ಲಕ್ಷ್ಮೇಶ್ವ ರ: ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ 12ನೇ ಶತಮಾನದಲ್ಲಿ ಶರಣರು ತಮ್ಮ ವಚನ ಹಾಗೂ ನಡೆ ನುಡಿಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ರಮೇಶ ನವಲೆ ಹೇಳಿದರು.
ಸಂಪ್ರದಾಯವೆಂದರೆ ನಮ್ಮ ನಂಬಿಕೆ, ಸಮಾಜ, ಸಮುದಾಯ, ನಾಡು, ಆಚರಣೆಗಳು, ಹಬ್ಬ ಹರಿದಿನಗಳು. ಸಂಪ್ರದಾಯದ ದೊಡ್ಡ ಕೆಲಸವೆಂದರೆ ಒಂದು ಸಮುದಾಯ ಒಗ್ಗಟ್ಟಾಗಿ ಇಡುತ್ತದೆ. ಆಧುನಿಕತೆಯೆಂದರೆ ಪ್ರಗತಿ, ಶಿಕ್ಷಣ, ಬದಲಾವಣೆ ಅಭಿವೃದ್ಧಿ ಇದು ಆಧುನಿಕತೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಬಂಡಾಯ ಸಾಹಿತಿ ಸಿ.ಜಿ .ಹಿರೇಮಠ ಮಾತನಾಡಿ, ಸಂಪ್ರದಾಯದ ಜತೆಗೆ ಆಧುನಿಕತೆ ಬೇಕೆ ಬೇಕು, ಎರಡನ್ನು ಪ್ರೀತಿಯಿಂದ ಸ್ವೀಕಾರ ಮಾಡ್ಕೋಬೇಕು, ಸಂಪ್ರದಾಯ ಜಡತ್ವದ ಸಂಕೇತ, ಅತಿಯಾಗಿ ಸಂಪ್ರದಾಯದ ಮೇಲೆ ಅವಲಂಬನೆ ಆಗಬಾರದು. ಕೆಲವು ಮೂಢನಂಬಿಕೆ ಸಂಪ್ರದಾಯವಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.ಈ ವೇಳೆ ಪತ್ರಕರ್ತ ಅಶೋಕ ಸೊರಟೂರ, ಶಿವಲಿಂಗಯ್ಯ ಹೊತಗಿಮಠ, ಸೋಮಣ್ಣ ಯತ್ತಿನಹಳ್ಳಿ, ಶಿಕ್ಷಕ ಸಚ್ಚಿದಾನoದ ಹಿರೇಮಠ ಮಾತನಾಡಿದರು.
ಅರುಂಧತಿ ಬಿಂಕದಕಟ್ಟಿ ಪ್ರಾಥಿಸಿದರು, ನಂದಿನಿ ಮಾಳವಾಡ ಸ್ವಾಗತಿಸಿದರು, ರತ್ನಾ ಕರ್ಕಿ ನಿರೂಪಿಸಿದರು, ಜಯಶ್ರೀ ಮತ್ತಿಕಟ್ಟಿ ವಂದಿಸಿದರು.