:35 AM

ಸಾರಾಂಶ

ತರೀಕೆರೆ,ತಾಲೂಕು ಅಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ ಪೂರ್ವ ಸಿದ್ದತಾ ಸಭೆ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕು ಅಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ ಪೂರ್ವ ಸಿದ್ದತಾ ಸಭೆ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಮುಖಂಡರಾದ ಎಸ್.ಎನ್.ಸಿದ್ರಾಮಪ್ಪ ಮಾತನಾಡಿ ತಾಲೂಕಿನ ವಿವಿಧ ಇಲಾಖೆ ಮುಖ್ಯಸ್ಥರು ಪೂರ್ವ ಸಿದ್ಧತಾ ಸಭೆಗೆ ಗೈರು ಹಾಜರಾಗಿ, ಕಚೇರಿ ಸಹಾಯಕರನ್ನು ಕಳಿಸುತ್ತಾರೆ, ಇದು ಸರಿಯಲ್ಲ. ಕಳೆದ ವರ್ಷ ಪೂರ್ವ ಸಿದ್ಧತಾ ಸಭೆಯಲ್ಲೇ ಈ ಲೋಪ ಸರಿಪಡಿಸಿಕೊಳ್ಳುವಂತೆ ಮನವಿ ಮಾಡಿದ್ದರೂ ತಾಲೂಕು ಆಡಳಿತ ಏನೊಂದು ಕ್ರಮ ಕೈಗೊಂಡಿಲ್ಲ, ಕೂಡಲೇ ವಿವಿಧ ಇಲಾಖೆ ಮುಖ್ಯಸ್ಥರು ಸಭೆಗೆ ಹಾಜರಾಗಬೇಕು ಎಂದು ಅಗ್ರಹಿಸಿದರು.ವಿಶೇಷ ಅಲಂಕಾರ, ಮೆರವಣಿಗೆಗಳೊಂದಿಗೆ ಅದ್ಧೂರಿ ಮತ್ತು ಅರ್ಥಪೂರ್ಣ ಜಯಂತಿ ಆಚರಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಛಲವಾದಿ ಸಮಾಜದ ಅಧ್ಯಕ್ಷ ಎಸ್.ಕೆ.ಸ್ವಾಮಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರ ಮತ್ತು ಡಾ.ಬಾಬು ಜಗಜೀವನರಾಂ ರವರ ಜನ್ಮ ದಿನ ಆಚರಣೆಗೆ ಸರ್ಕಾರ ಕೇವಲ ಐದು ಸಾವಿರ ರು.ಗಳ ಅನುದಾನ ನೀಡುತ್ತಿದೆ. ಇದು ಏನೇನು ಸಾಲದು. ಮಿಕ್ಕ ಜಯಂತಿಗಳಿಗೆ ನೀಡಿದ್ದಕ್ಕಿಂತ ಅನುದಾನ ಹೆಚ್ಚು ಕೊಡಬೇಕು ಎಂದು ಒತ್ತಾಯಿಸಿದರು. ಕೆ.ನಾಗರಾಜ್ ಮಾತನಾಡಿ ಪ್ರತಿವರ್ಷ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಆಚರಿಸಲು ಪುರಸಭೆಯಿಂದ ನಿರ್ಥಿಷ್ಟವಾದ ಅರ್ಥಿಕ ನೆರವನ್ನು ಆಯವ್ಯಯದಲ್ಲೇ ಮಂಡಿಸಿ ಕಾದಿರಿಸ ಬೇಕೆಂದು ಆಗ್ರಸಹಿಸಿದರು.

ಮುಖಂಡ ಜಿ.ಟಿ.ರಮೇಶ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ವಿಶೇಷ ವಿದ್ಯುತ್ ದೀಪಗಳು, ಹೂವಿನ ಅಲಂಕಾರ ಮಾಡಬೇಕು ಎಂದು ಹೇಳಿದರು.

ದ.ಸಂ.ಸ.ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಡಾ.ಬಾಬು ಜಗಜೀವನರಾಂ ಪುತ್ಥಳಿನಿರ್ಮಾಣ ಮಾಡಬೇಕು. ಕೋಟೆ ಕ್ಯಾಂಪ್ ನಲ್ಲಿ ಆಯುಷ್ಮಾನ ಆರೋಗ್ಯ ಮಂದಿರ ನಿರ್ಮಿಸಲು ಪುರಸಭೆ ನಿವೇಶನ ಕೊಡಬೇಕೆಂದು ಒತ್ತಾಯಿಸಿದರು.ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಮುಖಂಡರಾದ ಮಹೇಂದ್ರಸ್ವಾಮಿ, ಹಾದಿಕೆರೆ ರಾಜು, ಬಸವರಾಜ್, ಆನಂದ್, ರಾಮಚಂದ್ರಪ್ಪ, ಶಿವಣ್ಣ, ವೈ.ಎಸ್.ಮಂಜಪ್ಪ, ಶಿವರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಇ.ಒ.ಡಾ.ಆರ್.ದೇವೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಇಒ.ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

28ಕೆಟಿಆರ್.ಕೆ.9ಃ ತರೀಕೆರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಪೂರ್ವ ಸಿದ್ದತಾ ಸಭೆ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಅಧ್ಯಕ್ಷತೆಯಲ್ಲಿ ನಡೆಯಿತು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ಮತ್ತಿತರರು ಇದ್ದರು.

Share this article