ರೋಗ ಬಾರದಂತೆ ಮುಂಜಾಗ್ರತೆ ಮುಖ್ಯ:ಡಾ.ನರಸಿಂಹಮೂರ್ತಿ

KannadaprabhaNewsNetwork |  
Published : Aug 27, 2025, 01:00 AM IST
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗಿ ವಿರೋದ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಅಡೋಕೇಸಿ ಕಾರ್ಯಗಾರವನ್ನು ಡಾ.ನರಸಿಂಹಮೂರ್ತಿ ಉದ್ಘಾಟಿಸಿದರು, | Kannada Prabha

ಸಾರಾಂಶ

ನರಸಿಂಹಾಜಪುರ, ಆರೋಗ್ಯವೇ ಭಾಗ್ಯ. ರೋಗ ಬರುವುದಕ್ಕಿಂತ ಮುಂಚೆ ರೋಗ ಬಾರದಂತೆ ತಡೆಗಟ್ಟುವುದು ಬಹಳ ಮುಖ್ಯ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಒ.ನರಸಿಂಹಮೂರ್ತಿ ಹೇಳಿದರು.

- ಡೆಂಗಿ ವಿರೋದಿ ಮಾಸಾಚರಣೆ ಅಂಗವಾಗಿ ತಾಲೂಕು ಮಟ್ಟದ ಅಡೋಕೇಸಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ನರಸಿಂಹಾಜಪುರ

ಆರೋಗ್ಯವೇ ಭಾಗ್ಯ. ರೋಗ ಬರುವುದಕ್ಕಿಂತ ಮುಂಚೆ ರೋಗ ಬಾರದಂತೆ ತಡೆಗಟ್ಟುವುದು ಬಹಳ ಮುಖ್ಯ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಒ.ನರಸಿಂಹಮೂರ್ತಿ ಹೇಳಿದರು.

ಸೋಮವಾರ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಘೀ ವಿರೋಧ ಮಾಸಾಚರಣೆ ಅಂಗವಾಗಿ ಹಾಸ್ಟೆಲ್‌, ವಸತಿ ಶಾಲಾ ವಾರ್ಡನ್ ಹಾಗೂ ಸಿಬ್ಬಂದಿಗೆ ತಾಲೂಕು ಮಟ್ಟದ ಅಡೋಕೇಸಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಈ ನಿಟ್ಟಿನಲ್ಲಿ ಈ ವರ್ಷದ ಘೋಷವಾಕ್ಯ ಡೆಂಘೀ ಸೋಲಿಸಲು ಹೆಜ್ಜೆಗಳು, ಪರಿಶೀಲಿಸಿ, ಸ್ವಚ್ಛಗೊಳಿಸಿ ಮುಚ್ಚಿಡಿ ಎಂಬ ಅಡಿಯಲ್ಲಿ ಯಾವುದೇ ಜ್ವರ ವಿದ್ದರೂ ನಿರ್ಲಕ್ಷಿಸದೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಡೆಂಘೀ ಕಾಯಿಲೆ ನಿಯಂತ್ರಿಸ ಬಹುದಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬರುವ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಬದಲಾವಣೆ ಕುರಿತು ಅರಿವಿಲ್ಲದೆ ಹದಿಹರೆಯದ ವಯಸ್ಸಿನಲ್ಲಿಯೇ ಗರ್ಭ ಧರಿಸುವುದು, ಕೆಲವು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಪ್ರತಿ ತಿಂಗಳಿಗೆ ಒಮ್ಮೆಯಾದರೂ ಆಪ್ತ ಸಮಾಲೋಚನೆ ನಡೆಸುವುದರೊಂದಿಗೆ ಮಾನಸಿಕ ಖಿನ್ನತೆ ದೂರ ಮಾಡೋಣ ಎಂದು ಕರೆ ನೀಡಿದರು.ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಿನಮನೆ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಮಾತನಾಡಿ, ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಯನ್ನು ಸಾಂಕ್ರಾಮಿಕ ರೋಗ ಎಂದು ಕರೆಯುತ್ತೇವೆ. ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಹಾಸ್ಟೆಲ್ ಅಥವಾ ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಸಿಬ್ಬಂದಿ ಸ್ವಚ್ಛತೆ ಕಡೆ ಗಮನ ಕೊಟ್ಟು ಸೊಳ್ಳೆಗಳ ನಿಯಂತ್ರಣ ಮಾಡುತ್ತಾ ಪ್ರತಿ ಒಬ್ಬರಿಗೂ ಸೊಳ್ಳೆ ಪರದೆ ನೀಡಿ ಹಾಸ್ಟೆಲ್ ವಸತಿ ಶಾಲೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕೆಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ಡೆಂಘೀ ಜ್ವರ, ಡೆಂಘೀ ರಕ್ತಸ್ರಾವ ಜ್ವರ, ಡೆಂಘೀ ಶಾಕ್ ಸಿಂಡ್ರೋಮ್ ಎಂದು ಮೂರು ವಿಧಗಳಿವೆ. ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಲಕ್ಷಣ ಆಧಾರಿತ ಚಿಕಿತ್ಸೆ ಮಾತ್ರ ನೀಡಲು ಸಾಧ್ಯ. ಡೆಂಘೀ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯಬಹುದು ಎಂದು ಸಾಕ್ಷ್ಯ ಚಿತ್ರಗಳ ಮೂಲಕ ಮಾಹಿತಿ ನೀಡಿದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಗವಾನ್ ಸೊಳ್ಳೆಗಳ ನಿಯಂತ್ರಣ ಕುರಿತು ಜೈವಿಕ ರಾಸಾಯನಿಕ ವಿಧಾನಗಳ ಕುರಿತು ಮಾಹಿತಿ ನೀಡಿದರು. ಪ್ರಯೋಗ ಶಾಲಾ ತಂತ್ರಜ್ಞೆ ಸುಜಾತಾ ಎಚ್.ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ದರ್ಶನ್,ಜಿ.ನಾಗೇಂದ್ರಪ್ಪ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಡೈಸಿ, ಆಶಾ ಮೇಲ್ವಿಚಾರಕಿ ಪೂರ್ಣಾವತಿ, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್‌ಕರ್ ಉಪಸ್ಥಿತರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?