ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಮಹಿಳೆ ಪಾತ್ರ ಅಪಾರ

KannadaprabhaNewsNetwork |  
Published : Oct 06, 2026, 02:30 AM IST
ಕೊಟ್ಟೂರಿನ ಗಂಗೋತ್ರಿ ಕಾಲೇಜಿನಲ್ಲಿ ಅಮ್ಮ ಪ್ರಕಾಶನದವರಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ. ಸುಮಾವಿಜಯ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳೆಗೆ ಪ್ರೋತ್ಸಾಹ ನೀಡುವ ಕೆಲಸ ಮತ್ತಷ್ಟು ಆಗಬೇಕೆನ್ನುವ ಕಾರಣಕ್ಕಾಗಿ ಅಮ್ಮ ಪ್ರಕಾಶನದವರು ಮಹಿಳಾ ಕವಿಗೋಷ್ಠಿ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ

ಕೊಟ್ಟೂರು: ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹಿಳೆಯ ಪಾತ್ರ ಅಪಾರವಾಗಿದೆ ಎಂದು ಹೂವಿನಹಡಗಲಿಯ ರಂಗಭಾರತಿ ಕಾರ್ಯಾದ್ಯಕ್ಷೆ ಎಂ.ಪಿ. ಸುಮಾ ವಿಜಯ್ ಹೇಳಿದರು.

ಇಲ್ಲಿನ ಗಂಗೋತ್ರಿ ಪದವಿ ಮಹಾವಿದ್ಯಾಲಯದಲ್ಲಿ ಹಗರಿಬೊಮ್ಮನಹಳ್ಳಿ ಅಮ್ಮ ಪ್ರಕಾಶನದವರು ಸೋಮವಾರ ಆಯೋಜಿಸಿದ್ದ ವಿಜಯನಗರ ಜಿಲ್ಲಾ ಮಟ್ಟದ ದಸರಾ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುರುಷ ಪ್ರಧಾನ ಶಬ್ದವೇ ಇದೀಗ ಮಸಕಾಗುವ ರೀತಿಯಲ್ಲಿ ಮಹಿಳೆ ಎಲ್ಲ ಬಗೆಯ ಸವಾಲು ಸ್ವೀಕರಿಸಿ ಎದುರಿಸುತ್ತ ತನ್ನ ಸಾಧನೆ ತೋರುತ್ತಿದ್ದಾಳೆ, ಜತೆಗೆ ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸಿ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಕಾರಣರಾಗುತ್ತಿದ್ದಾರೆ ಎಂದರು.

ಸೃಜನಶೀಲತೆ ಸದಾ ಮೈಗೂಡಿಸಿಕೊಂಡು ಹೊಸ ಬಗೆಯಲ್ಲಿ ಸಾಧನೆ ತೋರುತ್ತಿರುವುದು ಹೆಮ್ಮೆಯ ವಿಷಯ, ಮಹಿಳೆಗೆ ಪ್ರೋತ್ಸಾಹ ನೀಡುವ ಕೆಲಸ ಮತ್ತಷ್ಟು ಆಗಬೇಕೆನ್ನುವ ಕಾರಣಕ್ಕಾಗಿ ಅಮ್ಮ ಪ್ರಕಾಶನದವರು ಮಹಿಳಾ ಕವಿಗೋಷ್ಠಿ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.

ಅಮ್ಮ ಪ್ರಕಾಶನದ ಎಂ.ಪಿ.ಎಂ.ಮಂಜುನಾಥ ಪ್ರಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಕಲೆಗಳಲ್ಲಿ ಮಹಿಳೆಗೆ ಉತ್ತಮ ಮಟ್ಟದ ಅವಕಾಶ ದೊರಕುತ್ತಿವೆ. ಈ ಎಲ್ಲ ಬಗೆಯ ಅವಕಾಶ ಬಳಸಿಕೊಂಡು ಮಹಿಳೆ ಎಲ್ಲ ಪ್ರಕಾರಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಅಮ್ಮ ಪ್ರಕಾಶನದಿಂದ ಸಾಹಿತ್ಯ, ಸಂಸ್ಕೃತಿಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾಗೀರಥಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಶಿವನಗುತ್ತಿ ಮಾತನಾಡಿ, ಸೂಕ್ಷ್ಮ ಸಂವೇದನೆ ಮತ್ತು ಸೃಜನಶೀಲತೆ ಮೈಗೂಡಿಸಿಕೊಂಡು ಮಹಿಳೆ ಪ್ರಧಾನ ಪಾತ್ರ ವಹಿಸುತ್ತಿರುವುದು ಎಲ್ಲ ರಂಗದಲ್ಲಿ ಕಂಡುಬರುತ್ತಿದೆ. ಪುರುಷರಿಗಿಂತ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಮಹಿಳೆಗೆ ಇದೆ ಎಂಬುದನ್ನು ಆಗಾಗ ತೋರಿಸುತ್ತಿರುವುದು ಮಹಿಳೆಗಿರುವ ಜವಾಬ್ದಾರಿ ತೋರಿಸುತ್ತದೆ ಎಂದರು.

ಅಮ್ಮ ಪ್ರಕಾಶನ ಅಧ್ಯಕ್ಷೆ ಎಂ.ಪಿ.ಎಂ.ಚೆನ್ನಮ್ಮ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವರಮನಿ ಕರಿಯಪ್ಪ, ಜಿಲ್ಲಾ ಕಾರ್ಯದರ್ಶಿ ಎನ್.ಎಂ. ರವಿಕುಮಾರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಗಮನ ಸೆಳೆದ ಮಹಿಳಾ ಕವಿಗೋಷ್ಠಿ: ಮಹಿಳಾ ಕವಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಲೇಖಕಿ ಸುಧಾ ಚಿದಾನಂದಗೌಡ, ಕಾವ್ಯಗಳೆಂದರೇ ಕೇವಲ ಅಬ್ಬರದ ಶಬ್ದಗಳಿಗೆ ಸೀಮಿತಗೊಂಡಿರದೇ ಸಮಾಜದ ನೋವು ನಲಿವಿಗೆ ಮಿಡಿಯುವ ಅಂಗವಾಗಿದೆ ಎಂದು ಹೇಳಿ ಇದೀಗ ದೊಡ್ಡ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಎ.ಐ.ಅನ್ನೋದು ಅಪಪ್ರಂಶೆಗಳ ಬಂಡಾರವಾಗಿದೆ ಹೊರತು ಸೃಜನಶೀಲತೆ ಸರಿದೂಗಿಸುವ ಸಮತಟ್ಟು ಕೆಲಸ ಖಂಡಿತ ಮಾಡಲಾರದು. ಮನುಷ್ಯರನ್ನು ಎ ನಿಂದ ಬದಲಾಯಿಸಲು ಸಾಧ್ಯವಾಗದು ಎಂದರು. ಮಹಿಳಾ ಕವಯಿತ್ರಿ ಹೊಸಪೇಟೆಯ ನೂರ್ ಜಾಹಾನ್, ಡಾ. ಭಾರತಿ ಮೂಲಿಮನಿ, ಹೂವಿನಹಡಗಲಿಯ ಶೋಭಾ ಮಲ್ತಿ ಒಡೆಯರ್, ನಾಗಮಂಜುಳ ಜೈನ್, ರೇಣುಕಾ, ಶಶಿಕಲಾ, ಶಾಂತ, ಹರಪನಹಳ್ಳಿಯ ಶಶಿಕಲಾ, ಶಾಂತ ಎಚ್. ಹಗರಿಬೊಮ್ಮನಹಳ್ಳಿಯ ರೇಣುಕಾ ತಂಬ್ರಹಳ್ಳಿ, ಶಕುಂತಲಾ ಹೂಗಾರ್, ಸೀತಾ ಹವಲ್ದಾರ್, ಐ .ಜಯಮ್ಮ, ಬಿ.ಕೊಟ್ಟೂರೇಶ್ವರಿ, ಕೊಟ್ಟೂರಿನ ಪದ್ಮಾ ಜಾಗಟಗೇರಿ ಅರುಣಾ ಅಂಚೆ ಕೊಟ್ರೇಶ, ಶಾಂತ ರುದ್ರಪ್ಪ, ಗಂಗಾ, ಜ್ಯೋತಿ ಶ್ಯಾಮರಾಜ್, ಅನಿತಾ, ದಿವ್ಯ ಕರಿಗೌಡ, ಕೆ.ಜಿ.ಎನ್ ಪೂರ್ಣಿಮಾ, ದೀಪಾಶ್ರೀ ಎಸ್. ತಮ್ಮ ಕವಿತೆ ವಾಚಿಸಿದರು. ನಿವೃತ್ತ ಜೀವ ವಿಮಾಧಿಕಾರಿ ಎಂ.ಎಸ್. ಶಿವನಗುತ್ತಿ, ಹೊಂಬಾಳೆ ಮಂಜುನಾಥ, ವಿರೇಶ ತುಪ್ಪದ್, ಹೇಮಾಚಂದ್ರ, ಹಮ್ಮಿಗೆ ಸುರೇಶ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಿವಾಕರ್ ನಾರಾಯಣ, ಶಿಕ್ಷಕ ಬಿ.ಎಂ.ಗಿರೀಶ್ ಸ್ವಾಗತಿಸಿದರು. ಡಾ.ಪಿ.ದಿವಾಕರ್ ನಾರಾಯಣ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ರಕೂಟ ಆಯುರ್ವೇದ ಹಬ್ಬಕ್ಕೆ ವೈಭವದ ಚಾಲನೆ
ಗ್ರಾಮೀಣ ಭಾಗಕ್ಕೆ ಸಿಂಗಲ್ ಪ್ಲಾಟ್ ಅನುಮೋದನೆ ಸುಲಭ