ಗರ್ಭಿಣಿಯರು ಆರೋಗ್ಯ ಸುಧಾರಣೆಗೆ ಒತ್ತು ನೀಡಲಿ: ಗಂಗಪ್ಪ

KannadaprabhaNewsNetwork |  
Published : Oct 06, 2026, 02:30 AM IST
ಫೋಟೋವಿವರ- (5ಎಚ್‌ಪಿಟಿ4)ಮರಿಯಮ್ಮನಹಳ್ಳಿಯ ವಾಲ್ಮೀಕಿ ಸಮುದಾಯಲ್ಲಿ ಸೋಮವಾರ ನಡೆದ ಪೊಷಣ್‌ ಅಭಿಯಾನ ಯೋಜನೆಯಡಿ ಪೊಷಣೆ ಮಾಸಾಚಾರಣೆ ದಿನಾಚರಣೆ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಉದ್ಘಾಟಿಸಿದರು | Kannada Prabha

ಸಾರಾಂಶ

ಆರೋಗ್ಯವಂತ ಮಗು ಹಾಗೂ ತಾಯಿ ಮತ್ತು ಮಗುವಿನ ಮರಣದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ರಾಷ್ಟ್ರೀಯ ಪೊಷಣ್‌ ಅಭಿಯಾನ ಜಾರಿಗೆ ಬಂದಿದೆ.

ಮರಿಯಮ್ಮನಹಳ್ಳಿ: ಗರ್ಭಿಣಿಯರ ಆರೋಗ್ಯ ಸುಧಾರಣೆಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಪೊಷಣ್‌ ಅಭಿಯಾನ ಪೂರಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಹೇಳಿದರು.

ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಶೇಷಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ಪೊಷಣ್‌ ಅಭಿಯಾನ ಯೋಜನೆಯಡಿ ಪೊಷಣೆ ಮಾಸಾಚರಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವಂತ ಮಗು ಹಾಗೂ ತಾಯಿ ಮತ್ತು ಮಗುವಿನ ಮರಣದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ರಾಷ್ಟ್ರೀಯ ಪೊಷಣ್‌ ಅಭಿಯಾನ ಜಾರಿಗೆ ಬಂದಿದೆ. ಈ ಯೋಜನೆಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೊಷ್ಠಿಕಾಂಶ ಆಹಾರ ವಿತರಿಸುವುದರೊಂದಿಗೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಗರ್ಭಿಣಿಯರ ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

5 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಪೊಷಣ್‌ ಮಾಸಾಚರಣೆ ಅಭಿಯಾನ ಆರಂಭಿಸಲಾಗಿದೆ. ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಮಕ್ಕಳ ತೂಕ, ಎತ್ತರ ಮಾಪನ ಮಾಡಲಾಗುವುದು. ಅಲ್ಲದೇ ಆರೋಗ್ಯ ತಪಾಸಣೆ, ಆರೋಗ್ಯ, ನೈರ್ಮಲ್ಯ ವಿಷಯ ಪ್ರತಿ ಮನೆಗೆ ಹೋಗಿ ಮಹಿಳೆಯರಿಗೆ ತಿಳಿಸಲಾಗುತ್ತದೆ. ಇದರಿಂದ ಮಹಿಳೆಯರು ಜಾಗೃತಿ ಹೊಂದಲು ಸಹಾಯವಾಗಿದೆ. ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಮುದುಕಪ್ಪ, ಎಸಿಡಿಪಿಒ ವನಮಾಲ, ಹಿರಿಯ ಮೇಲ್ವಿಚಾರಕಿ ಅಂಬುಜಾ, ವಲಯ ಮೇಲ್ವಿಚಾರಕಿ ರೇಣುಕಾ ಯಲ್ಲಮ್ಮ, ಪೊಷಣ್‌ ಅಭಿಯಾನ ಜಿಲ್ಲಾ ಸಹಾಯಕ ಸಂಯೋಜಕ ಅಮೃತ್‌, ತಾಲೂಕು ಸಂಯೋಜಕಿ ನಿವೇದಿತಾ, ಪಪಂ ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ, ಪಪಂ ಕಂದಾಯ ನಿರೀಕ್ಷಕ ರಾಮಪ್ಪ, ಸ್ಥಳೀಯ ವೈದ್ಯ ಡಾ.ರಚನ, ಅಂಗನವಾಡಿ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಕೆ.ನಾಗರತ್ನಮ್ಮ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಅಂಗನವಾಡಿ ಕಾರ್ಯಕರ್ತೆ ಬಿ. ಹುಲಿಗಮ್ಮ ಪ್ರಾರ್ಥಿಸಿದರು. ರೇಣುಕಾ ಯಲ್ಲಮ್ಮ ಸ್ವಾಗತಿಸಿ ನಿರೂಪಿಸಿದರು. ಶಾಂಭವಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ರಕೂಟ ಆಯುರ್ವೇದ ಹಬ್ಬಕ್ಕೆ ವೈಭವದ ಚಾಲನೆ
ಗ್ರಾಮೀಣ ಭಾಗಕ್ಕೆ ಸಿಂಗಲ್ ಪ್ಲಾಟ್ ಅನುಮೋದನೆ ಸುಲಭ