ಮಾಗಡಿ: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ರಸಗೊಬ್ಬರದ ಕೊರತೆಯಾಗುವ ಆತಂಕ ಎದುರಾಗಿದ್ದು ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಹೇಳಿದರು
ಮಾಗಡಿ: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ರಸಗೊಬ್ಬರದ ಕೊರತೆಯಾಗುವ ಆತಂಕ ಎದುರಾಗಿದ್ದು ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಹೇಳಿದರು.
ತಾಲೂಕಿನ ಮಾನಗಲ್ಲು ಹಾಗೂ ಸೋಣ್ಣೆನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿಗೆ ಕನಿಷ್ಠ 14,000 ಟನ್‌ಗಳಿಗಿಂತ ಹೆಚ್ಚು ಯೂರಿಯಾ ಹಾಗೂ ಇತರ ರಸಗೊಬ್ಬರದ ಅಗತ್ಯವಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರನ್ನು ಒಪ್ಪಿಸಿ, ಮುಂಚಿತವಾಗಿಯೇ ದಾಸ್ತಾನು ಇಟ್ಟುಕೊಂಡು ಸಮರ್ಪಕವಾಗಿ ಹಂಚಿಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಹೇಳಿದರು.
ಸಜ್ಜೇಪಾಳ್ಯದಲ್ಲಿ ಒಕ್ಕಲಿಗರ ಸಂಘದ ಜಮೀನು ಗೊಂದಲ ಕಾನೂನಾತ್ಮಕ ಹಾಗೂ ಸೌಹಾರ್ದಯುತವಾಗಿ ಗೊಂದಲ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ, ಗುತ್ತಿಗೆದಾರ ದೇವರಾಜ್ ಮುಖಂಡರಾದ ಪರಶಿಮಯ್ಯ, ಆನಂದ್, ಮಂಜುನಾಥ್, ನಾಗರಾಜು, ರಂಗಸ್ವಾಮಿ, ಗಂಗಣ್ಣ, ನಾಗಯ್ಯ, ಕೆಂಪತಿಮ್ಮೇಗೌಡ, ನಾಗೇಶ್, ಪ್ರಸಾದ್, ಶಾಂತಯ್ಯ, ಯತೀಶ್, ತುಕರಾಂನಾಯಕ್, ರಮೇಶ್, ಶಿವಲಿಂಗಯ್ಯ, ನಾಗಣ್ಣ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.