29ರಂದು ‘ಕೊಡವ ಸಾಹಿತ್ಯ ನಾಳ್‌ ’ ಪೂರ್ವಭಾವಿ ಸಭೆ

KannadaprabhaNewsNetwork |  
Published : Sep 02, 2024, 02:11 AM IST
ಚಿತ್ರ :  1ಎಂಡಿಕೆ3 : ಕೊಡವ ಸಾಹಿತ್ಯ ಅಕಾಡೆಮಿಯ‌ ಅಜ್ಜಿನಿಕಂಡ ಮಹೇಶ್ ನಾಚಯ್ಯ  ಮಾತನಾಡಿದರು.  | Kannada Prabha

ಸಾರಾಂಶ

ಕೊಡವ ಸಾಹಿತ್ಯ ಅಕಾಡೆಮಿಯ ಅಜ್ಜಿನಿಕಂಡ ಮಹೇಶ್‌ ನಾಚಯ್ಯ ಉದ್ದೇಶ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಚೇರಂಬಾಣೆ ಕೊಡವ ಸಮಾಜ ಅಧ್ಯಕ್ಷ ಬಾಚರಣಿಯಂಡ ದಿನೇಶ್‌ ಗಣಪತಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ ಜನ್ಮ ದಿನೋತ್ಸವವನ್ನು ಸೆ.28ರಂದು ಚೇರಂಬಾಣೆಯಲ್ಲಿ ‘ಕೊಡವ ಸಾಹಿತ್ಯ ನಾಳ್’ ಎಂಬ ಹೆಸರಿನಲ್ಲಿ ಆಚರಿಸಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಸಿದ್ದತೆ ನಡೆಸುತ್ತಿದ್ದು, ಈ ಸಂಬಂಧ ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜದಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಯಿತು.

ಚೇರಂಬಾಣೆ ಕೊಡವ ಸಮಾಜ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ‌ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸಾಹಿತ್ಯ ನಾಳ್‌’ ಉದ್ದೇಶ ಹಾಗೂ ಮಹತ್ವದ ಬಗ್ಗೆ ತಿಳಿಸಿದರು.

ಕೊಡವ ಸಾಹಿತ್ಯ ದಿನವನ್ನು ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಅದ್ಧೂರಿಯಾಗಿ ನಡೆಸುವಂತೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.

ಸಾವಿರಕ್ಕೂ ಅಧಿಕ ಜನರ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿರುವ ಕಾರ್ಯಕ್ರಮದಲ್ಲಿ ಚೇರಂಬಾಣೆ ಪಟ್ಟಣದಲ್ಲಿ ಅದ್ದೂರಿ ಸಾಂಸ್ಕೃತಿಕ ಮೆರವಣಿಗೆ ನಡೆಸಲಾಗುವುದು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಅಪ್ಪಚ್ಚಕವಿಗಳ ವಿಚಾರದಲ್ಲಿ ವಿಷಯ ಮಂಡನೆ, ಹಾಡುಗಾರಿಕೆ, ಹಲವು ಸ್ಪರ್ಧೆಗಳನ್ನು ಏರ್ಪಡಿಸುವಂತಾಯಿತು. ಸಭೆಯಲ್ಲಿ ಕಾರ್ಯವನ್ನು ‍ನಡೆಸಲು ಅನುಕೂಲವಾಗುವಂತೆ ಹಲವು ಸಮಿತಿಗಳನ್ನು ರಚಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಚಿವರು, ಸಂಸದರು, ಶಾಸಕರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಬೇಂಗ್ ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷರಾಗಿದ್ದ ಕುಟ್ಟೇಟಿರ ಕುಂಞ್ಞಪ್ಪ ಸಮಾಜದ ಕಾರ್ಯದರ್ಶಿ ಕೇಕಡ ರೋಮಿ, ಕ್ಲಬ್ ಅಧ್ಯಕ್ಷ ಕುಶ, ಬೆಂಗಳೂರು ಕೊಡವ ಸಮಾಜದ ಜಂಟಿ ಖಜಾಂಚಿ ಪೊನ್ನಚೆಟ್ಟಿರ ರಮೇಶ್ ಗಣಪತಿ, ಚಿತ್ರಕಲಾವಿದ ತೇಲಪಂಡ ಪವನ್, ಮಡಿಕೇರಿ ಪುರಸಭಾ ಮಾಜಿ ಅಧ್ಯಕ್ಷ ಪಟ್ಟಮಡ ಡಿ. ಪೊನ್ನಪ್ಪ, ಕಲ್ಮಾಡಂಡ ಉತ್ತಯ್ಯ, ಮಂಗೇರಿರ ಕುಂಞ್ಞಪ್ಪ, ಕುಂಚೆಟ್ಟಿರ ಅಜಿತ್, ಮಂದಪಂಡ ಸುಬ್ಬಯ್ಯ, ತೇಲಪಂಡ ಸತ್ಯ, ತೇಲಪಂಡ ಲಕ್ಷ್ಮಿ, ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್, ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಗಣೇಶ, ಪಾನಿಕುಟ್ಟಿರ ಕುಟ್ಟಪ್ಪ, ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್, ಸಮಾಜದ ಆಡಳಿತ ಮಂಡಳಿಯ ಸರ್ವ ನಿರ್ದೇಶಕರು, ಸದಸ್ಯರು ಹಾಜರಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ